ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಹೆಣ್ಣಾನೆಗಳ ಸಾವು

ಕಾವೇರಿ ವನ್ಯಧಾಮ: 3 ದಿನಗಳ ಅಂತರದಲ್ಲಿ ಘಟನೆ
Last Updated 5 ಏಪ್ರಿಲ್ 2020, 15:27 IST
ಅಕ್ಷರ ಗಾತ್ರ

ಹನೂರು (ಚಾಮರಾಜನಗರ): ಕಾವೇರಿ ವನ್ಯಧಾಮದಲ್ಲಿ ಮೂರು ದಿನಗಳ ಅಂತರದಲ್ಲಿ ತುಂಬು ಗರ್ಭಿಣಿ ಸೇರಿದಂತೆ ಎರಡು ಹೆಣ್ಣಾನೆಗಳು ಮೃತಪಟ್ಟಿರುವುದುತಡವಾಗಿ ಗೊತ್ತಾಗಿದೆ.

ಕೌದಳ್ಳಿ ವನ್ಯಜೀವಿ ವಲಯದ ದಬ್ಬಗುಳಿ ಬೀಟ್‌ ಹಾಗೂ ಉಗನಿಯ ಬೀಟ್‌ನ ಕೊಂಗಮಡುಹಳ್ಳ ಅರಣ್ಯ ಪ್ರದೇಶದಲ್ಲಿ ಆನೆಗಳು ಮೃತಪಟ್ಟಿವೆ. ಕೆಲವೇ ದಿನಗಳಲ್ಲಿ ಮರಿಗೆ ಜನ್ಮ ನೀಡಬೇಕಿದ್ದ ಗರ್ಭಿಣಿ ಆನೆ ಬೆಟ್ಟದಿಂದ ಜಾರಿ ಬಿದ್ದು ಮೃತಪಟ್ಟರೆ, ಮತ್ತೊಂದು ಆನೆ ಕಾಲು ಜಾರಿ ಬಿದ್ದು ಸತ್ತಿದೆ.

ಮಾರ್ಚ್‌ 30ರಂದು ದಬ್ಬಗುಳಿ ಬೀಟ್‌ನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಆನೆ ಮೃತಪಟ್ಟಿರುವುದು ಕಂಡು ಬಂದಿದೆ. ಸ್ಥಳಕ್ಕೆ ತೆರಳಿ ನೋಡಿದಾಗ ಮೃತಪಟ್ಟಿರುವ ಆನೆ ಗರ್ಭಿಣಿಯಾಗಿ ವಾರದೊಳಗೆ ಮರಿ ಹಾಕುವ ಸಮೀಪದಲ್ಲಿತ್ತು. ಮೇವಿಗಾಗಿ ಬೆಟ್ಟದಿಂದ ಇಳಿಯುವಾಗ ಕಾಲು ಜಾರಿ ಬಿದ್ದಿದೆ. ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಮಾರ್ಚ್ 28 ಅಥವಾ 29ರಂದು ಆನೆ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಆನೆಯ ಹೊಟ್ಟೆಯೊಳಗಿದ್ದ ಮರಿಯಾನೆಯನ್ನು ಮರಣೋತ್ತರ ಪರೀಕ್ಷೆ ವೇಳೆ ತೆಗೆದು ಜತೆಯಾಗಿ ಅಂತ್ಯಸಂಸ್ಕಾರ ಮಾಡಲಾಯಿತು.

ಮಾರ್ಚ್‌ 30ರಂದು ಕೊಂಗಮಡುಹಳ್ಳ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಮತ್ತೊಂದು ಹೆಣ್ಣಾನೆ ಮೃತದೇಹ ಪತ್ತೆಯಾಗಿದೆ. ನೀರು ಕುಡಿಯಲು ಬಂದ ಆನೆ ನದಿ ದಡದಲ್ಲಿ ಬಂಡೆಗಳ ಮೇಲೆ ನಡೆದಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯದೊಳಗೆ ಸುಡಲಾಯಿತು.‌

‘ಎರಡೂ ಘಟನೆಗಳು ಅನಿರೀಕ್ಷಿತವಾಗಿ ನಡೆದಿದ್ದು, ಆನೆಗಳು ಆಕಸ್ಮಿಕವಾಗಿ ಮೃತಪಟ್ಟಿವೆ’ ಎಂದು ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT