ಯಳಂದೂರು: ‘ಕಾಯ (ಉದರ) ತುಂಬಿಸಿಕೊಳ್ಳಲು ಕಾಯಕ ಮಾಡುತ್ತಲೇ ಇರಬೇಕು. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಪರಿಕಲ್ಪನೆಯನ್ನು ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿಯೇ ಜನಮನಕ್ಕೆ ಮುಟ್ಟಿಸಿದ್ದರು’ ಎಂದು ಪಟ್ಟಣದ ಜೆಎಂಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ್ ಹೇಳಿದರು.

ಪಟ್ಟಣದ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಡೀ ವಿಶ್ವವೇ ಇಂದು ಯುದ್ಧದ ಸನಿಹಕ್ಕೆ ಬಂದು ನಿಂತಿದೆ. ಸಂಘರ್ಷ ಹಾಗೂ ಸುಳ್ಳಿನ ನಡುವೆ ದೇಶ ಕಟ್ಟಲು ಹೊರಟವರಿಗೆ ಬಸವಾದಿ ಶರಣರ ತತ್ವಗಳ ಚಿಂತನೆ, ಸಮಾನತೆಯ ಪರಿಕಲ್ಪನೆಗಳನ್ನು ಮನವರಿಕೆ ಮಾಡಿಕೊಡಬೇಕು. ಬಂಢಾರ ಹೆಚ್ಚಿಸಿಕೊಳ್ಳುವುದಕ್ಕೆ ಆದ್ಯತೆ ನೀಡದೆ ಜನ ಸಾಮಾನ್ಯರ ದುಃಖ ದುಮ್ಮಾನ, ಬವಣೆಗಳನ್ನು ಪರಿಹರಿಸಲು ಬದುಕಿನುದ್ದಕ್ಕೂ ಶ್ರಮಿಸಿದ ಸಂತ ಬಸವಣ್ಣ’ ಎಂದು ಅವರು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಲೋಕಕ್ಕೆ ಸರಳ ಭಾಷೆಯಲ್ಲಿ ಬೋಧಿಸುವ ಶಿಷ್ಯ ವರ್ಗವನ್ನು ಹುಟ್ಟುಹಾಕಿದರು. ಹಣ, ಅಧಿಕಾರಕ್ಕೆ ಮನಸೋಲದೆ ಸಮಾನತೆಗೆ ಶ್ರಮಿಸಿದರು. ಪ್ರಜಾರಾಜ್ಯದ ಕಲ್ಪನೆಗಳನ್ನು ಹುಟ್ಟು ಹಾಕಿ, ಮಹಾ ಮನೆ, ಪ್ರಸಾದ ವಿತರಣೆ, ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ವಿವರಿಸಿದರು. ವಿದ್ಯಾರ್ಥಿಗಳಾದ ಸುಮಾ, ಮಹೇಶ್ ಹಾಗೂ ಉಪನ್ಯಾಸಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-37-94389431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.