ಯಳಂದೂರು: ದಶಕಗಳ ಹಿಂದೆ ಗ್ರಾಮೀಣ ಜನರ ಜೀವನಾಡಿಯಾಗಿದ್ದ ಬೈಸಿಕಲ್ (ಸೈಕಲ್) ಬದಲಾದ ಕಾಲಘಟ್ಟದಲ್ಲಿ ಊರು–ಕೇರಿಯಿಂದ ಕಣ್ಮರೆಯಾಗುತ್ತಿದೆ. ಜೀವಕ್ಕೆ ಹಾಗೂ ಪರಿಸರ ಸ್ನೇಹಿಯಾದ ಸೈಕಲ್ಗಳ ಜಾಗವನ್ನು ದ್ವಿಚಕ್ರ ವಾಹನಗಳು ಅತಿಕ್ರಮಿಸಿಕೊಂಡಿದ್ದು, ಸೈಕಲ್ಗಳು ಮನೆಯ ಮೂಲೆ ಸೇರಿಕೊಂಡಿದ್ದು ತುಕ್ಕು ಹಿಡಿದಿವೆ.

ತಾಲ್ಲೂಕಿನ ನೂರಾರು ಗ್ರಾಮ, ಪಟ್ಟಣ ಹಾಗೂ ಪೇಟೆಗಳಲ್ಲಿ ಹಿಂದೊಮ್ಮೆ ಸೈಕಲ್ಗಳದ್ದೇ ಅಬ್ಬರ ಇತ್ತು. ಸವಾರರಿಗೆ ಬೈಕ್ಗಳ ಮೇಲಿನ ಮೋಹ ಹೆಚ್ಚಾದಂತೆಲ್ಲ ಸೈಕಲ್ಗಳು ರಸ್ತೆಗಳಿಂದ ಮರೆಯಾಗುತ್ತಾ ಬಂದವು, ಸೈಕಲ್ಗಳು ಕಣ್ಮರೆಯಾಗುತ್ತಿದ್ದಂತೆ ಅವುಗಳನ್ನೇ ನಂಬಿಕೊಂಡಿದ್ದ ಸೈಕಲ್ ಶಾಪ್ಗಳು ಕೂಡ ಹಂತಹಂತವಾಗಿ ಮುಚ್ಚುತ್ತಾ ಬಂದಿವೆ.

ಜೊತೆಗೆ ಪಂಕ್ಚರ್ ಹಾಕುವ, ಸೈಕಲ್ ರಿಪೇರಿ ಮಾಡುವವರು ಕೂಡ ಅನ್ಯ ವೃತ್ತಿಗಳತ್ತ ಮಗ್ಗುಲು ಬದಲಿಸಿದ್ದಾರೆ. ಪಟ್ಟಣಗಳಿಂದ ಹೋಲ್ಸೇಲ್ ದರದಲ್ಲಿ ಸೈಕಲ್ ಬಿಡಿ ಭಾಗಗಳನ್ನು ಮಾರಾಟ ಮಾಡುವ ಹಳ್ಳಿಯ ಸಣ್ಣ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಸೈಕಲ್ ಬಾಡಿಗೆಗೆ ದೊರೆಯುತ್ತದೆ ಎಂಬ ಫಲಕಗಳು ಧರಾಶಾಯಿಯಾಗಿದೆ. ಪ್ರಸ್ತುತ ಅಲ್ಲೊಂದು, ಇಲ್ಲೊಂದು ಸೈಕಲ್ ಶಾಪ್ಗಳು ಮಾತ್ರ ಉಳಿದುಕೊಂಡಿವೆ.

ಹೊಲ–ಗದ್ದೆ, ತಿಟ್ಟು ತೆವರುಗಳಲ್ಲಿ ಸೈಕಲ್ ತುಳಿಯುತ್ತಾ. ಹಳೆಯ ಸಿನಿಮಾ ಹಾಡುಗಳನ್ನು ಗುನುಗುತ್ತಾ ಗಾಂಭೀರ್ಯದಿಂದ ಸಂಚರಿಸುತ್ತಿದ್ದ ರೈತರು ಪ್ರಸ್ತುತ ಕಾಣಸಿಗದಾಗಿದ್ದಾರೆ. ‘ಹಲವು ದಶಕಗಳಿಂದ ಬಸ್ ನಿಲ್ದಾಣದ ಬಳಿ ಇದ್ದ ಸೈಕಲ್ಶಾಪ್ನಲ್ಲಿ 50ಕ್ಕೂ ಹೆಚ್ಚು ಸೈಕಲ್ಗಳನ್ನು ಬಾಡಿಗೆ ನೀಡುತ್ತಿದ್ದೆವು. ಸೈಕಲ್ ಶಾಪ್ ತೆಗೆಯುವವರಿಗೂ ಬ್ಯಾಂಕುಗಳು ಆರ್ಥಿಕ ನೆರವು ನೀಡುತ್ತಿದ್ದ ಕಾಲ ಹಿಂದೆ ಇತ್ತು.

ಸೈಕಲ್ ಶಾಪ್ ವೃತ್ತಿಯನ್ನೇ ನಂಬಿ ಹಲವು ಕುಟುಂಬಗಳು ಬದುಕಿನ ಬಂಡಿ ಎಳೆಯುತ್ತಿದ್ದವು. ಇಂದು ಸೈಕಲ್ಗಳನ್ನು ಸಾರಿಗೆಯ ಮೊದಲ ಆದ್ಯತೆಯಾಗಿ ಪರಿಗಣಿಸುವವರು ಇಲ್ಲದಂತಾಗಿದೆ. ಸೈಕಲ್ಗಳನ್ನು ಗಂಟೆ ಹಾಗೂ ದಿನದ ಲೆಕ್ಕದಲ್ಲಿ ಬಾಡಿಗೆ ನೀಡುವ ವ್ಯಾಪಾರ ಸಂಪೂರ್ಣ ಕಣ್ಮರೆಯಾಗಿದೆ.

ಸಣ್ಣ ಸಂಚಾರಕ್ಕೂ ಜನರು ಬೈಕ್ ಮತ್ತು ಕಾರುಗಳನ್ನು ಬಳಕೆ ಮಾಡುತ್ತಿದ್ದು, ಸೈಕಲ್ಗಳು ಅಸ್ತಿತ್ವ ಕಳೆದುಕೊಂಡಿದೆ. ಪ್ರತಿದಿನ ಸಾವಿರಾರು ರೂಪಾಯಿ ವರಮಾನ ತಂದುಕೊಡುತ್ತಿದ್ದ ಸೈಕಲ್ ಶಾಪ್ ಉದ್ಯಮವೂ ನೆಲಕಚ್ಚಿದೆ ಎಂದು ಬೇಸರದಿಂದ ಹೇಳುತ್ತಾರೆ ಪಟ್ಟಣದ ಮಂಜುನಾಥ್.

ಪ್ರತಿನಿತ್ಯ ಜನರು ಸೈಕಲ್ ಬಳಸುವುದರಿಂದ ದೇಹದ ದೃಢತೆ ಹೆಚ್ಚಾಗಲಿದೆ. ಹೃದಯಾಘಾತ, ಪಾರ್ಶ್ವವಾಯು ಬರುವುದನ್ನು ತಡೆಯಬಹುದು, ದೇಹದಲ್ಲಿ ರಕ್ತ ಸಂಚಲನ ಸುಲಲಿತವಾಗಿ ಇರಲಿದೆ. ಜೊತೆಗೆ ಪರಿಸರ ಸ್ನೇಹಿ, ಇಂಧನ ಬೇಡದ, ಆರ್ಥಿಕ ಸುಸ್ಥಿರತೆಗೆ ನೆರವಾಗುವ ಸೈಕಲ್ ಬಳಕೆ ಜನ ಸಮುದಾಯದ ಆರೋಗ್ಯಕ್ಕೆ ನೆರವಾಗಿದೆ ಎಂದು ಪಟ್ಟಣದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳುತ್ತಾರೆ.

ಪ್ರಸ್ತುತ ರಸ್ತೆಗಳಲ್ಲಿ ವಾಹನಗಳ ಹೊಗೆ ಸೂಸುವ ವಾಹನಗಳ ಅಬ್ಬರವೇ ಹೆಚ್ಚಾಗಿದೆ. ವಾಹನಗಳಲ್ಲಿ ಬಳಸುವ ಅತಿಯಾದ ಇಂಧನದಿಂದಪ್ರಕೃತಿಯಲ್ಲಿ ಹಸಿರು ಮನೆ ಪರಿಣಾಮ ಉಂಟಾಗಿ, ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ದೇಶದ ಮೇಲಿನ ಆರ್ಥಿಕ ಹೊರೆಯೂ ಹೆಚ್ಚಾಗುತ್ತಿದೆ. ಬೈಸಿಕಲ್ ಬಳಕೆ ಯನ್ನು ಉತ್ತೇಜಿಸುವುದರಿಂದ ಆರೋಗ್ಯ ಮತ್ತು ಆರ್ಥಿಕತೆಯಲ್ಲಿ ಚೇತರಿಕೆ ಕಾಣಬಹುದು ಎನ್ನುತ್ತಾರೆ ಸೈಕಲ್ ಪ್ರಿಯರು.

2018ರ ಜೂನ್
3ರಂದು ವಿಶ್ವ ಸಂಸ್ಥೆಯು
ಸದಸ್ಯ ರಾಷ್ಟ್ರಗಳಲ್ಲಿರುವ
ಜನರಲ್ಲಿ ಸೈಕಲ್ ಜನಪ್ರಿಯ
ಗೊಳಿಸಲು ಸೈಕಲ್ ದಿನವನ್ನು ಆಚರಿಸುವಂತೆ ಕರೆ ನೀಡಿದೆ. ಸವಾರರಿಗೆ ಪ್ರತ್ಯೇಕ ಪಥಗಳನ್ನು
ಕಾಯ್ದಿಟ್ಟು, ದೈಹಿಕ ಸಾಮರ್ಥ್ಯ ವೃದ್ಧಿಸಲು ಸೈಕಲ್ ಬಳಸುವಂತೆ ಸಲಹೆ ನೀಡಿದೆ. ಸೈಕಲ್ ಜಾಥಾ, ಸೈಕಲ್ ಸ್ಪರ್ಧೆ, ಬೆಟ್ಟ ಗುಡ್ಡಗಳಲಿ ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಿ, ಸೈಕಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ‘ಭವಿಷ್ಯದ ಹಸಿರೀಕರಣಕ್ಕಾಗಿ ಸೈಕ್ಲಿಂಗ್’
ಈ ವರ್ಷದ ಧ್ಯೇಯವಾಗಿದೆ.

ಪ್ರತಿದಿನ ಸೈಕಲ್ ತುಳಿಯುತ್ತಿರುವುದರಿಂದ ದೇಹ ಗಟ್ಟಿಯಾಗಿದೆ. ಮಂಡಿ ನೋವು ಮಾಯವಾಗಿದೆ. ಪ್ರತಿದಿನ ಉಲ್ಲಾಸ ತುಂಬುತ್ತದೆ

–ಕಂದಹಳ್ಳಿ ಮಹದೇವನಾಯಕ, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.