ಭಾನುವಾರ, ನವೆಂಬರ್ 28, 2021
20 °C

ಚಾಮರಾಜನಗರ: ಎರಡು ಪ್ರಕರಣ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸೋಮವಾರ ಜಿಲ್ಲೆಯಲ್ಲಿ 1,584 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೆ ಕೋವಿಡ್‌ ಇರುವುದು ಖಚಿತವಾಗಿದೆ. ಒಬ್ಬರು ಗುಂಡ್ಲುಪೇಟೆ ತಾಲ್ಲೂಕಿನವರು, ಇನ್ನೊಬ್ಬರು ಹನೂರು ತಾಲ್ಲೂಕಿನವರು. 

ಸತತ ಎರಡನೇ ದಿನವೂ ಯಾರೊಬ್ಬರೂ ಗುಣಮುಖರಾಗಿಲ್ಲ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಎರಡು ಹೆಚ್ಚಾಗಿ 22ಕ್ಕೆ ತಲುಪಿದೆ. ಸೋಮವಾರವೂ ಸಾವಿನ ಪ್ರಕರಣ ವರದಿಯಾಗಿಲ್ಲ. ಐಸಿಯುನಲ್ಲಿ ಯಾರೂ ಇಲ್ಲ. 10 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 32,556 ಪ್ರಕರಣ ದೃಢಪಟ್ಟಿವೆ. 31,995 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು