ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಲ್ಲಿ ಬಿಡುವಿಲ್ಲದೆ ಸೇವೆ ಸಲ್ಲಿಸುತ್ತಿರುವ ದಾದಿಯರು

Last Updated 12 ಮೇ 2020, 4:11 IST
ಅಕ್ಷರ ಗಾತ್ರ

ಯಳಂದೂರು:ಕೋವಿಡ್‌–19 ಮಹಾಮಾರಿ 50 ದಿನಗಳಿಂದ ಜಗತ್ತಿನ್ನೇ ಬಾಧಿಸುತ್ತಿದೆ. ವೈರಾಣುವಿನ ಸರಪಣಿಯನ್ನು ತುಂಡರಿಸುವುದಕ್ಕಾಗಿ ಬಹುತೇಕರು ಮನೆಗಳಲ್ಲಿಬಂಧಿಯಾಗಿದ್ದಾರೆ. ಆದರೆ, ರೋಗ ಪೀಡಿತರ ಚಿಕಿತ್ಸೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಿಡುವಿಲ್ಲದೇ ನಿರತರಾಗಿದ್ದಾರೆ. ಅದರಲ್ಲೂ ದಾದಿಯರು (ನರ್ಸ್‌) ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ.

ಮೇ 12ರಂದುವಿಶ್ವ ದಾದಿಯರ ದಿನ. ಈ ವರ್ಷದ ಜಗತ್ತಿನ ಬಹುತೇಕ ದಾದಿಯರು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಯ ‌ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್‌ಗಳು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತಪಾಸಣಾಕೇಂದ್ರಗಳಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ.ಆಸ್ಪತ್ರೆ ಮತ್ತು ಗ್ರಾಮಗಳಲ್ಲೂ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ತಮ್ಮಕುಟುಂಬದ ಕಾಳಜಿಗಿಂತ ಸಾರ್ವಜನಿಕ ಸೇವೆಯಲ್ಲಿ ಹೆಚ್ಚಿನ ಸಮಯ ತೊಡಗಿದ್ದಾರೆ. ಆ ಮೂಲಕಧೃತಿಗೆಡದೆ ವೃತ್ತಿ ಧರ್ಮ ಪಾಲಿಸುವ ಮಾತೆಯರೂ ಆಗಿದ್ದಾರೆ.

‘ತಾಲ್ಲೂಕಿನಲ್ಲಿ 28 ದಾದಿಯರು ಇದ್ದಾರೆ. ಇವರು ಕೊರೊನಾ ಜಾಗೃತಿಯ ಜತೆಗೆ ಸಣ್ಣಪುಟ್ಟಕಾಯಿಲೆ, ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಕಾಳಜಿ ವಹಿಸಬೇಕು. ಸೋಂಕುಪೀಡಿತರ ಆರೈಕೆ ಮಾಡಬೇಕು. ಸದ್ಯ, ನಮ್ಮ ಜಿಲ್ಲೆ ಹಸಿರು ವಲಯದಲ್ಲಿ ರುವುದ
ರಿಂದಶುಶ್ರೂಷಕರು ನೆಮ್ಮದಿಯಿಂದ ಕಾಯಕ ನಿರ್ವಹಿಸುತ್ತಿದ್ದಾರೆ. 50 ದಿನಗಳಿಂದ ಯಾರೂ ರಜೆಪಡೆಯದೆ ಹಗಲಿರುಳು ಕರ್ತವ್ಯ ನಿರತರಾಗಿದ್ದಾರೆ’ ಎಂದು ತಾಲ್ಲೂಕು ಆಡಳಿತವೈದ್ಯಾಧಿಕಾರಿ ಡಾ.ಎಂ.ಮಂಜುನಾಥ್ ಅವರು‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ 19’ ಸೋಂಕಿತರನ್ನು ಆರೈಕೆ ಮಾಡುವವರಿಗೆ ಪಿಪಿಇ, ಸ್ಯಾನಿಟೈಸರ್, ಶೂ ಕವರ್,ಮಾಸ್ಕ್, ಕ್ಯಾಪ್‌ ಮತ್ತು ಕನ್ನಡಕಗಳು ಲಭ್ಯ ಇವೆ. ಆದರೆ, ಜಿಲ್ಲಾ ಕೇಂದ್ರದಲ್ಲಿಚಿಕಿತ್ಸೆಗೆ ವ್ಯವಸ್ಥೆ ಇರುವುದರಿಂದ ಇವುಗಳ ಬಳಕೆ ಮಾಡಲಾಗಿಲ್ಲ. ಈ ನಡುವೆ 15ವರ್ಷಗಳಿಂದ ₹10 ಸಾವಿರದಿಂದ ರಿಂದ ₹15 ಸಾವಿರಕ್ಕೆ ದುಡಿಯುತ್ತೇವೆ. ಯಾವುದೇ ಭಡ್ತಿ ಇಲ್ಲವೇವಿಶೇಷ ಆರ್ಥಿಕ ಸೌಲಭ್ಯವೂ ಇಲ್ಲದೆ ದುಡಿಯುತ್ತೇವೆ’ ಎನ್ನುತ್ತಾರೆ ಹೆಸರು ಹೇಳಲುಇಚ್ಚಿಸದ ದಾದಿಯರು.

ಕೊರೊನಾ ನಂತರ ಶುಶ್ರೂಷಕಿಯರ ಜೀವನ ಶೈಲಿಯಲ್ಲೂ ಬದಲಾವಣೆ ಉಂಟಾಗಿದೆ.ಮನೆ ಮಂದಿಗೆಹೆಚ್ಚಿನ ಸಮಯ ನೀಡಲಾಗುತ್ತಿಲ್ಲ. ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಕಷ್ಟ, ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ, ಪತಿ, ಮಕ್ಕಳು, ಅಪ್ಪ– ಅಮ್ಮ ಸೇರಿದಂತೆ ಕುಟುಂಬದ ಬಗ್ಗೆ ಹೆಚ್ಚು ಯೋಚನೆ ಮಾಡದೆ ಕೋವಿಡ್‌–19 ಕರ್ತವ್ಯದಲ್ಲಿ ಬಹುತೇಕ ಸರ್ಕಾರಿ ಹಾಗೂ ಗುತ್ತಿಗೆ ಆಧರಿತ ದಾದಿಯರು ನಿರತರಾಗಿದ್ದಾರೆ.

ಕೆಲವರು ನಮ್ಮೊಡನೆ ಮಾತನಾಡಲು ಹಿಂಜರಿಯುತ್ತಾರೆಎನ್ನುತ್ತಾರೆ ಕೆಲವು ನರ್ಸ್‌ಗಳು.‘ರೋಗಾಣು ಭೀತಿ ದೂರವಾಗುವ ತನಕ ಎಲ್ಲರೂ ಮನೆಯಲ್ಲಿ ಇರಬೇಕು.ಅಂಗಡಿ, ರಸ್ತೆ, ಬೀದಿಗಳಲ್ಲಿ ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಬೇಕು. ಸೋಂಕುಪೀಡಿತರ ಸಂಖ್ಯೆ ಕಡಿಮೆ ಇದ್ದಷ್ಟು ಚಿಕಿತ್ಸೆ ಸುಲಭವಾಗುತ್ತದೆ’ ಎಂದು ಶುಶ್ರೂಷಕಿ ಭಾರತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಾದಿಯರ ದಿನ ಇಂದು

ಈ ಬಾರಿಯ ಮೇ–12 ಫ್ಲಾರೆನ್ಸ್‌ ನೈಟಿಂಗೇಲ್ ಅವರ ದ್ವಿಶತಮಾನೋತ್ಸವ ವರ್ಷ. ವಿಶ್ವ ಆರೋಗ್ಯ ಸಂಸ್ಥೆ ಇವರ200ನೇ ಜಯಂತಿ ವರ್ಷವನ್ನು ‘ಇಯರ್‌ ಆಫ್‌ ನರ್ಸ್‌‌ ಅಂಡ್‌ ಮಿಡ್‌ವೈವ್ಸ್‌’ ಎಂದುಘೋಷಿಸಿದೆ. ಈ ವಲಯದಲ್ಲಿ ಶೇ 90 ಮಹಿಳೆಯರೇ ಇದ್ದು, ಹತ್ತು ಹಲವಾರು ಸಮಸ್ಯೆಗಳನ್ನುಎದುರಿಸುತ್ತಿದ್ದಾರೆ.

‘ರೋಗಿಗಳ ಆರೈಕೆಯಲ್ಲಿ ಸಾರ್ಥಕತೆ ಪಡೆಯುವ ಇವರಿಗೆ ‘ದೀಪಧಾರಿ ಮಹಿಳೆ’ ನೈಟಿಂಗೇಲ್‌ಸ್ಫೂರ್ತಿ. ಇವರ ಜನ್ಮ ದಿನದಂದು ಇವರ ಸೇವೆಯನ್ನು ಸ್ಮರಿಸಲಾಗುತ್ತದೆ. ಕೊರೊನಾಸಂಕಷ್ಟ ಕಾಲದಲ್ಲಿ ಇವರು ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ಇಂತಹ ನಿಸ್ವಾರ್ಥ ಸೇವೆಯ ಅಮ್ಮಂದಿರಿಗೆ ಗೌರವ–ಕೃತಜ್ಞತೆ ತೋರಿಸೋಣ’ ಯಳಂದೂರು ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT