ಯಳಂದೂರು: ‘ಅಂಬೆಡ್ಕರ್ ಚಿಂತನೆ ಮತ್ತು ವೈಜ್ಞಾನಿಕ ನಿಲುವು ಇಂದು ಫಲ ಕೊಡುವ ವೃಕ್ಷಗಳಾಗಿವೆ’ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಅಭಿಪ್ರಾಯಪಟ್ಟರು.

ಪಟ್ಟಣದ ಬಳೆಪೇಟೆಯಲ್ಲಿ ಶನಿವಾರ ನಡೆದ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧನ ಶಾಂತಚಿತ್ತತೆ, ವಿಜ್ಞಾನದ ದೃಢತೆ, ಮೌಢ್ಯತೆ ಅಪಾಯಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಜ್ಞಾನ ಅಪರಿಮಿತವಾಗಿತ್ತು. ಬಹು ಜನರ ಉದ್ಧಾರ ಕಲಿಕೆಯಿಂದ ಮಾತ್ರ ಸಾಧ್ಯ ಎಂಬುದರ ಅರಿವಿದ್ದ ಅವರು ಅಸ್ಪೃಶ್ಯರ ಮನೋಧೋರಣೆಯಲ್ಲಿ ಬದಲಾವಣೆ ತರಲು ಜೀವನ ಪೂರ್ತಿ ಶ್ರಮಿಸಿದರು’ ಎಂದರು.

ಭಾಷಣಕಾರ ಕಾಡಹಳ್ಳಿ ಮಹೇಂದ್ರ ಮಾತನಾಡಿ, ‘ಅಂಬೇಡ್ಕರ್ ಜೀವನವೇ ನಮಗೆ ಸಂದೇಶ ಆಗಿದೆ. ಅವರ ಭಾಷಣ ಮತ್ತು ಗ್ರಂಥಗಳನ್ನು ಅಧ್ಯಯನ ಮಾಡಿದರೆ ಅವರ ಚಿಂತನೆ ಮತ್ತು ಜ್ಞಾನ ದಿಗಂತದ ಅರಿವು ಆಗಲಿದೆ’ ಎಂದರು.

ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ನಂಜುಂಡಯ್ಯ, ಯಜಮಾನರಾದ ಶ್ರೀನಿವಾಸ್, ರೇವಣ್ಣ, ಪ್ರಕಾಶ್, ವೆಂಕಟ ರಾಮಯ್ಯ, ಮುಖಂಡರಾದ ಲಿಂಗರಾಜು ಮೂರ್ತಿ, ವರದರಾಜ್, ಸಾಹಿತಿ ಪ್ರಕಾಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಂಗಾಧರ್ ಹಾಗೂ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-37-1546036363

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.