ಯಳಂದೂರು: ತಾಲ್ಲೂಕಿನ ಹೊನ್ನೂರು ಮತ್ತು ಕೆಸ್ತೂರು ಮಾರ್ಗದ ಮಹಾವನ ಬುದ್ಧ ವಿಹಾರದಲ್ಲಿ ಬಂತೇಜಿ ಬುದ್ಧರತ್ನ ನೇತೃತ್ವದಲ್ಲಿ ಬೋಧಿ ಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನ ಆಚರಿಸಲಾಯಿತು.

ಈ ಸಂದರ್ಭ ಪಬ್ಬಜ (ತಾತ್ಕಾಲಿಕ ಬಿಕ್ಕು) ತರಬೇತಿ ಕಾರ್ಯಕ್ರಮ ಶನಿವಾರ ನಡೆಯಿತು. ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದಿದ್ದ ಶಿಬಿರಾರ್ಥಿಗಳು ಬೌದ್ಧ ಧರ್ಮದ ನಿಯಮದಡಿ ಕೆಸ್ತೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ‘ನಮ್ಮ ನಡಿಗೆ ಬುದ್ಧ ಸಂಘದ’ ಕಡೆಗೆ ಎಂಬ ಸಂದೇಶವನ್ನು ಸಾರಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪಿಂಡಪಾತ (ಆಹಾರ ಧಾನ್ಯ ಸ್ವೀಕಾರ) ಆಚರಣೆ ಮಾಡಿದರು. ಗ್ರಾಮದ ಉಪಾಸಕ ಮತ್ತು ಉಪಾಸಿಕ ಬಂಧುಗಳು ಬಿಕ್ಕು ಸಂಘದ ಸದಸ್ಯರನ್ನು ಆದರದಿಂದ ಬರಮಾಡಿಕೊಂಡರು. ಎಲ್ಲಾ ಬಿಕ್ಕುಗಳಿಗಳಿಂದ ಆಶೀರ್ವಚನ ಪಡೆದರು.

‘ಕ್ರಿಸ್ತಪೂರ್ವದ ಕಾಲಘಟ್ಟದಲ್ಲಿ ಇದ್ದ ಬೌದ್ಧ ಧರ್ಮದ ತತ್ವ ಮತ್ತು ಆಚರಣೆಗಳನ್ನು ಬಾಬಾ ಸಾಹೇಬರು ಅಧ್ಯಯನ ಮಾಡಿದ್ದರು’ ಎಂದು ಬಂತೇಜಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-37-839144195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.