ಚಾಮರಾಜನಗರ: ರಂಗಭೂಮಿಯು ಎಲ್ಲ ರಂಗ ಕಲೆಗಳ ತಾಯಿಬೇರಿನಂತೆ ಎಂದು ಸಾಹಿತಿ ಮಹದೇವ ಶಂಕನಪುರ ಹೇಳಿದರು.

ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ, ಮಹದೇಶ್ವರ ಕಲಾ ಸಂಘ, ಬೀರೇಶ್ವರ ಕಲಾ ಸಂಘ, ಸಿದ್ಧಮಲ್ಲೇಶ್ವರ ಕಲಾ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಂಗಭೂಮಿ ಅತ್ಯಂತ ಕ್ರಿಯಾಶೀಲವಾಗಿದ್ದು ನೂರಾರು ಕಲಾವಿದರು ಪ್ರತಿಫಲಾಪೇಕ್ಷೆ ಇಲ್ಲದೆ ರಂಗಸೇವೆ ಮಾಡುತ್ತಾ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ.

1961ರಲ್ಲಿ ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆಯು ವಿಶ್ವ ರಂಗಭೂಮಿ ದಿನ ಆಚರಿಸಲು ಮುನ್ನಡಿ ಬರೆಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಗ್ರೀಕರ ಕಾಲದಲ್ಲೇ ರಂಗಭೂಮಿ ಇತ್ತು ಎಂದು ಇತಿಹಾಸ ಹೇಳುತ್ತದೆ ಎಂದರು.

ಸಿನಿಮಾ ಹಾಗೂ ಕಿರುತೆರೆ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳ ಅಬ್ಬರವೂ ಹೆಚ್ವಾಗಿದೆ. ಇವುಗಳ ನಡುವೆ ವಿಶಿಷ್ಟವಾದ ರಂಗಭೂಮಿ ನೆಲೆ ಕಂಡುಕೊಳ್ಳಬೇಕಿದೆ ಎಂದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿದರು. ರಂಗಭೂಮಿ ಕಲಾವಿದರಾದ ಡಾ.ರಾಜಶೇಖರ ಪಂಡಿತ್, ಗೌಡಿಕೆ ಮಹದೇವಸ್ವಾಮಿ, ಆರ್. ಶ್ರೀಕಂಠಸ್ವಾಮಿ, ಸುಬ್ಬೇಗೌಡ, ಟಿ.ಎಸ್.ಶಿವಕುಮಾರ್, ಮಂಡ್ಯ ಪವಿತ್ರಗೌಡ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್.ಶಿವಣ್ಣ ಮಂಗಲ, ವಿಶ್ವ ಮಂಡ್ಯ, ತಬಲಾ ನಿತೀಶ್ ಬಸವಟ್ಟಿ, ಎಂ.ಎನ್.ಮಹದೇವು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಸುರೇಂದ್ರ, ಗೋವಿಂದರಾಜು, ಶಿವಸ್ವಾಮಿ, ಬೀರೇಗೌಡ, ಸಂಪತ್ ಕುಮಾರ್, ಮಂಜು, ಹುರೇಶ್, ಮಹದೇವಸ್ವಾಮಿ, ರಾಮಣ್ಣ, ರಾಜೇಶ್, ವೆಂಕಟರಮಣ, ರಾಮಣ್ಣ, ಕೃಷ್ಣ, ನಾಗರಾಜು, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.