ಯಳಂದೂರು: ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳು ನಿರ್ವಹಣೆ ಕೊರತೆ, ನೀರು ತುಂಬಿಸದಿರುವುದರಿಂದ ಹಾಳು ಬಿದ್ದಿವೆ.

ರಾಸುಗಳ ದಾಹ ನೀಗುತ್ತಿದ್ದ ತೊಟ್ಟಿಗಳು ನೀರಿಲ್ಲದೆ ಖಾಲಿಯಾಗಿದ್ದು, ಸುಡು ಬೇಸಿಗೆ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ನಿರ್ಮಿಸಿದ್ದ ತೊಟ್ಟಿಗಳು ಬಣಗುಡುವಂತಾಗಿದೆ.

ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ 10,500ಕ್ಕೂ ಹೆಚ್ಚು ಹಸು, ಎತ್ತು, ಎಮ್ಮೆಗಳಿವೆ. ವಲಸೆಗಾರರೊಂದಿಗೆ ಬಂದಿರುವ ಆಡು, ಕುರಿಗಳು ಸಾಕಷ್ಟಿವೆ. ಸುಡು ಬೇಸಿಗೆಯಲ್ಲಿ ಇವುಗಳ ತಾಪ ನೀಗಿಸಲು ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಬೇಸಿಗೆ ಸಮಯದಲ್ಲಿ ಇವುಗಳಿಗೆ ನೀರು ತುಂಬಿಸಿದರೆ, ಜಾನುವಾರಗಳ ದಾಹ ತಣಿಯಲಿದೆ.

ಈ ಉದ್ದೇಶಕ್ಕೆ ಕಟ್ಟಿದ ನೀರಿನ ತೊಟ್ಟಿಗಳು ಬಳಕೆಯಾಗಲಿವೆ. ಆದರೆ, ಹಲವು ಕಾರಣಗಳ ನೆಪವೊಡ್ಡಿ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ನೀರು ತುಂಬಿಸದ ಪರಿಣಾಮ, ಜಾನುವಾರು ಸಾಕಣೆದಾರರು ನೀರಿಗಾಗಿ ಕೆರೆ, ಕಟ್ಟೆ, ಹೊಂಡಗಳತ್ತ ಮುಖ ಮಾಡಬೇಕಿದೆ.

‘ಬೇಸಿಗೆ ಸಮಯಲ್ಲಿ ಕೆರೆ, ಕಟ್ಟೆ, ಹೊಂಡಗಳಲ್ಲಿ ನೀರು ಬತ್ತುತ್ತದೆ. ಕೆಲವು ಕೆರೆ ಕಟ್ಟೆಗಳಲ್ಲಿ ಜಲಮೂಲ ಇದ್ದರೂ, ಕೆಸರು ತುಂಬಿರುತ್ತದೆ. ಕೆಲವು ಕೆರೆಗಳಿಗೆ ಕಲುಷಿತ ನೀರು ಸೇರುವ ಅಪಾಯ ಇರುತ್ತದೆ. ಇಂತಹ ಸಮಯದಲ್ಲಿ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯೂ ಕಾಡಲಿದೆ. ಹಾಗಾಗಿ, ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಿರುವ ತೊಟ್ಟಿಗಳನ್ನು ದುರ್ಬಳಕೆ ಕಾರಣಕ್ಕೆ ನೀರು ತುಂಬಿಸುವುದನ್ನು ನಿಲ್ಲಿಸಲಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.

ನೀರು ತುಂಬಿಸಿ: ‘ಬೇಸಿಗೆ ತಾಪಮಾನ ಈಗಾಗಲೇ 40 ಡಿಗ್ರಿಗಳ ಹಂತ ತಲುಪಿದೆ. ಮಧ್ಯಾಹ್ನ ಸಾಕುಪ್ರಾಣಿಗಳು ನೆರಳಿನಲ್ಲಿ ಇರಬೇಕಿದೆ. ಜೊತೆಗೆ ಶುದ್ಧ ನೀರು ಕುಡಿಸಬೇಕು. ತಾಪ ಹೆಚ್ಚುತ್ತ ಸಾಗಿದ್ದು, ಮುಂದಿನ ದಿನಗಳಲ್ಲಿ ಜಲಮೂಲಗಳು ಬತ್ತುವ ಅನಿವಾರ್ಯತೆ ಹೆಚ್ಚಿದೆ. ಜಾನುವಾರುಗಳು ಕುಡಿಯುವ ನೀರಿಗಾಗಿ ಅಲೆಯುವುದು ಅನಿವಾರ್ಯ ಆಗಲಿದೆ.

‘ಏಪ್ರಿಲ್-ಮೇನಲ್ಲಿ ಬಿಸಲಿನ ಪ್ರಖರತೆ ಇನ್ನೂ ಹೆಚ್ಚಾಗಲಿದೆ. ಹಾಗಾಗಿ, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ರಾಸುಗಳ ಬಳಕೆಗೆ ನಿರ್ಮಿಸಿರುವ ತೊಟ್ಟಿಗಳಿಗೆ ಅಧಿಕಾರಿಗಳು ನೀರು ತುಂಬಿಸಲು ಕ್ರಮ ಕೈಗೊಳ್ಳಲಿ’ ಎಂದು ರೈತ ಮಲ್ಲಿಗೆಹಳ್ಳಿ ಮಹೇಶ್ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-37-1686345909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.