ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿ ರಂಗನಬೆಟ್ಟ–ಕೆ.ಗುಡಿ ರಸ್ತೆಯಲ್ಲಿ ವ್ಯಾಘ್ರನ ದರ್ಶನ

Last Updated 6 ಡಿಸೆಂಬರ್ 2020, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಕೆ.ಗುಡಿ– ಬಿಳಿಗಿರಿರಂಗನಬೆಟ್ಟ ರಸ್ತೆ ಬದಿಯಲ್ಲಿ ಹುಲಿಯೊಂದು ಪ್ರವಾಸಿಗರಿಗೆ ದರ್ಶನ ನೀಡಿದ ವಿಡಿಯೊವೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಬಿಆರ್‌ಟಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ಪ್ರವಾಸಿಗರಿಗೆ ಕಾಣಸಿಗುವುದು ಬಹಳ ಅಪರೂಪ. ಹಗಲು ಹೊತ್ತಿನಲ್ಲಿ ವಾಹನಗಳ ಸಂಚಾರ ಇರುವ ಕೆ.ಗುಡಿ ರಸ್ತೆ ಬದಿಯಲ್ಲಿ ಹುಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿರಲಿಲ್ಲ.

ಶನಿವಾರ ಸಂಜೆ ಪ್ರವಾಸಿಗರ ವಾಹನವೊಂದು ರಸ್ತೆಯಲ್ಲಿ ಸಾಗುತ್ತಿರುವ ಹುಲಿಯೊಂದು ರಸ್ತೆಯತ್ತ ಬರುತ್ತಿರುವುದು ಕಂಡು ಬಂದಿದೆ.ವಾಹನವನ್ನು ಕಂಡ ವ್ಯಾಘ್ರ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು ನಂತರ ವಾಪಸ್‌ ಕಾಡೊಳಕ್ಕೆ ಹೋಗುವ ದೃಶ್ಯವನ್ನು ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಅವರು ಈ ವಿಡಿಯೊವನ್ನು ಮಾಧ್ಯಮ ಪ್ರತಿನಿಧಿಗಳಿರುವ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT