ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 1,340 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 24 ಮಂದಿಗೆ ಕೋವಿಡ್ ಇರುವುದು ಖಚಿತವಾಗಿದೆ. ಜಿಲ್ಲಾಡಳಿತವು ತನ್ನ ವರದಿಯಲ್ಲಿ 22 ಪ್ರಕರಣಗಳನ್ನು ಉಲ್ಲೇಖಿಸಿದೆ.
44 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 317ಕ್ಕೆ ಇಳಿದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಮತ್ತಷ್ಟು ಕುಸಿದಿದೆ. ಸದ್ಯ 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೊಲೇಷನ್‌ನಲ್ಲಿ ಎಂಟು ಮಂದಿ ಇದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 31,493 ಪ್ರಕರಣಗಳು ವರದಿಯಾಗಿವೆ. 30,656 ಮಂದಿ ಸೋಂಕು ಮುಕ್ತರಾಗಿದ್ದಾರೆ.
ಶುಕ್ರವಾರ ದೃಢಪಟ್ಟ 22 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ ಎರಡು, ಗುಂಡ್ಲುಪೇಟೆಯಮೂರು, ಕೊಳ್ಳೇಗಾಲದ ಒಂಬತ್ತು ಮತ್ತು ಹನೂರು ತಾಲ್ಲೂಕಿನ ಎಂಟು ಪ್ರಕರಣಗಳು ಸೇರಿವೆ.
ಗುಣಮುಖರಾದ 44 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 17, ಗುಂಡ್ಲುಪೇಟೆಯ ಎಂಟು, ಕೊಳ್ಳೇಗಾಲದ ಐವರು, ಹನೂರಿನ ಒಂಬತ್ತು ಹಾಗೂ ಯಳಂದೂರಿನ ಐವರು ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.