ಯಳಂದೂರು: ಸರ್ಕಾರಿ ಶಾಲೆಯ ಮಗುವಿಗೆ ಪ್ರತಿ ದಿನ ಹಾಲು ನೀಡುವ ಪರಿಪಾಠ ಇದೆ. ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ಆಹಾರ ಪೂರೈಕೆಯಲ್ಲಿ ವೈವಿಧ್ಯತೆ ತುಂಬಲು ಹಾಗೂ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಸಹಕಾರಿಯಾಗಿರುವ ಮೊಟ್ಟೆ ಜನಪ್ರಿಯ ಖಾದ್ಯವಾಗಿ ಮಕ್ಕಳನ್ನು ಆಕರ್ಷಿಸಿದೆ.

ತಾಲ್ಲೂಕಿನ 1 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಅಕ್ಷರ ದಾಸೋಹ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ತೀವ್ರ ಬಡತನದ ಕಾರಣಕ್ಕೆ ಶಾಲೆ ಬಿಟ್ಟ ಮಕ್ಕಳು ಸಹ ಮರಳಿಗೆ ಶಾಲೆಗೆ ಬಂದು ಕಲಿಯಲು ಅಕ್ಷರ ದಾಸೋಹ ಸಹಕಾರಿಯಾಗಿದೆ.

ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳು ಮಗುವಿನ ಕಲಿಕಾ ಚಟುವಟಿಕೆಗಳಿಗೆ ಆತ್ಮವಿಶ್ವಾಸ ತುಂಬಿದರೆ, ಗುಣಮಟ್ಟದ ಆಹಾರ ಪೂರೈಕೆ ಮಾನಸಿಕ ವಿಕಾಸ ಹಾಗೂ ಅಭ್ಯಾಸದಲ್ಲಿ ಏಕಾಗ್ರತೆ ರೂಪಿಸಲು ಸಹಾಯಕವಾಗಿದೆ. ಬುದ್ಧಿ ಮತ್ತು ಮನಸ್ಸಿಗೆ ಚೇತರಿಕೆ ತುಂಬುವ ಮೊಟ್ಟೆಯನ್ನು ಪ್ರತಿದಿನ ಮಕ್ಕಳಿಗೆ ನೀಡಿ ಕಲಿಕೆಗೆ ವೇಗ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹಿಂದೆ ವಿದ್ಯಾರ್ಥಿಗಳಿಗೆ ವಾರಕ್ಕೆ 2 ಬಾರಿ ಮೊಟ್ಟೆ ನೀಡಲಾಗುತ್ತಿತ್ತು. ಕಳೆದ ವರ್ಷದಿಂದ ಅಜೀಂ ಪ್ರೇಮ್ ಜೀ ಫೌಂಡೇಶನ್ ವಾರದಲ್ಲಿ 4 ದಿನ ಮೊಟ್ಟೆ ನೀಡುವುದನ್ನು ಆರಂಭಿಸಿದ ಬಳಿಕ ವಾರಪೂರ್ತಿ ಮೊಟ್ಟೆ ಸಿಗುತ್ತಿದೆ. ಶೇ 90 ವಿದ್ಯಾರ್ಥಿಗಳು ಮೊಟ್ಟೆ ಸೇವನೆಗೆ ಮುಂದಾಗಿದ್ದಾರೆ. ತಾಲ್ಲೂಕಿನ 5 ಸಾವಿರಕ್ಕೂ ಹೆಚ್ಚಿನ ಮಕ್ಕಳ ಹಸಿವು ನೀಗಿಸುವಲ್ಲಿ ಮೊಟ್ಟೆ ವರವಾಗಿ ಪರಿಣಮಿಸಿದೆ ಎಂದು ತಾಲ್ಲೂಕು ಬಿಸಿಯೂಟದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹೇಳಿದರು.

‘ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಯ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಮೊಟ್ಟೆಯ ಹಳದಿ ಭಾಗದಲ್ಲಿ ಕಬ್ಬಿಣದ ಅಂಶವಿದ್ದು, ರಕ್ತ ಹೀನತೆ ಕೊರತೆ ನೀಗಿಸುತ್ತದೆ. ಸೆಲೆನಿಯಂನಂತಹ ಖನಿಜ ಸತ್ವಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮೆದುಳನ್ನು ಚುರುಕಾಗಿ ಇಡುವಲ್ಲಿ ಮೊಟ್ಟೆ ಸೇವನೆ ಅಗತ್ಯ ಎನ್ನುತ್ತಾರೆ ಬನ್ನಿಸಾರಿಗೆ ಶಾಲೆಯ ವಿಜ್ಞಾನ ಶಿಕ್ಷಕ ಮಹೇಶ್.

ಬೆಲೆ ಹೆಚ್ಚಳ; ಶಿಕ್ಷಕರಿಗೆ ಸಂಕಷ್ಟ: ಪ್ರತಿದಿನ ಮೊಟ್ಟೆ ಧಾರಣೆಯಲ್ಲಿ ಏರಿಳಿತವಾಗುತ್ತಿದೆ. ಇದರಿಂದ ಶಿಕ್ಷಕರು ಹೆಚ್ಚುವರಿ ಬೆಲೆಯನ್ನು ಭರಿಸಬೇಕಿದೆ. ಕಳೆದ ವಾರ 1 ಮೊಟ್ಟೆಗೆ ₹7 ದರ ಕಂಡುಬಂದರೆ, ಈಗ ₹6.50 ಇದೆ. ಹಾಗಾಗಿ, ಮೊಟ್ಟೆ ಬೆಲೆ ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕರು ಹೇಳಿದರು.

ಮೊಟ್ಟೆಯನ್ನು ಬೇಯಿಸಲು ಶುದ್ಧ ನೀರು ಬಳಸಬೇಕು, 100 ಡಿಗ್ರಿ ಉಷ್ಣಾಂಶದಲ್ಲಿ ಬೇಯಿಸಿದರೆ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಮೊಟ್ಟೆ ಬಳಸಿ ಇತರೆ ಖಾದ್ಯಗಳನ್ನು ತಯಾರಿಸಿ ಸವಿಯಬಹುದು ಎನ್ನುತ್ತಾರೆ ಶಿಕ್ಷಕರಾದ ಸೌಮ್ಯಾ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-37-1370162301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.