ಯಳಂದೂರು: ಪಟ್ಟಣದ ನಡುವೆ ಹಾದು ಹೋಗಿರುವ ರಾಜ ಕಾಲುವೆಗಳಲ್ಲಿ ಘನತ್ಯಾಜ್ಯ ತುಂಬಿ ದುರ್ವಾಸನೆಗೆ ಕಾರಣವಾಗಿದೆ. ಗ್ರಾಮೀಣ ಭಾಗಗಳ ಚರಂಡಿ ನೀರು, ಪ್ಲಾಸ್ಟಿಕ್ ಹಾಗೂ ನೀರಿನ ಬಾಟಲಿ ರಾರಾಜಿಸುತ್ತಿದ್ದು, ಸುತ್ತಮುತ್ತಲ ನಿವಾಸಿಗಳ ನಿದ್ದೆಗೆಡಿಸಿದೆ.

ಹೊಲ, ಗದ್ದೆಗಳಿಂದ ಸುತ್ತುವ ರಿದಿರುವ ಪಟ್ಟಣದಲ್ಲಿ 12 ವಾರ್ಡ್ಗಳಲ್ಲಿ ಚರಂಡಿ ಮತ್ತು ಕಾಲುವೆ ಹಾದುಹೋಗಿದೆ. ಪಟ್ಟಣ ಮತ್ತು ಬಳೆಪೇಟೆ 2 ಭಾಗಗಳಾಗಿ ವಿಭಜನೆಯಾಗಿದ್ದು, ಇವೆರಡು ಜನವಸತಿ ನಡುವೆ ಸುವರ್ಣಾವತಿ ನದಿ ಹಾದುಹೋಗಿದೆ. ರಾಜ ಕಾಲುವೆಗಳ ಮೂಲಕ ಹರಿಯುವ ಚರಂಡಿ ತ್ಯಾಜ್ಯ ಕೆರೆ ಇಲ್ಲವೆ ಹೊಳೆಯನ್ನು ಸೇರುತ್ತಿದೆ. ಬೇಸಿಗೆಯಲ್ಲಿ ಬತ್ತಿಹೋಗುವ ನೀರಿನಲ್ಲಿ ಅನುಪಯುಕ್ತ ವಸ್ತುಗಳು ಸೇರಿ ಕಾಲುವೆಯಲ್ಲಿ ಕಲುಷಿತ ವಾತಾವರಣ ಸೃಷ್ಟಿಸುತ್ತದೆ. ಮಳೆ ಸುರಿದರೆ ಮಾತ್ರ ರಾಜಕಾಲುವೆ ತ್ಯಾಜ್ಯಕ್ಕೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ನಾಗರಿಕರು.

ಸುಮಾರು 10 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಇನ್ನೂ ಯುಜಿಡಿ ಸೌಲಭ್ಯ ಧಕ್ಕಿಲ್ಲ. ಹೀಗಾಗಿ, ರಾಜ ಕಾಲುವೆಯಲ್ಲಿ ಚರಂಡಿ ನೀರು ಮತ್ತು ಅನುಪಯುಕ್ತ ವಸ್ತುಗಳ ರಾಶಿ ಸೇರಿಕೊಂಡು ಕಲುಷಿತಗೊಳ್ಳುತ್ತದೆ. ಬೇಸಿಗೆಯಲ್ಲಿ ಸೊಳ್ಳೆ, ಕ್ರಿಮಿ ಕೀಟಗಳ ಸಂತತಿಯೂ ಸೇರಿ ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ. ಹಾಗಾಗಿ, ರಾಜ ಕಾಲುವೆಗಳ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎನ್ನುತ್ತಾರೆ ಪಟ್ಟಣದ ನಿವಾಸಿ ಮಂಗಳಮ್ಮ.

ಪ್ರತಿದಿನ ಸ್ವಚ್ಛತಾ ಕಾರ್ಯ: ‘ಪ್ರತಿ ದಿನ ರಾಜ ಕಾಲುವೆಯಲ್ಲಿ ತ್ಯಾಜ್ಯ ಹೆಚ್ಚಾಗಿ ಕೊಳಚೆ ನೀರಿನ ಹರಿವಿಗೆ ತೊಂದರೆ ಕಂಡುಬಂದರೆ ಪೌರ ಕಾರ್ಮಿಕರು ತಕ್ಷಣ ಸ್ವಚ್ಛತಾ ಕಾರ್ಯ ಆರಂಭಿಸುತ್ತಾರೆ. ಪಟ್ಟಣದ ಕಾಲುವೆಗಳಿಗೆ ಗ್ರಾಮೀಣ ಭಾಗದ ಮಲಿನ ತ್ಯಾಜ್ಯವೂ ಸೇರುವುದರಿಂದ ವರ್ಷಪೂರ್ತಿ ಘನ ತ್ಯಾಜ್ಯ ತುಂಬಿಕೊಳ್ಳುತ್ತದೆ. ಹಾಗಾಗಿ, ಪ್ರತಿ ದಿನ ಮೇಲ್ವಿಚಾರಣೆ ನಡೆಸಿ, ಚರಂಡಿ ಕಸವನ್ನು ಸಂಗ್ರಹಿಸಿ ಹೊರ ಸಾಗಿಸುವ ಕೆಲಸ ನಡೆಯುತ್ತದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-37-1383492384

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.