ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಉಪ್ಪಾರ ಮುಖಂಡ ಚಿನ್ನಸ್ವಾಮಿ ಬಿಜೆಪಿಗೆ ಸೇರ್ಪಡೆ

Last Updated 17 ಮಾರ್ಚ್ 2023, 6:48 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಉಪ್ಪಾರ ಮುಖಂಡ, ಉದ್ಯಮಿ ಚಿನ್ನಸ್ವಾಮಿ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಚಿನ್ನಸ್ವಾಮಿ ಅವರಿಗೆ ಬಿಜೆಪಿ ಶಾಲು ಹಾಕಿ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.

ಜಿ.ನಾರಾಯಣ ಪ್ರಸಾದ್‌ ಮಾತನಾಡಿ, ‘ಪ್ರಧಾನಿ ಮೋದಿಯವರ ಆಡಳಿತವನ್ನು ಇಡಿ ವಿಶ್ವವೇ ಮೆಚ್ಚುತ್ತಿದ್ದೆ. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮಾಯಿ ಆಡಳಿತವನ್ನು ಮೆಚ್ಚಿ ಬೇರೆ ಪಕ್ಷದ ಯುವಕರು ಕಾರ್ಯಕರ್ತರು ಬಿಜೆಪಿಯನ್ನು ಸೇರಿ ಬಿಜೆಪಿಗೆ ಬಲ ತುಂಬುವುದರ ಜೊತೆಗೆ ಸದೃಢ ಭಾರತ ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಪ್ರತಿ ಬೂತ್‌ನಲ್ಲಿ ಕೆಲಸ ಮಾಡಿ ನಮ್ಮ ಪಕ್ಷವನ್ನು ಗೆಲ್ಲಿಸಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರು ನಿಟ್ಟಿನಲ್ಲಿ ದುಡಿಯೋಣ’ ಎಂದರು.

ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು ಮಾತನಾಡಿ, ‘ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪಣ ತೊಟ್ಟು ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿಯವರು ಸಹ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅಡಿಪಾಯ ಹಾಕಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಮೂರು ಬಾರಿಯಿಂದ ಕಾಂಗ್ರೆಸ್ ಶಾಸಕರೇ ಇದ್ದಾರೆ. ಆದರೆ, ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಯಾವುದೇ ರೀತಿಯ ಅಭಿವೃದ್ಧಿಯ ದೂರ ದೃಷ್ಟಿ ಇಲ್ಲ. ಇದನ್ನೆಲ್ಲ ನೋಡಿ ಜನ ಬೇಸತ್ತು ಬದಲಾವಣೆಯನ್ನು ಬಯಸಿ ಬಿಜೆಪಿ ಸೇರುತ್ತಿದ್ದಾರೆ’ ಎಂದರು.

ಬಿಜೆಪಿ ಸೇರ್ಪಡೆಯಾದ ಚಿನ್ನಸ್ವಾಮಿ ಮಾತನಾಡಿ, ‘ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿ ಯಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದು ಅವರನ್ನು ಗೆಲ್ಲಿ‌ಸೋಣ‌. ನಾನು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಬಿಜೆಪಿ ಸೇರಿದ್ದೇನೆ’ ಎಂದರು.

ಕಾಡಾ ಅಧ್ಯಕ್ಷ ನಿಜಗುಣರಾಜು, ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಕೋರ್‌ ಕಮಿಟಿ ಸದಸ್ಯ ಡಾ.ಎ.ಆರ್.ಬಾಬು, ಬಿಜೆಪಿ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ರು, ಪಿ.ಎಲ್.ಡಿ ಬ್ಯಾಕ್ ಅಧ್ಯಕ್ಷ‌ ಎಚ್.ಎಂ.ಬಸವಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಣ್ಣ, ಮೆಡಿಕಲ್ ಆಶೋಕ್, ಎಚ್.ಆರ್.ಸ್ವಾಮಿ, ಲೀಲಾ ಕೃಷ್ಣ, ಕೃಷ್ಣಮೂರ್ತಿ, ಪಿ.ಎ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಗಿರಿಮಲ್ಲು, ಶಕ್ತಿ ಕೇಂದ್ರದ ರಮೇಶ್, ಚನ್ನಂಜಪ್ಪ, ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT