ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದೆ. ಹಣ್ಣು ಹಾಗೂ ಮಾಂಸಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ. ಹೂವುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ.

ತರಕಾರಿಗಳ ಪೈಕಿ ಟೊಮೆಟೊ, ಬೀನ್ಸ್, ಕ್ಯಾರೆಟ್, ಬದನೆಕಾಯಿ, ಹಸಿಮೆಣಸಿನಕಾಯಿಗಳ ಬೆಲೆ ಹೆಚ್ಚಾಗಿದೆ. ಅವರೆಕಾಯಿ, ತೊಗರಿಕಾಯಿ ಬೆಲೆಯಲ್ಲಿ ಇಳಿಮುಖವಾಗಿದೆ. ಉಳಿದ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಾಪ್ಕಾಮ್ಸ್ನಲ್ಲಿ ಕಳೆದ ವಾರ ಟೊಮೆಟೊ ಕೆ.ಜಿ.ಗೆ ₹ 20 ಕುಸಿದು ₹ 60ಕ್ಕೆ ತಲುಪಿತ್ತು. ಈ ವಾರ, ಮತ್ತೆ ₹ 20 ಹೆಚ್ಚಾಗಿ ₹ 80 ಆಗಿದೆ.

ಹಲವು ವಾರಗಳಿಂದ ಸ್ಥಿರವಾಗಿದ್ದ ಬೀನ್ಸ್ ಬೆಲೆ ಈ ವಾರ ಹೆಚ್ಚಾಗಿದೆ. ₹ 60 ಇದ್ದ ಬೆಲೆ ₹ 20 ಹೆಚ್ಚಾಗಿ ₹ 80ಕ್ಕೆ ತಲುಪಿದೆ. ಹಸಿಮೆಣಸಿನಕಾಯಿ ಬೆಲೆ ಕೂಡ ಕೆ.ಜಿ.ಗೆ ₹ 20 ಹೆಚ್ಚಾಗಿ ₹ 80 ಆಗಿದೆ.₹ 40 ಇದ್ದ ಕ್ಯಾರೆಟ್ ಧಾರಣೆ ₹ 60ಕ್ಕೆ ಏರಿದೆ. ಬದನೆಕಾಯಿ ₹ 10 ತುಟ್ಟಿಯಾಗಿದೆ. ಹೋದ ವಾರ ₹ 50 ಇತ್ತು.

ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿರುವ ಅವರೆಕಾಯಿ, ತೊಗರಿಕಾಯಿ ಬೆಲೆ ಈ ವಾರ ಕುಸಿದಿದೆ. ಎರಡೂ ಕೆ.ಜಿ.ಗೆ ₹ 60ಕ್ಕೆ ಸಿಗುತ್ತಿದೆ.ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಪೈಕಿ ಮೂಸಂಬಿಯ ಬೆಲೆ ಮಾತ್ರ ಕೆ.ಜಿ.ಗೆ ₹ 10 ಹೆಚ್ಚಾಗಿದೆ. ಕಳೆದ ವಾರ ₹ 70 ಇತ್ತು. ಈ ವಾರ ₹ 80 ಇದೆ.

ಸೇಬು (₹ 120),ಕಿತ್ತಳೆ (₹ 80), ದ್ರಾಕ್ಷಿ (₹ 120), ದಾಳಿಂಬೆ (₹ 140) ಸೇರಿದಂತೆ ಇತರ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ.

ಕಾಕಡ, ಸುಗಂಧರಾಜಕ್ಕೆ ಬೇಡಿಕೆ: ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆಯಲ್ಲಿ ಕೊಂಚ ಏರಿಳಿತ ಕಂಡು ಬಂದಿದೆ. ಕಾಕಡ, ಸುಗಂಧರಾಜ ಹೂವುಗಳಿಗೆ ಕೊಂಚ ಬೇಡಿಕೆ ಸೃಷ್ಟಿಯಾಗಿದ್ದು, ಕಳೆದ ವಾರಕ್ಕಿಂತ ಸ್ವಲ್ಪ ದುಬಾರಿಯಾಗಿವೆ.

ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆ.ಜಿ.ಗೆ ₹ 500ರಿಂದ ₹ 600ವರೆಗೆ ಇತ್ತು. ಕಳೆದ ವಾರ ₹ 120 ಇದ್ದ ಕೆ.ಜಿ. ಕಾಕಡಕ್ಕೆ ಈ ವಾರ ₹ 140ರಿಂದ ₹ 160ರವರೆಗೆ ಬೆಲೆ ಇದೆ.

ಸೇವಂತಿಗೆ ಧಾರಣೆ ಕಳೆದ ವಾರದಷ್ಟೇ ಇದೆ (₹100–₹120). ಸುಂಗಧರಾಜದ ಬೆಲೆ ₹ 100ಕ್ಕೆ ಏರಿದೆ. ಹೋದ ವಾರ ₹ 60 ಇತ್ತು. ಚೆಂಡು ಹೂವಿನ ಬೆಲೆ ₹ 80 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.