ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತ್ರಸ್ತರಿಗೆ ಆಹಾರ ಧಾನ್ಯ ರವಾನೆ

Published 5 ಆಗಸ್ಟ್ 2024, 14:47 IST
Last Updated 5 ಆಗಸ್ಟ್ 2024, 14:47 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನೆರೆಯ ವಯನಾಡ್ ಜಿಲ್ಲೆಯ ಮೇಪ್ಪಾಡಿ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ತಾಲ್ಲೂಕಿನಿಂದ ನೆರವಿನ ರೂಪದಲ್ಲಿ ಅಗತ್ಯ ವಸ್ತುಗಳನ್ನು ವಾಹನದ ಮೂಲಕ ಕಳುಹಿಸಲಾಯಿತು.

ಕರುನಾಡ ಯುವ ಸೇನೆಯ ಅಧ್ಯಕ್ಷ ಮುನೀರ್ ಪಾಷಾ, ‘ಕೇರಳದಲ್ಲಿ ಭೂಕುಸಿತದಿಂದ ಆ ಭಾಗದಲ್ಲಿನ ಜನರ ಸ್ಥಿತಿ-ಗತಿ ಘೋರವಾಗಿದೆ. ಭೂಕುಸಿತದಿಂದ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಆಹಾರ ಪದಾರ್ಥಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ನೆರವು ನೀಡಲಾಗುವುದು’ ಎಂದರು.

ಸಹೃದಯಿಗಳಿಂದ ಒಂದು ಲೋಡ್ ಆಹಾರ ಪದಾರ್ಥಗಳು, ಬ್ರೆಡ್, ಬಿಸ್ಕೆಟ್, ರಗ್ಗು, ಗುಡ್ ಲೈಫ್ ಹಾಲಿನ ಪಾಕೆಟ್‍ಗಳನ್ನು ಕೊಂಡೊಯ್ದು ಕಾಳಜಿ ಕೇಂದ್ರ ಹಾಗೂ ಸಂತ್ರಸ್ತರಿಗೆ ವಿತರಣೆ ಮಾಡಿತ್ತು. ನೆರವು ದೊರಕದ ಕಡು ಬಡವರಿಗೆಂದು ತಾಲ್ಲೂಕಿನ ತಂಡ ನೀಡಿದ್ದ ಆಹಾರ ಕಿಟ್‍ಗಳನ್ನು ವೆಣ್ಣಿಯೋಡೆ ಗ್ರಾಮದ ದಯಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾನುವಾರ ವಿತರಿಸಿದರು.

ಭಾನುವಾರ ಸಂಘದ ಅಧ್ಯಕ್ಷ ನಾಸೀರ್, ಪ್ರಧಾನ ಕಾರ್ಯದರ್ಶಿ ನೇಮೇಶ್, ನಿರ್ದೇಶಕರಾದ ಮಹಮದ್ ರಫಿ ಮುಂತಾದವರು ದುರ್ಗಮ ಪ್ರದೇಶದಲ್ಲಿರುವ ಸುಮಾರು 100ಕ್ಕೂ ಹೆಚ್ಚು ಸಂತ್ರಸ್ತರಿಗೆ ವಿತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT