ಸಂತೇಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ವೀರಶೈವ ಬಳಗದ ವತಿಯಿಂದ ಭಾನುವಾರ ಬಸವ ಜಯಂತಿ ಆಚರಿಸಲಾಯಿತು.

ಗ್ರಾಮದಲ್ಲಿರುವ ಬಸವೇಶ್ವರ ನಾಮಫಲಕಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಪುಷ್ಬಾರ್ಚನೆ ಮಾಡಿದರು.ಪಿಎಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ರವೀಶ್ ಮಾತನಾಡಿ, ‘ಬಸವಣ್ಣ ಈ ದೇಶದ ಮಹಾನ್ ಚೇತನ. ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕ. 11ನೇ ಶತಮಾನದಲ್ಲಿ ಇವರು ನೀಡಿದ ವಚನಗಳು ಇಂದಿಗೂ ಪರಿಣಾಮ ಬೀರುತ್ತಿವೆ. ಹೀಗಾಗಿ ಇವರ ಆದರ್ಶಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಬಾಣಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣಸ್ವಾಮಿ ಮಾತನಾಡಿ, ‘ವಿಶ್ವದಾದ್ಯಂತ ಬಸವಣ್ಣನವರ ತತ್ವಗಳು ಬಳಕೆಯಾಗುತ್ತಿದೆ. ಅವರನ್ನು ಜಾತಿಗೆ ಸೀಮಿತಗೊಳಿಸದೇ ಸಾಮಾಜಿಕ ನಾಯಕರನ್ನಾಗಿ ನೋಡಬೇಕು. ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರು ಆದರ್ಶವಾಗಬೇಕು’ ಎಂದು ತಿಳಿಸಿದರು.

ಪಟೇಲ್ ನಾಗರಾಜು, ಗೌಡ್ರು ರಾಜೇಂದ್ರಪ್ಪ, ಟಿ.ಎಂ. ಕುಮಾರ್, ರಮೇಶ್, ನಾಗ, ಸೋಮಣ್ಣ, ಅಶೋಕ್, ಟಿ.ಸಿ.ನಾಗೇಶ್, ಸುಗಂಧರಾಜು, ಲೋಕೇಶ್, ದೇವರಾಜು, ಮೂರ್ತಿ, ಗುರುಪಾದಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-37-356579153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.