ಗುರುವಾರ , ಜೂನ್ 30, 2022
20 °C

ಚಾಮರಾಜನಗರ: 258 ಮಂದಿಗೆ ಕೋವಿಡ್‌ ದೃಢ, ಆರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 258 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 267 ಮಂದಿ ಸೋಂಕುಮುಕ್ತರಾಗಿದ್ದಾರೆ. 

ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ನಾಲ್ವರು, ಕೋವಿಡ್‌ಯೇತರ ಕಾರಣದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ಸದ್ಯ 2,862 ಸಕ್ರಿಯ ಪ್ರಕರಣಗಳು ಇವೆ. 58 ಮಂದಿ ಐಸಿಯುನಲ್ಲಿದ್ದಾರೆ. 85 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 27,988ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 24,664ಕ್ಕೆ ಏರಿದೆ. 

ಶನಿವಾರ 1,360 ಮಂದಿಯ ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, 1,084 ಮಂದಿಯ ವರದಿ ನೆಗೆಟಿವ್‌ ಆಗಿದೆ. 276 ಮಂದಿಗೆ ಸೋಂಕು ಖಚಿತವಾಗಿದೆ. 

ದೃಢಪಟ್ಟ ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 76, ಗುಂಡ್ಲುಪೇಟೆ 58, ಕೊಳ್ಳೇಗಾಲ 42, ಹನೂರು 48 ಮತ್ತು ಯಳಂದೂರು ತಾಲ್ಲೂಕಿನ 30 ಪ್ರಕರಣಗಳು ಸೇರಿವೆ. ಎರಡು ಪ್ರರಕರಣಗಳು ಹೊರ ಜಿಲ್ಲೆಯದ್ದು. 

ಗುಣಮುಖರಾದ 267 ಮಂದಿಯಲ್ಲಿ 213 ಮಂದಿ ಕೋವಿಡ್‌ ಕೇರ್‌ ಕೇಂದ್ರದಲ್ಲಿ‌ದ್ದರು. 54 ಮಂದಿ ಮನೆ ಆರೈಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು