ಯಳಂದೂರು: ಪಟ್ಟಣದಲ್ಲಿ ಇಂದು ಬಕ್ರೀದ್ ಆಚರಣೆಗೆ ಮುಸ್ಲಿಮರು ಸಿದ್ಧತೆ ನಡೆಸಿದ್ದು, ಕುರ್ಬಾನಿ ಕೊಡುವ ಸಂಪ್ರದಾಯ ಇರುವುದರಿಂದ ಮಾರುಕಟ್ಟೆಯಲ್ಲಿ ಕುರಿ ಮೇಕೆಗಳ ಖರೀದಿ ಭರಾಟೆಯಿಂದ ನಡೆಯಿತು.

ಸಂತೆಗಳು ಮತ್ತು ಗ್ರಾಮೀಣ ಭಾಗಗಳಿಗೆ ತೆರಳಿದ್ದ ಮುಸ್ಲಿಮರು ಈಗಾಗಲೇ ಉತ್ತಮ ತಳಿಯ ಕುರಿ, ಟಗರುಗಳನ್ನು ಖರೀದಿಸಲು ಮುಂಗಡ ಹಣ ನೀಡಿ ಕಾಯ್ದಿರಿಸಿದ್ದರು.

ಕೊನೆ ಕ್ಷಣದಲ್ಲೂ ಉತ್ತಮ ತಳಿಯ ಕುರಿ– ಮೇಕೆಗಾಗಿ ಹುಡುಕಾಟ ನಡೆಸಿ, ಬೆಲೆ ತುಸು ಹೆಚ್ಚಾದರೂ ಖರೀದಿಸುವುದು ನಡೆಯಿತು. ಜಾನುವಾರು ಸಾಕಣೆದಾರರ ಮನೆಗಳಿಗೇ ಬಂದು ಖರೀದಿಸುತ್ತಿದ್ದರಿಂದ ಕುರಿ ಮೇಕೆ ಸಾಕಣೆದಾರರಿಗೆ ಒಂದಷ್ಟು ಆದಾಯ ಕೈಸೇರುವಂತಾಗಿದೆ.

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ನಲ್ಲಿ ಕುರ್ಬಾನಿ ಕೊಡಲು ಕುರಿಗಳನ್ನು ಖರೀದಿಸುವುದು ಮುಸ್ಲಿಮರಿಗೆ ಪ್ರತಿಷ್ಠೆಯ ವಿಚಾರ. ಹಬ್ಬಕ್ಕೆ ಹಲವು ತಿಂಗಳು ಇರುವಾಗಲೇ ಕೆಲವರು ಎಳೆಯ ಮರಿಗಳನ್ನು ಖರೀದಿಸಿ ಗುಣಮಟ್ಟದ ಆಹಾರ ನೀಡಿ ಬೆಳೆಸುತ್ತಾರೆ. ಕೆಲವರು ನೇರವಾಗಿ ಗ್ರಾಮಗಳು ಹಾಗೂ ಪೇಟೆಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಕೊಳ್ಳುತ್ತಾರೆ. ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಪಟ್ಟಣದ ಮಾರುಕಟ್ಟೆಗೆ ಬಂದು ಕುರಿಗಳನ್ನು ಕೊಂಡು ವಾಹನಗಳಲ್ಲಿ ತುಂಬಿಕೊಂಡು ಹೋಗುವುದಿದೆ.

ಜಾನುವಾರು ಸಾಕಣೆದಾರರು ಬಕ್ರೀದ್ನಲ್ಲಿ ಹೆಚ್ಚು ಮಾರಾಟ ಮಾಡುವ ತಳಿಗಳನ್ನೇ ತಾಲ್ಲೂಕಿನಲ್ಲಿ ಹೆಚ್ಚು ಸಾಕಣೆ ಮಾಡುತ್ತಾರೆ. ಉತ್ತಮ ದರ್ಜೆಯ ಕುರಿಯ ಒಂದಕ್ಕೆ ಕನಿಷ್ಠ ₹20 ಸಾವಿರದಿಂದ ₹ 50,000ದವರೆಗೆ ಬೆಲೆ ಇರುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಸಂತೇಮರಹಳ್ಳಿಯಲ್ಲಿ ಮಂಗಳವಾರ ಸಂತೆ, ತೆರಕಣಾಂಬಿಯಲ್ಲಿ ನಡೆಯುವ ಸಂತೆ, ನರಸೀಪುರದಲ್ಲಿ ನಡೆಯುವ ಸೋಮವಾರ ಸಂತೆ, ನಂಜನಗೂಡಿನಲ್ಲಿ ನಡೆಯುವ ಶುಕ್ರವಾರ ಸಂತೆಗಳಲ್ಲಿ ಕುರಿಗಳು ಹೆಚ್ಚು ಮಾರಾಟವಾಗುತ್ತವೆ. ಕುರಿಗಳಿಗೆ ಯಾವುದೇ ಖೂನಿ (ಗಾಯ) ಆಗದಿರುವುದನ್ನು ದೃಢಪಡಿಸಿಕೊಂಡು ಸ್ವಲ್ಪ ಬೆಲೆ ಹೆಚ್ಚಾದರೂ ಖರೀದಿಸುತ್ತಾರೆ ಎಂದು ಸಾಕಣೆದಾರ ಟಗರಪುರ ಮನು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಟಗರುಗಳಿಗೆ ಬೆಲೆ ಹೆಚ್ಚಾಗಿದೆ. ಸ್ಥಳೀಯ ಟಗರುಗಳ ಜೊತೆ ಬಂಡೂರು ಕುರಿಗಳಿಗೂ ಬೇಡಿಕೆ ತಂದಿತ್ತಿದೆ. ಕನಿಷ್ಠ ₹ 28 ಸಾವಿರದವರೆಗೂ ಕುರಿ ಮಾರಾಟವಾಗಿದೆ. ಹೊರ ರಾಜ್ಯದ ವ್ಯಾಪಾರಿಗಳು ಉತ್ತಮ ತಳಿಗಳಿಗೆ ಬೇಡಿಕೆ ಸಲ್ಲಿಸಿದ್ದರು ಎನ್ನುತ್ತಾರೆ ಗೂಳಿಪುರ ಪಾತಮ್ಮ.

₹ 1 ಲಕ್ಷಕ್ಕೆ 3 ಕುರಿ ಖರೀದಿ: ಪಟ್ಟಣದ ಯಾಸಿನ್ ಬೇಗ್ ಮಾತನಾಡಿ, ‘ಕಳೆದ ವರ್ಷ ಒಂದು ಕುರಿ ಖರೀದಿಸಿ ಸಾಕಣೆ ಮಾಡಿದ್ದೆವು. ಬಕ್ರೀದ್ ವಾರ ಇರುವಾಗ 2 ಕುರಿಗಳನ್ನು ಗ್ರಾಮೀಣ ಭಾಗದಿಂದ ಕೊಂಡಿದ್ದೇವೆ. ₹ 1 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ 3 ಟಗರುಗಳನ್ನು ಮನೆಯಲ್ಲಿಟ್ಟುಕೊಂಡು ಮೇಯಿಸುತ್ತಿದ್ದೆವು. ಮೂರರಲ್ಲಿ 1 ಸಾವಿಗೀಡಾಗಿದ್ದು 2 ಉಳಿದಿವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-37-2122595177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.