ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೃಷಿ ಜಮೀನಲ್ಲ, ಕಾಲೇಜು ಮೈದಾನ!

ಕೊಳ್ಳೇಗಾಲ: ಮಹದೇಶ್ವರ ಸರ್ಕಾರಿ ಕಾಲೇಜು ಆವರಣದಲ್ಲಿ ಕಳೆಗಿಡಗಳ ಹಾವಳಿ
Last Updated 8 ಜೂನ್ 2022, 2:35 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಆವರಿಸಿಕೊಂಡಿದ್ದು, ತೆರವುಗೊಳಿಸಲುಕಾಲೇಜು ಆಡಳಿತ ಕ್ರಮ ಕೈಗೊಂಡಿಲ್ಲ.

ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್‌ಸಿ ಕೋರ್ಸ್‌ಗಳಿದ್ದು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಹದೇಶ್ವರ ಕಾಲೇಜಿಗೆ 18 ಎಕರೆಗಳಷ್ಟು ಜಾಗ ಇದೆ. ಐದು ಎಕರೆ ಬಿಟ್ಟರೆ ಉಳಿದ ಪ್ರದೇಶ ಆಟದ ಮೈದಾನವಾಗಿದೆ. ಈಗ ಮೈದಾನದಲ್ಲಿ ಪಾರ್ಥೇನಿಯಂ, ಕಳೆ ಗಿಡಗಳು ಬೆಳೆದು ನಿಂತಿವೆ. ಕಾಲೇಜಿನ ಮೈದಾನ ಎಲ್ಲಿ ಎಂದು ಹುಡುಕಬೇಕಾಗಿದೆ.

ಹೆಚ್ಚುವರಿ ಕಟ್ಟದ ಸುತ್ತ, ಮುಂಭಾಗದಲ್ಲೂ ಗಿಡಗಳು ಬೆಳೆದಿವೆ. ಕಾಲೇಜು ವಿದ್ಯಾರ್ಥಿಗಳು ಗಿಡಗಳ ಮಧ್ಯೆ ಹಾದು ಹೋಗುವ ಪರಿಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಂತೂ ಮೈದಾನ ಕೃಷಿ ಜಮೀನಿನಂತೆಯೇ ಭಾಸವಾಗುತ್ತದೆ.

ಕಾಲೇಜಿನಲ್ಲಿ ನಡೆದಾಡಲು ಆಗುವುದಿಲ್ಲ.ಕಳೆ ಗಿಡಗಳು ಬೆಳೆದು ನಿಂತ ಕಾರಣ ಹಾವು, ಚೇಳು, ನಾಯಿ, ಹಂದಿಗಳ ಕಾಟ ಮೀತಿ ಮೀರಿದೆ. ನಡೆದುಕೊಂಡು ಹೋಗುವಾಗ ಭಯವಾಗುತ್ತದೆ. ಆಡಳಿತ ಆವರಣ ಸ್ವಚ್ಛ ಮಾಡಲು ಏನೂ ಕ್ರಮ ಕೈಗೊಂಡಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇತರ ಮೂಲಸೌಕರ್ಯಗಳ ಕೊರತೆಯೂ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿಗಳು ಹೇಳಿದರು.

ಬಿಡಿ, ಸಿಗರೇಟು ಸೇವನೆ: ‘ಕಾಲೇಜು ಆವರಣದಲ್ಲೇ ಕೆಲ ಪುಂಡ ವಿದ್ಯಾರ್ಥಿಗಳು ಬೀಡಿ ಸಿಗರೇಟು ಸೇದುತ್ತಾರೆ. ಕೆಲವರು ಜೂಜಾಟವನ್ನೂ ಆಡುತ್ತಿದ್ದಾರೆ. ಆವರಣದ ಕೆಲವು ಜಾಗ, ಪ್ರೇಮಿಗಳ ತಾಣವಾಗಿದೆ. ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಗಮನಹರಿಸುವವರೇ ಇಲ್ಲ’ ಎಂಬುದು ಹಳೆ ವಿದ್ಯಾರ್ಥಿಗಳ ಆರೋಪ‌.

--

ಕಾಲೇಜಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಸುತ್ತಿವೆ. ಕೆಲವು ಪುಂಡ ವಿದ್ಯಾರ್ಥಿಗಳಿಂದಾಗಿ ಕಾಲೇಜಿಗೆ ಕೆಟ್ಟ ಹೆಸರು ಬರುತ್ತಿದೆ
ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿ

--

ನಾನು ಅಧಿಕಾರ ಸ್ವೀಕರಿಸಿ ತಿಂಗಳಷ್ಟೇ ಆಗಿದೆ. ಇನ್ನು ಮೂರು ದಿನಗಳ ಒಳಗಾಗಿ ಕಳೆಗಿಡಗಳನ್ನು ತೆರವು ಮಾಡಿಸುತ್ತೇನೆ.
ಜಯಲಕ್ಷ್ಮೀ, ಕಾಲೇಜು ಪ್ರಾಂಶುಪಾಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT