ಯಳಂದೂರು: ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳು ಸದಾ ರೋಗಿಗಳು ಹಾಗೂ ಆರೈಕೆದಾರರಿಂದ ತುಂಬಿರುವ ತಾಣವಾಗಿ ಬದಲಾಗಿವೆ. ನೋವು, ಆತಂಕಗಳೇ ತುಂಬಿರುವ ಜಾಗದಲ್ಲಿ ರೋಗಿಗಳ ನೋವಿಗೆ ಮಿಡಿಯುವ, ಸೇವೆ ಮಾಡುವ, ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕುವ, ಮಾತ್ರೆಗಳನ್ನು ನೀಡಿ ಆರೈಕೆ ಮಾಡುವ, ಗಾಯಕ್ಕೆ ಮದ್ದು ಹಾಕಿ ಸಾಂತ್ವನ ಹೇಳುತ್ತ ಬ್ಯಾಂಡೇಜ್ ಸುತ್ತುವ, ನಡೆಯುವಾಗ ಊರುಗೋಲಾಗುವ ಶುಶ್ರೂಷಕರ ಸೇವೆ ಬಹಳಷ್ಟು ಸಂದರ್ಭಗಳಲ್ಲಿ ಗಮನಕ್ಕೆ ಬಾರದೆ ಉಳಿದುಬಿಡುತ್ತದೆ.

ಆಸ್ಪತ್ರೆಗಳಲ್ಲಿ ರೋಗಿಗಳ ಪಾಲಿನ ಆಶಾ ಕಿರಣವಾಗಿರುವ, ಕುಟುಂಬ ಸದಸ್ಯರಂತೆ ಶುಶ್ರೂಷೆ ಮಾಡುವ ದಾದಿಯರನ್ನು ಸ್ಮರಿಸುವ ಹಾಗೂ ಅವರ ಸೇವಾ ಕೈಂಕರ್ಯಕ್ಕೆ ಸಲಾಂ ಹೇಳಲು ಪ್ರತಿವರ್ಷ ಮೇ 12ರಂದು ವಿಶ್ವ ದಾದಿಯರ ದಿನ ಆಚರಿಸಲಾಗುತ್ತಿದೆ.

ಯಳಂದೂರು ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ 7 ದಶಕಗಳಿಂದಲೂ ಸೇವೆ ಸಲ್ಲಿಸುತ್ತ ಬಂದಿದೆ. ಪ್ರತಿದಿನ 500ಕ್ಕೂ ಹೆಚ್ಚಿನ ರೋಗಿಗಳು ಆರೋಗ್ಯ ತಪಾಸಣೆಗೆ, ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಾರೆ, ಹೊರ ರೋಗಿಗಳಾಗಿ, ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. 24 ಗಂಟೆಯೂ ಆರೈಕೆ ಇಲ್ಲಿ ಲಭ್ಯ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಷ್ಟೆ ದಾದಿಯರ ಶ್ರಮವೂ ಇದೆ.

ತಾಲ್ಲೂಕಿನಲ್ಲಿ 28 ಗ್ರಾಮಗಳಿದ್ದು ಬಿಳಿಗಿರಿ ರಂಗನ ಬೆಟ್ಟದ ಸುತ್ತಮುತ್ತ 10ಕ್ಕೂ ಹೆಚ್ಚಿನ ಪೋಡುಗಳು ಇವೆ. ಜಿಲ್ಲೆಯ ವಿವಿಧ ಭಾಗಗಳಿಂದಲೂ ಚಿಕಿತ್ಸೆ ಪಡೆಯಲು ರೋಗಿಗಳು ಪಟ್ಟಣದ ಆಸ್ಪತ್ರೆಗೆ ಬರುತ್ತಾರೆ. ಗ್ರಾಮೀಣ ಮಟ್ಟದಲ್ಲಿ 23 ಆಯುಷ್ಮಾನ್ ಆರೋಗ್ಯ ಮಂದಿರ (ಉಪ ಕೇಂದ್ರಗಳು) ಇವೆ. 12 ವೈದ್ಯರು, 32 ಮಂದಿ ಸ್ಟಾಫ್ ನರ್ಸ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂವರು ಸಿಎಚ್ಒಗಳು ಕೆಲಸ ಮಾಡುತ್ತಿದ್ದರು. ದಾದಿಯರು ಮತ್ತು 65 ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಜನ ಸಮುದಾಯಕ್ಕೆ ನೆರವಿನ ಹಸ್ತ ಚಾಚುತ್ತಿದ್ದಾರೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್.

ಆಸ್ಪತ್ರೆಯಲ್ಲಿ ಶುಶ್ರೂಷಕರ ಸೇವೆ ಅನನ್ಯ. ಶಸ್ತ್ರ ಚಿಕಿತ್ಸೆ, ರೋಗಿಗಳ ಆರೈಕೆ, ಕಾಲಕಾಲಕ್ಕೆ ವೈದ್ಯರು ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದು, ರೋಗಿಗಳ ಆರೋಗ್ಯ ಸ್ಥಿತಿಯನ್ನು ಸಂಬಂಧಿಕರಿಗೆ ವಿವರಿಸಿ ಹೇಳುವುದು, ಅಪಘಾತದಂತಹ ತುರ್ತು ಸಂದರ್ಭಗಳ್ಲಲಿ ಚಿಕಿತ್ಸೆಗೆ ನೆರವಾಗುವುದು ನರ್ಸ್ಗಳ ಆದ್ಯತೆಯ ಕಾರ್ಯ.

ಹೀಗೆ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಶುಶ್ರೂಷಕರ ಪೈಕಿ ಸ್ತ್ರೀಯರ ಸಂಖ್ಯೆಯೇ ಹೆಚ್ಚು. 45ಕ್ಕೂ ಹೆಚ್ಚಿನ ಶುಶ್ರೂಷಕರು ರೋಗಿಗಳ ಸೇವೆಗೆ ಸದಾ ಸಿದ್ಧರಿರುತ್ತಾರೆ ಎಂದು ಶುಶ್ರೂಷಕ ಅಧಿಕಾರಿ ಪೂರ್ಣಿಮಾ ಹೇಳುತ್ತಾರೆ.

ಇದೇ ಆಗಸ್ಟ್ ವೇಳೆಗೆ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಲಿದ್ದು 100 ಹಾಸಿಗೆಗಳ ಸಾಮರ್ಥ್ಯ ಹೊಂದಲಿದೆ. ಜೊತೆಗೆ ದಾದಿಯರ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ. ಪಟ್ಟಣದ ಆಸ್ಪತ್ರೆಯಲ್ಲಿರುವ ಸ್ಟಾಪ್ ನರ್ಸ್ಗಳಿಗೆ ಎಎನ್ಎಂ ಅಡಿ ನೇಮಕಗೊಂಡ ಸಹಾಯಕ ಶುಶ್ರೂಷಕಿಯರು ನೆರವಾಗುತ್ತಾರೆ. ಗುತ್ತಿಗೆ ಆಧಾರದಲ್ಲಿ ಹಲವು ನರ್ಸ್ಗಳು ಸೇವೆ ಸಲ್ಲಿಸುತ್ತಿದ್ದು, ದಿನದ 24 ಗಂಟೆ 3 ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಸಾಮಾನ್ಯ, ವಿಶೇಷ ವಾರ್ಡ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕಾಯಕದಲ್ಲಿ ತೊಡಗಿದ್ದಾರೆ. ಗರ್ಭಕೋಶ, ಹರ್ನಿಯಾ, ಇಎನ್ಟಿ, ಮೂಳೆ ಮತ್ತಿತರ ವಿಭಾಗಗಳಲ್ಲಿ ಹೆಚ್ಚಿನ ದಟ್ಟಣೆ ಇದ್ದು, ರೋಗಿಗಳ ಆರೈಕೆ, ಸೇವೆ ಹಾಗೂ ಸಾಂತ್ವನ ಹೇಳುವಲ್ಲಿ ದಾದಿಯರ ಕೊಡುಗೆ ಅಪಾರ’ ಎಂದು ವೈದ್ಯಾಧಿಕಾರಿ ಡಾ.ಎಚ್.ಶ್ರೀಧರ್ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-37-1118744812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.