ಕೊಳ್ಳೇಗಾಲ: ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಸ್ಮಾರಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಸಮುದಾಯದ ವಿಚಾರ ಬಂದರೆ ಯಾರಿಗೂ ತಲೆಬಾಗದೆ ಸಮುದಾಯದ ಪರ ನಿಂತು ಕೆಲಸ ಮಾಡಿ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಇಲ್ಲಿನ ಅಂಬೇಡ್ಕರ್ ಸಂಘ ಇಡೀ ತಾಲ್ಲೂಕಿಗೆ ಮಾದರಿ ಸಂಘವಾಗಬೇಕು ಮತ್ತು ಪ್ರತಿಯೊಂದು ತಾಲ್ಲೂಕಿನಲ್ಲೂ ಅಂಬೇಡ್ಕರ್ ಸಮುದಾಯ ಭವನ ಹಾಗೂ ಪ್ರತಿಮೆಗಳು ನಿರ್ಮಾಣ ಆಗಬೇಕು. ಸಮುದಾಯ ಭವನಗಳು ನಿರ್ಮಾಣವಾದರೆ ನಮ್ಮ ಸಮುದಾಯದವರಿಗೆ ಅನುಕೂಲವಾಗುತ್ತದೆ. ಅದರಲ್ಲೂ ನಮ್ಮ ಮಕ್ಕಳು ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ಆಗುವ ಬದಲು ಕಡಿಮೆ ಬೆಲೆಯಲ್ಲಿ ನಮ್ಮ ಭವನದಲ್ಲಿ ಮದುವೆಯಾಗುವುದೇ ಉತ್ತಮ ಎಂದು ಹೇಳಿದರು.

ನನಗೆ 19 ವರ್ಷ ವನವಾಸ ಮುಕ್ತಿ ಆದ ಬಳಿಕ ಮತ್ತೆ ಶಾಸಕನಾದೆ. ಅದೇ ರೀತಿ ಇಲ್ಲಿನ ಅಂಬೇಡ್ಕರ್ ಭವನಕ್ಕೆ 21 ವರ್ಷ ವನವಾಸ ಆಗಿದೆ, ಹಾಗಾಗಿ ಈ ವರ್ಷ ಈ ಭವನದ ಕಾಮಗಾರಿಯನ್ನು ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು. ಈಗಾಗಲೇ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನವನ್ನು ತರುವ ಮೂಲಕ ಭವನ ಉದ್ಘಾಟನೆ ಕಾಮಗಾರಿಗೆ ಜವಾಬ್ದಾರಿ ವಹಿಸುತ್ತೇನೆ. ನೀವು ಕೊಟ್ಟ ಮತ ಭಿಕ್ಷೆಯಿಂದ ನಾನು ಇಲ್ಲಿ ಬಂದು ಶಾಸಕನಾಗಿ ಮಾತನಾಡುತ್ತಿದ್ದೇನೆ. ಕಾನೂನಾತ್ಮಕವಾಗಿ ಈ ಸಂಘದಲ್ಲಿ ಚುನಾವಣೆ ನಡೆದು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಯಾಗಿದೆ. ಹಾಗಾಗಿ ಈ ಸಂಘ ಅಧಿಕೃತವಾದ ಸಂಘವಾಗಿದೆ. ಬೇರೆ ಯಾರೂ ಈ ಸಂಘದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇದು ಸರ್ಕಾರದಿಂದ ಆಗಿರುವ ಸಂಘ ನಿಮ್ಮ ಸಂಘದ ಜೊತೆ ಸದಾ ನಾನು ಇರುತ್ತೇನೆ. ಅಂಬೇಡ್ಕರ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆನಂದ್ ಮೂರ್ತಿ ಅವರು ಸಂಘವನ್ನು ನಡೆಸಿಕೊಂಡು ಹೋಗಬೇಕು, ಅವರೊಂದಿಗೆ ಜೊತೆ ಇಡೀ ಸಮುದಾಯ ಇರುತ್ತದೆ ಎಂದರು.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ರಾಜಕೀಯ ಕೈವಾಡಗಳಿಂದ 21 ವರ್ಷವಾದರು ಸಹ ಇನ್ನೂ ಈ ಭವನ ಉದ್ಘಾಟನೆಯಾಗದಿರುವುದು ಬೇಸರದ ವಿಷಯ. ಹಾಗಾಗಿ ಈ ವರ್ಷ ಈ ಸಮುದಾಯ ಭವನ ಉದ್ಘಾಟನೆ ಆಗಲೇಬೇಕು. ಇದಕ್ಕೆ ಶಾಸಕರು ಹೆಚ್ಚಿನ ಅನುದಾನವನ್ನು ನೀಡಲೇಬೇಕು. ಇದು ನಮ್ಮ ಸಮುದಾಯದ ಆಸ್ತಿ ಹಾಗಾಗಿ ನಾವು ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದರು.

ಯಾರಿಗೂ ಗುಲಾಮರಾಗಿ ಬದುಕಬೇಡಿ, ಸ್ವಾಭಿಮಾನದಿಂದ ಬದುಕಿ. ನೂತನವಾಗಿ ಆಯ್ಕೆಯಾಗಿರುವ ಆನಂದ್ ಮೂರ್ತಿ ಅವರು ರಾಜಕೀಯಕ್ಕೆ ಬರುವುದು ಬೇಡ. ಈಗಾಗಲೇ ಅನೇಕ ಅಧಿಕಾರಿಗಳು ರಾಜಕೀಯಕ್ಕೆ ಬಂದು ಹಣ ಕಳೆದುಕೊಂಡು ಹೋಗಿದ್ದಾರೆ. ನೀವು ಒಬ್ಬ ಎಂಜಿನಿಯರ್ ಆಗಿ ಉತ್ತಮ ಸೇವೆ ಸಲ್ಲಿಸಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೀರಿ, ನೀವು ಸಮಾಜ ಸೇವೆ ಮಾಡಿಕೊಂಡು ಹೋದರೆ ಸಾಕು ಎಂದರು.

ಪದಗ್ರಹಣ: ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದ್ ಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹ ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್ ಅವರಿಗೆ ಶಾಸಕರು ಅಧಿಕಾರ ಹಸ್ತಾಂತರ ಮಾಡಿ ಪದಗ್ರಹಣ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಸದಸ್ಯ ಮಂಜುನಾಥ್, ರಾಘವೇಂದ್ರ, ದೇವಾನಂದ, ಸ್ವಾಮಿ ನಂಜಪ್ಪ, ವಕೀಲ ಮೋಹನ್ ಕುಮಾರ್, ಮುಖಂಡ ರಮೇಶ್, ಚಿಕ್ಕ ಮಾಳಿಗೆ, ನಟರಾಜು, ಸೋಮಶೇಖರ್, ಸಿದ್ದಾರ್ಥ್, ಸಿದ್ದಪ್ಪಾಜಿ, ಕೃಷ್ಣ, ಹರೀಶ್, ದಿಲೀಪ್, ಸೇರಿದಂತೆ ನೂರಾರು ಮಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.