ಮಂಗಳವಾರ, ಅಕ್ಟೋಬರ್ 15, 2019
29 °C

ವಿದ್ಯಾಭೂಷಣ ಗಾನಸುಧೆ: ಭಕ್ತಿಲೋಕದಲ್ಲಿ ಮಿಂದಿದ್ದ ಜನ

Published:
Updated:
Prajavani

ಚಾಮರಾಜನಗರ: 'ಕಂಡೆ ಕರುಣಾ ನಿಧಿಯ...' ಎಂಬ ದಾಸರ ಪದದೊಂದಿಗೆ ಗಾಯನ ಆರಂಭಿಸಿದ ಡಾ.ವಿದ್ಯಾಭೂಷಣ ಅವರು ಒಂದು ಗಂಟೆ ಕಾಲ ಕಿಕ್ಕಿರಿದ್ದು ಸೇರಿದ್ದ ಜನರನ್ನು ಭಕ್ತಿ ಲೋಕದಲ್ಲಿ ತೇಲುವಂತೆ ಮಾಡಿದರು.

ಜಿಲ್ಲಾ ದಸರಾ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಂದರ ದಾಸರು ಹಾಗೂ ಕನಕದಾಸರ ಕೀರ್ತನೆಗಳಿಗೆ ವಿದ್ಯಾಭೂಷಣ ಅವರು ಧ್ವನಿಯಾದರು.

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ, ಇಷ್ಟು ದಿನ ಈ ವೈಕುಂಠ..., ಪೋಪು ಹೋಗೋಣ ಬಾರೊ ರಂಗ, ಹರಿಕುಣಿದಾ ನಮ್ಮ ಹರಿಕುಣಿದಾ.., ತಂಬೂರಿ ಮೀಟಿದವಾ... ಹೀಗೆ ಒಂದರ ಹಿಂದೆ ಒಂದು ಹಾಡುಗಳನ್ನು ಲೀಲಾಜಾಲವಾಗಿ ಹಾಡುತ್ತಾ ಪ್ರೇಕ್ಷಕರನ್ನು ಅವರು ಮಂತ್ರಮುಗ್ಧಗೊಳಿಸಿದರು.

ಪ್ರತಿ ಹಾಡಿಗೂ ಸಹೃದಯ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು. ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡಿನ ಮೂಲಕ ವಿದ್ಯಾಭೂಷಣ ಅವರು ಗಾನಸುಧೆಗೆ ಮಂಗಳ ಹಾಡಿದರು.

ಮನಮೋಹಕ ರಷ್ಯನ್ ನೃತ್ಯ

ರಷ್ಯನ್ ಕಲಾವಿದರು ಪ್ರದರ್ಶಿಸಿದ ನೃತ್ಯ ಜನಕ್ಕೆ ಜನರು ಮನಸೋತರು.

ನೃತ್ಯ ಕಾರ್ಯಕ್ರಮಕ್ಕೆ ಕಾಯುತ್ತಿದ್ದ ಪ್ರೇಕ್ಷಕರು ನೃತ್ಯ ಆರಂಭವಾಗುತ್ತಿದ್ದಂತೆಯೇ ಶಿಳ್ಳೆ, ಕರತಾಡನದಿಂದ ಸ್ವಾಗತಿಸಿದರು.

ಜಗಮಗಿಸುವ ಬೆಳಕಿನ ನಡುವೆ ಬಣ್ಣ ಬಣ್ಣದ ಪೋಷಾಕಿನಿಂದ ಕಂಗೊಳಿಸಿದ ನರ್ತಕಿಯರು ಜನರನ್ನು ಹೆಚ್ಚೆಬ್ಬಿಸಿದರು.

ಹಿಂದಿ ಹಾಡಿಗೆ ಕಲಾವಿದೆಯೊಬ್ಬರು ಪ್ರದರ್ಶಿಸಿದ ಬ್ಯಾಲೆ ನೃತ್ಯ ಜನರಲ್ಲಿ ಮಿಂಚಿನ ಸಂಚಾರವನ್ನೇ ತರಿಸಿತು.

Post Comments (+)