ಯಳಂದೂರು: ಹೂನ್ನೂರು ಗ್ರಾಮದ ಸುತ್ತ ಶನಿವಾರ ನಸುಕಿನಲ್ಲಿ ಬೀಸಿದ ಗಾಳಿ ಮಳೆಗೆ ಹತ್ತಾರು ಎಕರೆಗಳಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಧರೆಗೆ ಉರುಳಿದೆ. ಲಕ್ಷಾಂತರ ರೂಪಾಯಿ ಫಸಲು ನಾಶವಾಗಿದೆ ಎಂದು ರೈತರು ದೂರಿದರು.

ಶುಕ್ರವಾರ ದಿನಪೂರ್ತಿ ಮೋಡದ ವಾತಾವರಣ ಕಂಡುಬಂದಿತ್ತು. ತಡರಾತ್ರಿ ಮಳೆ ಆರಂಭವಾಗಿತ್ತು. ಗಾಳಿಯ ತೀವ್ರತೆ ಹೆಚ್ಚಾಗಿ, ಫಸಲಿಗೆ ಬಂದಿದ್ದ ಬಾಳೆಗಳೆ ಉರುಳಿವೆ. ಇದರಿಂದ ಹತ್ತಾರು ರೈತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಫಸಲು ಕೈತಪ್ಪಿದೆ ಎಂದು ರೈತರಾದ ಸ್ವಾಮಿ ಮತ್ತು ಮಲ್ಲಣ್ಣ ಅಲವತ್ತುಕೊಂಡರು.

‘12 ಗ್ರಾಮ ಪಂಚಾಯಿತಿಗಳ ಪೈಕಿ ಹೊನ್ನೂರಿನಲ್ಲಿ ಹೆಚ್ಚು ಮಳೆಯಾಗಿದೆ. ಮಧ್ಯರಾತ್ರಿ ಭಾರಿ ಗಾಳಿ ಬೀಸಿದ ಪರಿಣಾಮ ಸುಮಾರು 15 ಎಕರೆ ಬಾಳೆ ಬೆಳೆಗೆ ಹಾನಿಯಾಗಿದೆ. ಬೆಳೆ ನಾಶದ ಅಂದಾಜು ಪಟ್ಟಿ ತಯಾರಿ ನಡೆಸಲಾಗುತ್ತಿದೆ’ ಎಂದು ಸಹಾಯಕ ತೋಟಗಾರಿಕಾ ಅಧಿಕಾರಿ ಬಿ.ವಿ.ಶಿವರಂಜನಿ ಹೇಳಿದರು.

ಗ್ರಾಮ ಲೆಕ್ಕಾಧಿಕಾರಿ ಸುಹಾಸ್ ಹಾಗೂ ರೈತರು ಇದ್ದರು.

ಮೇ. 15 ರಿಂದ ಮೇ 16ರ ಬೆಳಗಿನ ಅವಧಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಮಳೆಯಾಗಿದೆ. ಚಿಕ್ಕಾಟಿ 30.5 ಮಿ.ಮೀ. ಕುಂತೂರು, ಕೊಳ್ಳೇಗಾಲ 27, ನಿಟ್ರೆ 25.5, ಟಗರುಪುರ 24.5, ಉಮ್ಮತ್ತೂರು 20.5, ಕುಲಗಾಣ 20.5, ಹೊರೆಯಾಲ 19.5, ಕುದೇರು 13.5, ಹರಳೆ 13.5, ಮುಳ್ಳೂರು 10.5, ಮುಕ್ಕಡಹಳ್ಳಿ 9.5 ಮಿ.ಮೀ ಮಳೆಯಾಗಿದೆ ಎಂದು ಹಮಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-37-1945005998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.