ಮಂಗಳವಾರ, ಜುಲೈ 5, 2022
27 °C

ಪುನೀತ್ ರಾಜ್‌ಕುಮಾರ್ ಸ್ಮರಣೆ: ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಟ ಪುನೀತ್ ರಾಜ್‌ಕುಮಾರ್ ಗೌರವಾರ್ಥ ಚಾಮರಾಜನಗರದಲ್ಲಿ ಜನರು ಸ್ವಯಂ ಪ್ರೇರಿತ ಬಂದ್ ಕೈಗೊಂಡಿದ್ದಾರೆ.

ಹೋಟೆಲ್, ದಿನಸಿ ಅಂಗಡಿಗಳು  ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಜನರ ಓಡಾಟವೂ ಕಡಿಮೆ ಇದೆ.  ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಪುನೀತ್ ಅವರ ಭಾವಚಿತ್ರ ಅಳವಡಿಸಿ ಶ್ರದ್ಧಾಂಜಲಿ ಸಭೆಗೆ ಸಿದ್ಧತೆ ಮಾಡಲಾಗುತ್ತಿದೆ.

ಔಷಧ ಅಂಗಡಿಗಳು, ಆಸ್ಪತ್ರೆ ಕ್ಲಿನಿಕ್ ಗಳು, ಸರ್ಕಾರಿ ಕಚೇರಿಗಳು ತೆರೆದಿವೆ.

ಶನಿವಾರ ಬೆಳಿಗ್ಗೆಯೂ ಪುನೀತ್ ಅಭಿಮಾನಿಗಳು ಅವರ ಭಾವಚಿತ್ರ ಹಿಡಿದು ಬೈಕ್ ರ್ಯಾಲಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು