ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಪುರಾತನ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯ ವಿಷ್ಣು ದೀಪೋತ್ಸವ ಹಾಗೂ ನಾರಾಯಣ ಸಹಿತ ಶ್ರೀದೇವಿ-ಭೂದೇವಿ ದೇವರ ಉತ್ಸವ ನೆರವೇರಿತು.

ಉತ್ಸವದ ಅಂಗವಾಗಿ ದೇವಸ್ಥಾನವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಗ್ರಾಮದ ಶ್ರೀಮಾತೆ ಶಾರದಾ ದೇವಿ ಭಜನಾ ಮಂಡಳಿಯ ಸದಸ್ಯರು ದೇವಸ್ಥಾನದ ಆವರಣವನ್ನು ಚಿತ್ತಾಕರ್ಷಕ ಬಣ್ಣಗಳ ರಂಗೋಲಿಯಿಂದ ಅಲಂಕರಿಸಿದ್ದರು. ಬಳಿಕ ದೀಪಗಳಿಗೆ ಬತ್ತಿ ಇರಿಸಿ ಎಣ್ಣೆ ಬಿಡಲಾಯಿತು. ಸ್ವಾಮಿ ವಿವೇಕಾನಂದ ಪಾಠಶಾಲೆಯ ಮಕ್ಕಳು ದೀಪೋತ್ಸವಕ್ಕೆ ಸಹಕಾರ ನೀಡಿದರು. ಸಂಜೆ ಭಕ್ತರು ಸಹಸ್ರಾರು ದೀಪಗಳನ್ನು ಹಚ್ಚುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಒಳಾಂಗಣ ಆವರಣದಲ್ಲಿ ಶ್ರೀಮನ್ನಾರಾಯಣ ಹಾಗೂ ಶ್ರೀದೇವಿ, ಭೂದೇವಿ ಉತ್ಸವ ಅದ್ದೂರಿಯಾಗಿ ನಡೆಯಿತು. ಶ್ರೀ ವಿನಾಯಕ ಭಕ್ತ ಮಂಡಳಿಯ ಸದಸ್ಯರು ಹಾಗೂ ದೇವಸ್ಥಾನದ ಸ್ವಯಂ ಸೇವಕರು ಸ್ವಚ್ಛತೆ ನಡೆಸಿದರು.

ದೇವಸ್ಥಾನದ ವಿಶೇಷ: ಗೋಪಾಲಕೃಷ್ಣ ದೇವಸ್ಥಾನವು 14ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಗೋಪಾಲಕೃಷ್ಣ ದೇವರ ವಿಗ್ರಹವು ಹೊಯ್ಸಳರ ಶೈಲಿಕ ಕಲಾಕೃತಿಯಾಗಿದೆ. ಮೈಸೂರು ಅರಸರಾದ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಮೇಲುಕೋಟೆಯ ಕಲ್ಯಾಣಿಯಿಂದ ಗೋಪಾಲಕೃಷ್ಣನ ವಿಗ್ರಹ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು ಎಂಬ ಪ್ರತೀತಿ ಇದೆ.

ದೇವಸ್ಥಾನದ ಸುಖಾನಾಸಿಯ ದ್ವಾರದಲ್ಲಿ ಜಯ ವಿಜಯ ದ್ವಾರಪಾಲಕರಿದ್ದು ಚಿಕ್ಕ ದೇವರಾಜ ಒಡೆಯರ್ ಅವರ ಹೆಸರು ಕೆತ್ತಲಾಗಿದೆ. ಒಳಾಂಗಣದಲ್ಲಿ ವೆಂಕಟೇಶ್ವರ ಸ್ವಾಮಿಯ ಕಲಾಚಿತ್ರ ಇದೆ. 12 ವರ್ಷಗಳಿಂದ ವಿನಾಯಕ ಭಕ್ತ ಮಂಡಳಿಯ ಯುವಕರ ತಂಡ, ಸ್ವಾಮಿ ವಿವೇಕಾನಂದ ಪಾಠಶಾಲೆಯ ವಿದ್ಯಾರ್ಥಿಗಳು ದೇಗುಲದ ಸ್ವಚ್ಛತೆ, ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಗಡಿನಾಡು ಜಾನಪದ ಕೋಗಿಲೆಗಳ ಸಾಂಸ್ಕೃತಿಕ ಟ್ರಸ್ಟ್, ಚಾಮರಾಜನಗರದ ಬೆಳಕು ಸಂಸ್ಥೆಯ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಗ್ರಾಮದ ಎಲ್ಲ ಸಮುದಾಯಗಳ ಕೋಮುವಾರು ಯಜಮಾನರು, ಮುಖಂಡರುಗಳು, ಅರ್ಚಕರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.