ಯಳಂದೂರು: ತಾಲ್ಲೂಕಿನ ಬಿಳಗಿರಂಗನ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಗರುಡೋತ್ಸವ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ತೇರು ಎಳೆದರು.

ಮಧ್ಯಾಹ್ನ ನಡೆದ ಗರುಡೋತ್ಸವ ಸೇವೆಯಲ್ಲಿ ರಂಗನಾಥನ ಬೆಳ್ಳಿ ದಂಡಕಗಳನ್ನು ಹೊತ್ತು ಭಕ್ತರು ದೇವಸ್ಥಾನದ ಸುತ್ತಲೂ ಸಾಗಿ ಹರಕೆ ಸಲ್ಲಿಸಿದರು.

ವಾರಾಂತ್ಯ ದಿನ ಹಾಗೂ ಬೇಸಿಗೆ ರಜೆಯಿಂದಾಗಿ ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಅಮಾವಾಸ್ಯೆ ಪೂಜೆ ಹಾಗೂ ಬಿದ್ದ ಆಂಜನೇಯ ದೇವಸ್ಥಾನದಲ್ಲಿ ಜರಗಿದ ಪೂಜೆ,ಮಹಿಳೆಯರು ಮತ್ತು ಮಕ್ಕಳು ಭೇಟಿ ನೀಡಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.

‘ರಾತ್ರಿ ತುಂತುರು ಮಳೆ ಸುರಿದ ಹಿತಕರವಾದ ವಾತಾವರಣ ನಿರ್ಮಾಣವಾಗಿತ್ತು. ಬೆಳಗಿನಿಂದಲೇ ಮೋಡ ಮತ್ತು ಮಂಜಿನ ಹೊದಿಕೆ ರೂಪಿತವಾಗಿತ್ತು. ಇದು ಬಿಆರ್ಟಿ ನಿಸರ್ಗದಲ್ಲಿ ಸುಂದರ ಅನುಭೂತಿ ಸೃಷ್ಟಿಸಿತ್ತು’ ಎಂದು ದೇವಳದ ಪಾರುಪತ್ತೆಗಾರ ರಾಜು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-37-292341739

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.