ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಟಿಪ್ಪು ಜಯಂತಿ ಆಚರಣೆ

Last Updated 12 ನವೆಂಬರ್ 2019, 12:34 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು.

ಜೊತೆಗೆ ಅಬುಲ್‌ ಕಲಾಂ ಆಜಾದ್‌ ಅವರ ಜನ್ಮ ದಿನಾಚರಣೆಯನ್ನೂ ಆಚರಿಸಲಾಯಿಸಲಾಯಿತು. ಶಾಸಕ ಪುಟ್ಟರಂಗಶೆಟ್ಟಿ ಸೇರಿದಂತೆ ಗಣ್ಯರು ಇಬ್ಬರ ಭಾವಚಿತ್ರಕ್ಕೂ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ ಅವರು, ‘ಟಿಪ್ಪು ಸುಲ್ತಾನ್ ಒಬ್ಬ ದೇಶಭಕ್ತ. ತನ್ನ ಆಳ್ವಿಕೆಯ ಕಾಲದಲ್ಲಿ ನಾಡಿಗೆಉತ್ತಮ ಕೊಡುಗೆಗಳನ್ನು ನೀಡಿದ್ದಾರೆ’ ಎಂದರು.

‘ಅಬುಲ್‌ ಕಲಾಂ ಆಜಾದ್‌ಅವರುದೇಶದಸ್ವಾತಂತ್ರ್ಯ ಸಂಗ್ರಾಮ ಮತ್ತುಶಿಕ್ಷಣ ಕ್ಷೇತ್ರಕ್ಕೆನೀಡಿರುವಕೊಡುಗೆ ಅನನ್ಯ. ಭಾರತದ ಮೊದಲ ಶಿಕ್ಷಣ ಸಚಿವರಾದ ಆಜಾದ್ ವಿದ್ವಾಂಸರಾಗಿದ್ದರು. ದೇಶಕ್ಕಾಗಿ ದುಡಿದು ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಹೊಂದಬೇಕೆಂದುಬಯಸಿದ್ದರು’ ಎಂದು ಹೇಳಿದರು.

‘ಆಜಾದ್ ಅವರುಅನೇಕಕಾನೂನುಗಳನ್ನು ಜಾರಿಗೆ ತಂದುಪ್ರತಿಯೊಬ್ಬರೂವಿದ್ಯಾವಂತರಾಗಲು ಕಾರಣರಾದರು. ಅದನ್ನು ನೆನಪಿಸಿಕೊಂಡು ಅವರ ಆದರ್ಶ ಮಾರ್ಗಗಳಲ್ಲಿ ನಡೆಯಬೇಕು. ಇಂತಹದಾರ್ಶನಿಕರಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದುಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಗುರುಸ್ವಾಮಿ, ಮಹಮ್ಮದ್ ಅಸ್ಗರ್, ಕೆಪಿಸಿಸಿ ಸದಸ್ಯ ಸೈಯದ್‌ ರಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್.ಮಹದೇವ್, ಮುಖಂಡರಾದ ಕಾಗಲವಾಡಿ ಶಿವಸ್ವಾಮಿ, ನಸ್ರುಲ್ಲಾ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT