ಯಳಂದೂರು: ಗ್ರಾಮೀಣ ಪ್ರದೇಶದಲ್ಲಿ ಬೀಟ್ರೂಟ್ ಬೆಲೆ ಕುಸಿದಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಟಾವು ಮಾಡಲಾದ ಬೆಳೆಯನ್ನು ಮಾರುಕಟ್ಟೆಗೆ ಸಾಗಣೆ ಮಾಡಲು ಯೋಚಿಸಬೇಕಾದ ಸ್ಥಿತಿಗೆ ರೈತರು ತಲುಪಿದ್ದಾರೆ. ರಸ್ತೆ ಬದಿಯ ಕಾರ್ಮಿಕರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಿದ್ದಾರೆ.

ತಾಲ್ಲೂಕಿನ ಸುತ್ತಮುತ್ತ ಮಿಶ್ರ ಕೃಷಿಯಲ್ಲಿ ಬೀಟ್ರೂಟ್, ಮೆಣಸಿನಕಾಯಿ ಹಾಗೂ ಕಲ್ಲಂಗಡಿ ಬೆಳೆದಿದ್ದಾರೆ. ಕೆಲವರು ಅಲ್ಪಾವಧಿಯಲ್ಲಿ ಕಟಾವಿಗೆ ಬರುವ ಟೊಮೆಟೊ ಮತ್ತು ಬದನೆ ಬಿತ್ತನೆ ಮಾಡಿದ್ದಾರೆ.

ಆದರೆ, ಹಬ್ಬಗಳ ಸಾಲಿನಲ್ಲೂ ತರಕಾರಿ ಬೆಳೆಗಳ ಬೇಡಿಕೆ ಹೆಚ್ಚಾಗಿಲ್ಲ. ಗುಣಮಟ್ಟದ ಫಸಲು ಬಂದರೂ ಮಾರುಕಟ್ಟೆ ತಲುಪಿಸಲೂ ಬಿಡಿಗಾಸು ಇಲ್ಲದಂತೆ ಪರಿಸ್ಥಿತಿ ಇದೆ. ಬೆಲೆ ಕುಸಿದ ಪರಿಣಾಮ ರೈತರಿಗೆ ಹಾಕಿದ ಬಂಡವಾಳವೂ ಕೈಬಿಟ್ಟು ಹೋಗುವ ಸ್ಥಿತಿ ತಂದಿತ್ತಿದೆ.

‘ಕಬ್ಬಿನ ತಾಕಿನಲ್ಲಿ ಬೀಟ್ರೂಟ್ ಬೆಳೆದಿದ್ದೇನೆ. ಬೆಳೆಯೂ ಸಮೃದ್ಧವಾಗಿ ಬಂದಿದೆ. ದೊಡ್ಡ ಗಾತ್ರದ ಕಾಯಿಗಳು ಕೈ ಸೇರಿವೆ. ಆದರೆ, ಬೆಲೆ 1 ಕೆ.ಜಿಗೆ ₹6ರಿಂದ 7ಕ್ಕೆ ಇಳಿದಿದೆ. ಕೊಳ್ಳುವವರು ಹೊಲದ ಕಡೆ ತಿರುಗಿಯೂ ನೋಡುತ್ತಿಲ್ಲ. ಕೊಯ್ಲು, ಸಾಗಣೆ ಹಾಗೂ ನಿರ್ವಹಣಾ ವೆಚ್ಚ ಲೆಕ್ಕ ಹಾಕಿದರೆ ಬೆಳೆದ ಸ್ಥಳದಲ್ಲಿಯೇ ಫಸಲು ಬಿಡುವಂತಾಗಿದೆ. 10 ಕ್ವಿಂಟಲ್ ಬೀಟ್ರೂಟ್ ಕಟಾವು ಮಾಡಿದ್ದೇನೆ’ ಎನ್ನುತ್ತಾರೆ ಗೂಳಿಪುರ ತರಕಾರಿ ಬೆಳೆಗಾರ ಜಯಣ್ಣ.

‘ಬದನೆಯನ್ನು ಫಸಲಿನ ಸಮೇತ ಹೊಲಕ್ಕೆ ಉಳಿಮೆ ಮಾಡಿದ್ದೇನೆ. ಟೊಮೆಟೊ ಕಟಾವು ಮಾಡದೆ ಬಿಟ್ಟಿದ್ದೇನೆ. ಇದರಿಂದ ಮೂರು ನಾಲ್ಕು ತಿಂಗಳಲ್ಲಿ ತರಕಾರಿ ಕೃಷಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಹಾಗಾಗಿ, ತರಕಾರಿ ಕೃಷಿಕರಿಗೆ ತೋಟಗಾರಿಕಾ ಇಲಾಖೆ ನಷ್ಟ ಭರಿಸಿಕೊಡಬೇಕು. ಬೆಲೆ ಮತ್ತು ಬೇಡಿಕೆ ಬರುವ ತನಕ ಸಂಗ್ರಹಿಸಲು ಕೋಯ್ಲೋತ್ತರ ತಂತ್ರಜ್ಞಾನ ನೀಡುವತ್ತ ಮುಂದಾಗಲಿ’ ಎನ್ನುವರು.

‘ಬಿಸಿಲು ಹೆಚ್ಚಾಗಿದೆ. ಆಗಾಗ ಮಳೆಯೂ ಕಾಡಿದೆ. ಇದರಿಂದ ಹಣ್ಣು, ತರಕಾರಿ ಬೆಳೆಗಳಿಗೆ ಶೀತ ಸೇರಿದೆ. ತಾಪವೂ ಆವರಿಸಿ ಕೀಟಬಾಧೆ ತಗುಲಿದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಗೆ ಸಿಲುಕಿದ ಕಲ್ಲಂಗಡಿ ಬೆಳೆ ಗುಣಮಟ್ಟ ಕಳೆದುಕೊಂಡು ಕೊಳೆಯುವ ಸ್ಥಿತಿ ಮುಟ್ಟಿದೆ’ ಎನ್ನುವರು ಸಾಗುವಳಿದಾರರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-37-272620279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.