ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಮೂಲಕಿ ಬೆಟ್ಟದ ಬೀಟ್ ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದು ಬುಧವಾರ ರಾತ್ರಿ ಸಾವಿಗೀಡಾಗಿದೆ. 40ರಿಂದ 50 ವರ್ಷ ವಯಸ್ಸಿನ ಆನೆ ಸಹಜವಾಗಿ ಸಾವೀಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

ನಿತ್ರಾಣಗೊಂಡು ಕಾಡಿನ ರಸ್ತೆಯ ಅಕ್ಕಪಕ್ಕ ಕಾಣಿಸಿಕೊಳ್ಳುತ್ತಿದ್ದ ಆನೆಗೆ ಬುಧವಾರ ಪಶು ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಆನೆ ನಿಧಾನವಾಗಿ ಕಾಡು ಸೇರಿತ್ತು ಎನ್ನಲಾಗಿದೆ. ಆನೆಗಳಿಗೆ ವಯಸ್ಸಾಗುತ್ತಿದ್ದಂತೆ ಆಹಾರ ಜಗಿಯುವ ಸಾಮರ್ಥ್ಯ ಕಳದುಕೊಳ್ಳುತ್ತವೆ. ತಮ್ಮ ಗುಂಪಿನಿಂದ ಬೇರೆಯಾಗುತ್ತವೆ. ಕೆಲವೇ ದಿನಗಳಲ್ಲಿ ನೈಸರ್ಗಿಕವಾಗಿ ಮರಣಹೊಂದುವ ವಿದ್ಯಮಾನ ಸಾಮಾನ್ಯ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಆರ್ಎಫ್ ಒ ಸತೀಶ್ ಹಾಗೂ ಗಸ್ತುಪಡೆ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-37-1694053219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.