ಯಳಂದೂರು: ಪಟ್ಟಣದಲ್ಲಿರುವ ದಿವಾನ್ ಪೂರ್ಣಯ್ಯ ಬಂಗಲೆಗೆ ಜಿಲ್ಲೆಯ ಪ್ರಥಮ ಸರ್ಕಾರಿ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಇದ್ದರೂ ಪ್ರವಾಸಿತಾಣವಾಗಿ ಗಮನ ಸೆಳೆಯಲು ವಿಫಲವಾಗಿದೆ. ಐತಿಹಾಸಿಕ ಮಹತ್ವ ಹೊಂದಿದ್ದರೂ ಪ್ರಚಾರದ ಕೊರತೆಯಿಂದ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿದೆ.

ಆಧುನಿಕ ಮೈಸೂರು ರೂವಾರಿಗಳಾದ ದಿವಾನ್ ಪೂರ್ಣಯ್ಯನವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಯಳಂದೂರು ಪಟ್ಟಣವನ್ನು ಹಿಂದೆ ಜಹಗೀರು ಪಡೆದಿದ್ದರು. ಪೂರ್ಣಯ್ಯನವರು ಮೃತಪಟ್ಟ ಬಳಿಕ ಅವರ ಮರಿ ಮೊಮ್ಮಗ ದಿವಾನ್ ಪೂರ್ಣಯ್ಯ ನರಸಿಂಗರಾವ್ ಕೃಷ್ಣಮೂರ್ತಿ ಅವರು ತಾತನ ಸ್ಮರಣೆಗಾಗಿ ಹಲವು ಬಂಗಲೆಗಳನ್ನು ನಿರ್ಮಿಸಿದ್ದು, ಅವುಗಳ ಪೈಕಿ ಹಲವು ಇಂದಿಗೂ ಸುಸ್ಥಿತಿಯಲ್ಲಿ ಉಳಿದುಕೊಂಡಿವೆ.

ಪಟ್ಟಣದ ಪೂರ್ಣಯ್ಯ ಬಂಗಲೆಯಲ್ಲಿ ಮೈಸೂರು ಮತ್ತು ತಂಜಾವೂರು ಶೈಲಿಯ ಹಲವು ಚಿತ್ರ ಪಟಗಳನ್ನು ಕಾಣಬಹುದು. ಕಲಾ ಗ್ಯಾಲರಿಯಲ್ಲೂ ಕಣ್ಮನ ಸೆಳೆಯುವ ಹಲವು ಕಲಾಕೃತಿಗಳನ್ನು ಇರಿಸಲಾಗಿದೆ. ಶಿಲ್ಪ–ಕಲ್ಪಗಳಿವೆ, ಶಿಲಾ ಶಾಸನಗಳು, ಜಿನ ಶಿಲ್ಪಗಳಿವೆ. ದಿವಾನ್ ಪೂರ್ಣಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಅಮೂಲ್ಯ ಆಮಂತ್ರಣ ಪತ್ರಗಳಿವೆ. ಆದರೂ ಮ್ಯೂಸಿಯಂ ಇತಿಹಾಸ ಪ್ರಿಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಪೂರ್ಣಯ್ಯ ಬಂಗಲೆ ನೇಪಥ್ಯಕ್ಕೆ ಸರಿಯುವ ಆತಂಕ ಎದುರಾಗಿದೆ.

'ಕಟ್ಟಡಕ್ಕೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ನಿರ್ವಹಣೆ ಕೊರತೆಯಿಂದ ಜೋತು ಬಿದ್ದಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಗೋಡೆಯ ಹೊರಭಾಗದ ಗಾರೆಗಳು ಉದುರುತ್ತಿವೆ. ಸುಂದರ ವಾಸ್ತು ವಿನ್ಯಾಸದ ಕಟ್ಟಡಕ್ಕೆ ಹಾನಿಯಾಗುವ ಅಪಾಯ ಇದೆ. ಪೂರ್ಣಯ್ಯ ಅವರ ಜೀವನ ಮತ್ತು ಸಾಧನೆಗಳ ಕಿರು ಪರಿಚಯವನ್ನು ನೀಡುವ ಕಲಾಕೃತಿಗಳು ನಶಿಸಿಹೋಗಬಹುದು’ ಎನ್ನುತ್ತಾರೆ ನಿವೃತ್ತ ಇತಿಹಾಸ ಪ್ರಾಧ್ಯಾಪಕ ರಮೇಶ್.

ಪೂರ್ಣಯ್ಯ ಬಂಗಲೆ ಯಳಂದೂರು ಪಟ್ಟಣದ ಹೆಗ್ಗುರುತು. 20ನೇ ಶತಮಾನದ ಆರಂಭದಲ್ಲಿ 4 ದಿಕ್ಕುಗಳಿಗೂ ಒಂದೊಂದು ಸುಭದ್ರವಾದ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಕೆಲವು ಅಳಿವಿನಂಚಿಗೆ ಸೇರಿದ್ದರೆ, 2011ರಲ್ಲಿ ಅಂದಿನ ಶಾಸಕ ಆರ್.ಧ್ರುವನಾರಾಯಣ್ ಈಗಿನ ಬಂಗಲೆ ಪುನರುಜ್ಜೀವನಕ್ಕೆ ನೆರವಾಗಿದ್ದರು. ನಂತರ ಪ್ರಾಚ್ಯ ಅವಶೇಷಗಳನ್ನು ಸಂಗ್ರಹಿಸಲು ‘ಮ್ಯೂಸಿಯಂ’ ನಿರ್ಮಿಸಿದ್ದರು ಎಂದು ಇತಿಹಾಸ ಪ್ರಿಯರು ಈಗಲೂ ಸ್ಮರಿಸುತ್ತಾರೆ.

ಮರ, ಕಬ್ಬಿಣ, ಬೆಲ್ಲ, ಸುಣ್ಣದಕಲ್ಲು ಬಳಸಿ ಬಂಗಲೆಯನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಎಂಜಿನಿಯರಿಂಗ್ ಕೌಶಲ ಹಾಗೂ ತಾಂತ್ರಿಕತೆಯಲ್ಲಿ ಮೂಡಿರುವ ಕಟ್ಟಡ 3 ಅಂತಸ್ತುಗಳನ್ನು ಹೊಂದಿದ್ದು ಮರದ ಮೆಟ್ಟಿಲುಗಳನ್ನು ಕಾಣಬಹುದು. ಕಟ್ಟಡದ ಎತ್ತರ ಸ್ಥಳದಲ್ಲಿ ನಿಂತರೆ ಬಿಳಿಗಿರಿ ಬೆಟ್ಟದ ಸಾಲು, ಮೈಸೂರು ಗಡಿ ಭಾಗಗಳನ್ನು ವೀಕ್ಷಿಸಬಹುದು. ಸುತ್ತಲೂ ಸುಂದರ ರಚನೆಗಳನ್ನು ಒಳಗೊಂಡಿದೆ. ಮಧ್ಯದಲ್ಲಿ ತೊಟ್ಟಿ, ಸುತ್ತಲೂ ಪಿಲ್ಲರ್ಗಳನ್ನು ಒಳಗೊಂಡ ಪಾರಂಪರಿಕ ಕಟ್ಟಡ ಇದೆ. ಕಟ್ಟಡವನ್ನು ನಿರ್ವಹಣೆ ಮಾಡಿದರೆ ಮತ್ತೊಂದು ಶತಮಾನ ಬಂಗಲೆಗೆ ದೃಢತೆ ಸಿಗಲಿದೆ.

ಪೂರ್ಣಯ್ಯ ದಿವಾನರಾಗಿ ಆಧುನಿಕ ಮೈಸೂರಿನ ನಿರ್ಮಾತೃ ಎನಿಸಿಕೊಂಡಿದ್ದರು.

ಗುಮಾಸ್ತರಾಗಿ ವೃತ್ತಿ ಆರಂಭಿಸಿ ಆರ್ಥಿಕ ತಜ್ಞರಾಗಿ ಬಳಿಕ ರಾಜಕೀಯದಲ್ಲಿ ಪಳಗಿದ ಪೂರ್ಣಯ್ಯ ಮುಂದೆ ದಕ್ಷಿಣ ಭಾರತದ ಕಂದಾಯ ಸುಧಾರಣೆಯಲ್ಲಿ ಜಾರಿಗೆ ತಂದ ನಿಯಮಗಳು ಇಂದಿಗೂ ಮುಂದುವರಿದಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-37-962804654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.