ಸೋಮವಾರ, ಆಗಸ್ಟ್ 8, 2022
22 °C

ಆಮೆ ಮಾಂಸ ತಿನ್ನುತ್ತಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯ ಬಳಿ ಆಮೆಯನ್ನು ಕೊಂದು ಮಾಂಸದ ಅಡುಗೆಯನ್ನು ತಯಾರಿಸಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಮಾಕಹಳ್ಳಿ ಗ್ರಾಮದ ಸುರೇಶ್, ಶಿವಣ್ಣ, ಗಣೇಶ್, ಕುಮಾರ್, ಶ್ರೀನಿವಾಸ್, ಹರೀಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಇವರೆಲ್ಲರೂ ಊರೂರು ಸುತ್ತಿಕೊಂಡು ಶಾಸ್ತ್ರ ಹೇಳಿ ಜೀವನ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯಲ್ಲಿ ಅಕ್ರಮವಾಗಿ ಆಮೆಗಳನ್ನು ಹಿಡಿದು ಅವುಗಳನ್ನು ಕೊಂದು ಅಡುಗೆ ತಯಾರಿಸುತ್ತಿದ್ದರು. ಈ ಕುರಿತು ರೈತ ಮುಖಂಡ ಮಹದೇವ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆರ್ಎಫ್ಒ ಪ್ರವೀಣ್ ರಾಮಪ್ಪ ಛಲವಾದಿ ಹಾಗೂ ಸಿಬ್ಬಂದಿ ಬಂದು ಆಮೆ ಚಿಪ್ಪು, ಮಾಂಸ ಹಾಗೂ ಮೂಳೆಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.