ಯಳಂದೂರು: ‘ಬರದ ಬೆಳೆ’ ಎಂದು ರೈತರು ನಂಬಿಕೊಂಡಿರುವ ಹಲಸು ಈ ಬಾರಿ ಸಮೃದ್ಧ ಫಸಲು ಬಿಟ್ಟಿವೆ. ಬಯಲು ಸೀಮೆಗಳಲ್ಲಿ ಬೆಳೆದ ಹಲಸಿನ ಮರಗಳಿಗೆ ಉರಿ ಬಿಸಿಲು ವರವಾಗಿ ಪರಿಣಮಿಸಿದೆ.

ಹಲಸಿನ ಮರಗಳು ನೂರಾರು ಕಾಯಿಗಳನ್ನು ಕಚ್ಚಿದ್ದು ಬೆಳೆಗಾರರು ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಹಲಸಿನ ಹಣ್ಣಿನ ಸುಗ್ಗಿ ಕಾಣಿಸಿಕೊಂಡಿದ್ದು, ಮಳೆ ಋತುವಿಗೂ ಮೊದಲೇ ಹಲಸಿನ ಘಮಲು ಮನೆ ಮನಗಳಲ್ಲಿ ತುಂಬಲಿದೆ.

ತಾಲ್ಲೂಕಿನ ಹಲಸಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಕೆಂಪು, ಕೇಸರಿ ಮತ್ತು ಹಳದಿ ಬಣ್ಣದಿಂದ ಕೂಡಿರುವ ಸಿಹಿ ಮತ್ತು ಸ್ವಾದದಿಂದ ಕೂಡಿರುವ ಹಲಸು ಮಾರುಕಟ್ಟೆಗೆ ಬಂದಿದೆ. ರಸ್ತೆಗಳ ಬದಿ, ಸಂತೆ, ಪೇಟೆ, ಪಟ್ಟಣಗಳ ಬದಿಗಳಲ್ಲಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಹಿಡುವಳಿದಾರರು ಹಲಸನ್ನು ಆರ್ಥಿಕ ಬೆಳೆಯಾಗಿ ನೆಚ್ಚಿಕೊಂಡಿಲ್ಲ. ಹೊಸ ತಳಿಗಳ ಬಗ್ಗೆ ಒಲವು ಹೊಂದಿಲ್ಲ. ಪರಿಣಾಮ ಹಲಸು ತಾಲ್ಲೂಕು ದಾಟಿ ನೆರೆ ಜಿಲ್ಲೆ, ರಾಜ್ಯಗಳನ್ನು ತಲುಪಲಾಗದೆ ಗ್ರಾಮೀಣ ಪ್ರದೇಶಗಳಲ್ಲಷ್ಟೇ ಹಣ್ಣುಗಳ ವಹಿವಾಟು ಪೂರ್ಣಗೊಳ್ಳುತ್ತಿದೆ.

ಮಣ್ಣಿನ ಗುಣಕ್ಕೆ ಅನುಗುಣವಾಗಿ ಹಲಸಿನ ಗಾತ್ರ ಮತ್ತು ಗುಣಮಟ್ಟದಲ್ಲಿ ವೈವಿಧ್ಯತೆ ಇರುತ್ತದೆ. ಬಲಿತ ಹಣ್ಣು ಸುವಾಸನೆ ತುಂಬಿಕೊಳ್ಳುತ್ತದೆ. ಏಪ್ರಿಲ್-ಮೇ ನಡುವೆ ಕೊಯಿಲಿಗೆ ಬರುವ ಹಲಸು ಹಣ್ಣು ಮಾವಿನ ಜೊತೆ ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿ ಕಾಣುತ್ತದೆ. ಹಲಸಿನ ತೊಳೆ, ಬೀಜ ಮತ್ತು ಇತರೆ ಖಾದ್ಯಗಳಿಗೆ ಮನಸೋಲದವರಿಲ್ಲ. ಬಿಸಿಲಿನ ತೀವ್ರತೆ ಮುಂದುವರಿದಿರುವುದರಿಂದ ಹಲಸು ಇಳುವರಿ ವರ್ಷಪೂರ್ತಿ ಮುಂದುವರಿಯುವ ನಿರೀಕ್ಷೆ ಮೂಡಿಸಿದೆ ಎಂದು ಕಂದಹಳ್ಳಿ ವ್ಯಾಪಾರಿ ನಂಜುಂಡಸ್ವಾಮಿ ಹೇಳಿದರು.

ಕಳೆದ ಬೇಸಿಗೆಯಲ್ಲಿ ಸ್ಪಲ್ಪ ಮಳೆಯಾಗಿತ್ತು, ಈ ಬಾರಿ ಉಷ್ಣಾಂಶದ ತೀವ್ರತೆ ಹೆಚ್ಚಾಗಿದ್ದು, ಮಾವು ಮತ್ತು ಹಲಸಿನ ಬೆಳೆಗೆ ಪೂರಕವಾಗಿದೆ. ನೀರಾವರಿ ಮತ್ತು ಬಯಲು ಸೀಮೆಗಳಲ್ಲೂ ಹಲಸು ಹೆಚ್ಚಿನ ಫಸಲು ಬಂದಿದೆ. ತೋಟಗಳಲ್ಲಿ ಬೆಳೆದ ಹಲಸಿನ ಮರಗಳಿಗೆ ವ್ಯಾಪಾರಿಗಳು ಎರಡು ತಿಂಗಳು ಮುಂಚಿತವಾಗಿಯೇ ಮುಂಗಡ ನೀಡಿ ಫಸಲು ಕಾಯ್ದಿರಿಸಿದ್ದಾರೆ.

ಆರೋಗ್ಯ ವರ್ಧಕ: ಹಲಸು ದೇಹದ ಶಕ್ತಿ ಹೆಚ್ಚಳಕ್ಕೆ ಸಹಕಾರಿ, ಜೊತೆಗೆ ನೈಸರ್ಗಿಕ ಸಕ್ಕರೆಯ ಅಂಶವನ್ನು ದೇಹಕ್ಕೆ ಪೂರೈಸುತ್ತದೆ, ಸುಗಮ ರಕ್ತ ಸಂಚಾರಕ್ಕೆ, ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ, ಹೃದಯಾಘಾತ, ಪಾರ್ಶ್ವವಾಯು ಕಾಯಿಲೆ ತಡೆದು, ಮೈಕಾಂತಿ ಮತ್ತು ಕಣ್ಣಿನ ಶಕ್ತಿ ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-37-1026903001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.