ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

386 ಪ್ರಕರಣ ದೃಢ, ನಾಲ್ವರು ಸಾವು, 242 ಮಂದಿ ಗುಣಮುಖ

Last Updated 1 ಮೇ 2021, 16:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 1,779 ಕೋವಿಡ್‌ ಪರೀಕ್ಷೆಗಳ ವರದಿ ಬಂದಿದ್ದು, 1,325 ವರದಿಗಳು ನೆಗಟಿವ್‌ ಬಂದಿವೆ. 454 ಪ್ರಕರಣಗಳು ದೃಢಪಟ್ಟಿವೆ. 68 ಪ್ರಕರಣಗಳಲ್ಲಿ ಸೋಂಕಿತರನ್ನು ಇನ್ನಷ್ಟೇ ಪತ್ತೆ ಮಾಡಬೇಕಾಗಿದೆ ಎಂದು ಜಿಲ್ಲಾಡಳಿತ ಹೇಳಿದ್ದು, ವರದಿಯಲ್ಲಿ 386 ಹೊಸ ಪ್ರಕರಣಗಳನ್ನು ಉಲ್ಲೇಖಿಸಿದೆ.

29 ವರ್ಷದ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 242 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,456ಕ್ಕೆ ಏರಿದೆ. ಈ ಪೈಕಿ 1,697 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ ಇರುವವರ ಸಂಖ್ಯೆ 48ಕ್ಕೆ ಇಳಿದಿದೆ.

ಶನಿವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣ 11,390ಕ್ಕೆ ಏರಿದೆ. ಸಮಾಧಾನದ ಸಂಗತಿ ಎಂದರೆ ದಿನದಿಂದ ದಿನಕ್ಕೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮೂರುದಿನಗಳಿಂದ ಪ್ರತಿ ದಿನ 200ಕ್ಕೂ ಹೆಚ್ಚು ಮಂದಿ ಸೋಂಕು ಮುಕ್ತರಾಗುತ್ತಿದ್ದು, ಶನಿವಾರ 242 ಮಂದಿ ಗುಣಮುಖರಾಗಿದ್ದಾರೆ. ಇವರೆಲ್ಲರೂ ಹೋಂ ಐಸೊಲೇಷನ್‌ನಲ್ಲಿದ್ದವರು. ಈವರೆಗೆ 8,776 ಮಂದಿ ಗುಣಮುಖರಾಗಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಧನಗೆರೆ ಗ್ರಾಮದ 29 ವರ್ಷದ ಮಹಿಳೆ ಏ.18ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ 30ರಂದು ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡಹುಂಡಿ ಗ್ರಾಮದ 50 ವರ್ಷದ ಪುರುಷ, ಚಾಮರಾಜನಗರದ 56 ವರ್ಷದ ಮಹಿಳೆ, ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಗ್ರಾಮದ 32 ವರ್ಷದ ಯುವಕ ಮೃತಮಟ್ಟ ಇತರರು.

ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 151ಕ್ಕೆ ಏರಿದೆ. ಇದಲ್ಲದೇ 20 ಮಂದಿ ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟಿದ್ದಾರೆ.

ಕೊಳ್ಳೇಗಾಲದಲ್ಲಿ ಹೆಚ್ಚು: ಶನಿವಾರ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 107 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರದಲ್ಲಿ 105, ಗುಂಡ್ಲುಪೇಟೆಯಲ್ಲಿ 87, ಹನೂರು ತಾಲ್ಲೂಕಿನಲ್ಲಿ 58 ಮತ್ತು ಯಳಂದೂರು ತಾಲ್ಲೂಕಿನಲ್ಲಿ 29 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT