ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಜಯಂತಿ ಆಚರಣೆ: ಭಿನ್ನಾಭಿಪ್ರಾಯ ಬಿಟ್ಟು ಸಂಘಟಿತರಾಗಲು ಸಲಹೆ

ರಾಮಸಮುದ್ರದಲ್ಲಿ:
Published : 17 ಸೆಪ್ಟೆಂಬರ್ 2023, 15:10 IST
Last Updated : 17 ಸೆಪ್ಟೆಂಬರ್ 2023, 15:10 IST
ಫಾಲೋ ಮಾಡಿ
Comments

ಚಾಮರಾಜನಗರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಕರ್ಮ ಜನಾಂಗಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಅವುಗಳನ್ನು ಪಡೆಯಲು ಸಮಾಜದ ಜನರು ಬಿನ್ನಾಭಿಪ್ರಾಯಗಳನ್ನು ತೊರೆದು ಸಂಘಟಿತರಾಗಬೇಕು’ ಎಂದು ಮುಖಂಡ ಸೋಮಣ್ಣ ಭಾನುವಾರ ಹೇಳಿದರು. 

ನಗರದ ರಾಮಸಮುದ್ರದಲ್ಲಿ ನಡೆದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನೇರವೇರಿಸಿ  ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿರುವ ಎಲ್ಲ ವಿಶ್ವಕರ್ಮ ಜನರ ಅಭಿವೃದ್ಧಿಗಾಗಿ ₹15  ಸಾವಿರ ಕೋಟಿ ನೀಡಿದ್ದಾರೆ. ಕುಶಲ ಕರ್ಮಿಗಳಿಗೆ ₹3 ಲಕ್ಷದವರೆಗೆ ಸಾಲ,  ₹15 ಸಾವಿರ ಮೌಲ್ಯದ ಟೂಲ್ ಕಿಟ್, ಕೌಶಲ ತರಬೇತಿಗಾಗಿ ಪ್ರತಿದಿನ ₹500 ಸ್ಟೈಫಂಡ್ ನೀಡಲು ಉದ್ದೇಶಿಸಲಾಗಿದೆ. ಸಮಾಜದ ಬಂಧುಗಳು ಇವುಗಳ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು. 

‘ಜಿಲ್ಲೆಯಲ್ಲಿ ವಿಶ್ವಕರ್ಮರು ಸಾವಿರಾರು ಸಂಖ್ಯೆಯಲ್ಲಿದ್ದು ವಿವಿಧ ಕುಶಲಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ್ದು, ರಾಜ್ಯ ಸರ್ಕಾರ ಈ ಸಮಾಜಕ್ಕೆ ವಿಶೇಷ ಮಿಸಲಾತಿ ಕಲ್ಪಿಸಬೇಕು’ ಎಂದು ಸೋಮಣ್ಣ ಆಗ್ರಹಿಸಿದರು.

‘ಎಲ್ಲ‌ ಸಮಾಜಗಳಿಗೆ ಇರುವಂತೆ ವಿಶ್ವಕರ್ಮ ಸಮಾಜದ ಜನರಿಗೂ ಸಮುದಾಯ ಭವನ, ರುದ್ರಭೂಮಿಗೆ ಜಾಗ ನೀಡಬೇಕು’ ಎಂದು ಮನವಿ ಮಾಡಿದರು.

ಮತ್ತೊಬ್ಬ ಮುಖಂಡ ಡಿ.ಎಲ್.ಕುಮಾರ್ ಮಾತನಾಡಿ, ‘ರಾಜ್ಯ ಸರ್ಕಾರ ಸೆ.29ರಂದು ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಮಾಡುತ್ತಿದ್ದು, ಸಮಾಜದ ಎಲ್ಲ ಜನರು ತಪ್ಪದೇ ಭಾಗವಹಿಸಬೇಕು’ ಎಂದರು.

ಮುಖಂಡರಾದ ಕೃಷ್ಣಾಚಾರ್, ಮಧು, ಕುಮಾರ್ ನಾಗವಳ್ಳಿ, ಮಂಜುನಾಥಚಾರ್, ನಾಗೇಂದ್ರಚಾರ್, ರಂಗಪ್ಪ, ರಾಚಪ್ಪಾಜಿ, ಪ್ರಮೋದ್, ಬಸವಾಚಾರಿ, ಸಿದ್ದೇಶ್, ಹರೀಶ್, ನಾಗರಾಜು, ರಾಜಣ್ಣ, ಸಂಪತ್, ಶಿವಕುಮಾರ್, ಜಗದೀಶ್, ಶಶಿ, ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT