ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಅಗ್ಗ, ಬೀನ್ಸ್‌, ಬೆಳ್ಳುಳ್ಳಿ ತುಟ್ಟಿ

ಹಣ್ಣು, ಮಾಂಸದ ಬೆಲೆ ಯಥಾಸ್ಥಿತಿ, ಹೂವುಗಳಿಗೆ ಬೇಡಿಕೆ ಹೆಚ್ಚಳ
Last Updated 27 ಜೂನ್ 2022, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಹಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಟೊಮೆಟೊ ಬೆಲೆ ಇಳಿದಿದೆ.

ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್‌ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಸೋಮವಾರ ಮಾರುಕಟ್ಟೆಗೆ ಬೀನ್ಸ್ ಬಂದಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಬೀನ್ಸ್‌ಗೆ ₹70ರಿಂದ ₹80 ಬೆಲೆ ಇತ್ತು. ಕಳೆದ ವಾರ ಕೆಜಿಗೆ ₹40 ಇತ್ತು.

ಮಳೆ ಕಡಿಮೆಯಾಗಿರುವುದರಿಂದ ಟೊಮೆಟೊ ಬೆಳೆ ಚೆನ್ನಾಗಿದ್ದು, ಮಾರುಕಟ್ಟೆಗೆ ಹೆಚ್ಚು ಆವಕವಾಗುತ್ತಿದೆ. ಆದ್ದರಿಂದ ಬೆಲೆಯೂ ಇಳಿದಿದೆ. ಕಳೆದ ವಾರ ₹50 ಇದ್ದ ಟೊಮೆಟೊ ಧಾರಣೆ ಈ ವಾರ ₹20 ಕಡಿಮೆಯಾಗಿ, ₹30ಕ್ಕೆ ತಲುಪಿದೆ.

ಬೆಳ್ಳುಳ್ಳಿ,ಕ್ಯಾರೆಟ್‌, ಹಸಿಮೆಣಸಿನಕಾಯಿ, ಆಲೂಗಡ್ಡೆ, ಶುಂಠಿ, ಸೌತೆಕಾಯಿಗಳ ಬೆಲೆಯಲ್ಲೂ ಏರಿಕೆಯಾಗಿದೆ.

ಬೆಳ್ಳುಳ್ಳಿ ಕೆಜಿಗೆ ₹20 ಹೆಚ್ಚಾಗಿ ₹60 ಆಗಿದೆ. ಉಳಿದವುಗಳ ಬೆಲೆ ₹10 ಏರಿಕೆಯಾಗಿದೆ.

ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೆಜಿಗೆ ₹80 ಇದ್ದ ದ್ರಾಕ್ಷಿ ಈಗ ₹100 ಆಗಿದೆ. ಸೇಬು (₹180), ಕಿತ್ತಳೆ (₹120), ದಾಳಿಂಬೆ (‌₹160), ಕಲ್ಲಂಗಡಿಗಳ (₹20) ಬೆಲೆ ಸ್ಥಿರವಾಗಿದೆ.

ಬಾಳೆಹಣ್ಣುಗಳಿಗೆ ಬೇಡಿಕೆಯಿದ್ದು, ಬೆಲೆ ಇಳಿದಿಲ್ಲ. ಚಂದ್ರ ಬಾಳೆಯೂ ಹೆಚ್ಚಿನ ಪ‍್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಕೆಜಿಗೆ ₹‌40 ಇದೆ. ಪಚ್ಚಬಾಳೆ ಆವಕ ಕಡಿಮೆಯಾಗಿರುವುದರಿಂದ ಬೆಲೆಯೂ ಹೆಚ್ಚಿದೆ. ಅದಕ್ಕೂ ಕೆಜಿಗೆ ₹40 ಕೊಡಬೇಕು.

ಮಾಂಸ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ (ಒಂದಕ್ಕೆ ₹6), ಚಿಕನ್‌ (₹230) ಹಾಗೂ ಮಟನ್‌ (₹560) ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಹೂವುಗಳಿಗೆ ಬೇಡಿಕೆ: ಎರಡು ವಾರಗಳಿಂದ ಹೂವುಗಳಿಗೆ ಬೇಡಿಕೆ ಕಡಿಮೆ ಇತ್ತು. ಮಂಗಳವಾರ ಅಮಾವಾಸ್ಯೆ ಇರುವುದರಿಂದ ಕನಕಾಂಬರ ಬಿಟ್ಟು ಎಲ್ಲ ಹೂವುಗಳಿಗೂ ಬೇಡಿಕೆ ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ಸೋಮವಾರ ಬೆಲೆಯೂ ಜಾಸ್ತಿಯಾಗಿದೆ.

ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿಗೆ ₹500 ಇದೆ.

‘ಅಮಾವಾಸ್ಯೆ ಇರುವುದರಿಂದ ಕನಕಾಂಬರ ಬಿಟ್ಟು ಉಳಿದ ಹೂವುಗಳಿಗೆ ಬೇಡಿಕೆ ಇದೆ. ಕಾಕಡ ಕೆಜಿಗೆ ₹160, ಮರ್ಲೆಗೆ ₹200, ಸೇವಂತಿಗೆ ಹೂವಿಗೆ %₹160, ಚೆಂಡುಹೂವಿಗೆ ₹30ರಿಂದ ₹40 ಇದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT