ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ತರಕಾರಿ ಧಾರಣೆ ಯಥಾಸ್ಥಿತಿ, ಹೂವು ಅಗ್ಗ

Last Updated 27 ಸೆಪ್ಟೆಂಬರ್ 2021, 16:50 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹೂವುಗಳಿಗೆ ಬೇಡಿಕೆ ಮತ್ತಷ್ಟು ಕುಸಿದಿದೆ. ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಎರಡು ಮೂರು ವಾರಗಳಿಂದ ಏರಿಳಿತ ಕಂಡು ಬಂದಿದ್ದ ತರಕಾರಿಗಳ ಧಾರಣೆ ಈ ವಾರ ಸ್ಥಿರವಾಗಿದೆ.ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ, ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಎಲ್ಲ ತರಕಾರಿಗಳ ಧಾರಣೆ ಕಳೆದವಾರದಷ್ಟೇ ಇದೆ.

ಹಣ್ಣುಗಳ ಪೈಕಿ ಕಿತ್ತಳೆ ಬೆಲೆ ₹10 ಇಳಿದಿದ್ದರೆ, ಪಚ್ಚ ಬಾಳೆಯ ಬೆಲೆ ₹10 ಹೆಚ್ಚಾಗಿದೆ.ಕಳೆದ ವಾರ ಹಾಪ್‌ಕಾಮ್ಸ್‌ನಲ್ಲಿ ಕೆಜಿ ಕಿತ್ತಳೆ ₹70ಇತ್ತು. ಈ ವಾರ ₹60ಕ್ಕೆ ಇಳಿದಿದೆ. ಹಲವು ತಿಂಗಳುಗಳಿಂದ ಕೆಜಿಗೆ ₹20 ಇದ್ದ ಪಚ್ಚ ಬಾಳೆ ಬೆಲೆ ಈ ವಾರ ₹30ಕ್ಕೆ ಏರಿದೆ.

ಗಣೇಶ ಹಬ್ಬದ ಬಳಿಕ ಇಳಿಮುಖವಾಗುತ್ತಿರುವ ಹೂವಿನ ಧಾರಣೆ ಈ ವಾರ ಮತ್ತಷ್ಟು ಕಡಿಮೆಯಾಗಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಪುಷ್ಪಗಳಿಗೆ ಬೇಡಿಕೆ ಕುಸಿದಿದ್ದು, ಮುಂದಿನ ವಾರದ ಅಂತ್ಯದ ವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಸೋಮವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂವಿಗೆ ಕೆಜಿಗೆ ₹10, ಸೇವಂತಿಗೆಗೆ ₹20, ಸುಗಂಧರಾಜ ಹೂವಿಗೆ ₹30, ಕಾಕಡಕ್ಕೆ ₹80, ಕನಕಾಂಬರಕ್ಕೆ ₹400 ಇತ್ತು.

‘ಹೂವು ಖರೀದಿ ಪ್ರಮಾಣ ಕುಂಠಿತವಾಗಿದೆ. ಹಾಗಾಗಿ, ಬೆಲೆಯೂ ಇಳಿದಿದೆ. ದಸರಾ ಹಬ್ಬದವರೆಗೆ ಇದೇ ರೀತಿ ಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸ ಮಾರುಕಟ್ಟೆಯಲ್ಲಿ ಮಟನ್‌ ಬೆಲೆಯಲ್ಲಿ (₹560) ವ್ಯತ್ಯಾಸವಾಗಿಲ್ಲ. ಚಿಕನ್‌ ಬೆಲೆ ಕೊಂಚ ಇಳಿದಿದ್ದು, ಕೆಜಿಗೆ ₹180ರಿಂದ ₹200ರವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT