ಯಳಂದೂರು: ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಪೂರ್ವ ಮುಂಗಾರು ಸುರಿಯದ ಕಾರಣ ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ. ಈಚೆಗೆ ಸುರಿದ ಸಣ್ಣ ಮಳೆಗೆ ಬಿತ್ತಿದ್ದ ಬೆಳೆಯೂ ಬಿಸಿಲಿನ ತೀವ್ರತೆಗೆ ಒಣಗುತ್ತಿದ್ದು, ಇಳುವರಿಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.

ಬಯಲು ಸೀಮೆಯಲ್ಲಿ ಬಿತ್ತನೆ ಮಾಡಿದ್ದ ದ್ವಿದಳಧಾನ್ಯ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ. ಮಳೆ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ತಾಕಿನಲ್ಲಿ ತೇವಾಂಶದ ಕೊರತೆ, ಕೀಟಗಳ ಬಾಧೆಯೂ ರೈತರನ್ನು ಹೈರಾಣಾಗಿಸಿದೆ. ನೀರಾವರಿ ಭೂಮಿಯಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಿದ್ದ ಕೃಷಿಕರು ಮಾತ್ರ ಸಮೃದ್ಧ ಬೆಳೆ ಕೈಸೇರುವ ನಿರೀಕ್ಷೆಯಲ್ಲಿ ಇದ್ದಾರೆ.

‘ತಾಲ್ಲೂಕಿನಲ್ಲಿ ಕೃಷಿಕರು ಪೂರ್ವ ಮುಂಗಾರು ನಂಬಿ ಉದ್ದು, ಹೆಸರು, ಅಲಸಂದೆ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಸುರಿದ ಮಳೆಗೆ ಅಗರ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದ ಫಸಲು ಚೆನ್ನಾಗಿಯೇ ಚಿಗುರಿತ್ತು. ನಂತರ ಕಾಲಕ್ಕೆ ಸರಿಯಾಗಿ ಮಳೆಯಾಗದ ಪರಿಣಾಮ ಬೇಸಗೆಯ ಧಗೆ ಹೆಚ್ಚುತ್ತಾ ಹೋದಂತೆ ಬೆಳೆಗಳು ಒಣಗಲಾರಂಭಿಸಿವೆ. ಕಾಯಿ ಕಟ್ಟುವ ಹಂತದಲ್ಲಿ ಮಳೆ ಉತ್ತಮ ಸುರಿಯದ ಕಾರಣ ಸಮಸ್ಯೆಯಾಗಿದೆ’ ಎನ್ನುತ್ತಾರೆ ಕೃಷಿಕರು.

‘ನೀರಾವರಿ ಭೂಮಿಯಲ್ಲಿ ಫಸಲು ಸಮೃದ್ಧವಾಗಿ ಬಂದಿದೆ. ಅಂಬಳೆ, ಕಂದಹಳ್ಳಿ, ಮಾಂಬಳ್ಳಿ, ಬನ್ನಿಸಾರಿಗೆ ಸುತ್ತಮುತ್ತ ಬೆಳೆಲಾಗಿರುವ ಬೆಳೆಗಳು ಕಾಯಿ ಕಟ್ಟುವ ಹಂತ ಮುಟ್ಟಿವೆ. ಈ ಸಮಯದಲ್ಲಿ ಒಂದಷ್ಟು ಮಳೆ ಸುರಿದರೆ ಇಳುವರಿ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಹಸಿರು ಗೊಬ್ಬರವೂ ಮಣ್ಣಿಗೆ ಸಿಗಲಿದೆ. ಜಾನುವಾರುಗಳ ಮೇವಿನ ಅಗತ್ಯವೂ ನೀಗಲಿದೆ’ ಎಂದು ರೈತರಾದ ಅಗರ ಪುಟ್ಟಸುಬ್ಬಪ್ಪ ಹೇಳಿದರು.

‘ಬೆಳೆಗಳಿಗೆ ಮಳೆಯೇ ಆಧಾರ. ಮಳೆ ಬೀಳದಿದ್ದರೆ ಕಾಲುವೆ ಮತ್ತು ಕೆರೆಕಟ್ಟೆಗಳಲ್ಲಿ ನೀರಿನ ಅಭಾವ ತಲೆದೋರಲಿದೆ. ಹಾಗಾಗಿ, ಪೂರ್ವ ಮುಂಗಾರು ಅವಧಿಯಲ್ಲಿ ರೈತರು ಹೆಚ್ಚಾಗಿ ದ್ವಿದಳ ಧಾನ್ಯ ಬೆಳೆಗಳನ್ನು ಆಶ್ರಯಿಸುತ್ತಾರೆ. ಮಳೆ ಆಶ್ರಿತ ಪ್ರದೇಶದಲ್ಲಿ ಬಿತ್ತನೆಯಾದ ಬೆಳೆಗಳು ನೀರಿನ ಕೊರತೆ ಎದುರಿಸುತ್ತಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ.

ತಾಲ್ಲೂಕಿನಲ್ಲಿ 10.5 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದ್ದು, ಮುಂಗಾರು ಪೂರ್ವದಲ್ಲಿ 1,800 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ಹೆಸರು ಮತ್ತು ಅಲಸಂದೆ ಬೆಳೆಯುವ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ 300 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಮಿತಿಗೊಂಡಿದೆ. ಇದರಿಂದ ಸರಾಸರಿ ದ್ವಿದಳ ಧಾನ್ಯಗಳ ಇಳುವರಿ ಪ್ರಮಾಣ ಕುಸಿಯಲಿದೆ.

‘ಬೆಳೆಗಳಿಗೆ ಎದುರಾಗಿರುವ ಎಫಿಸ್ ಹೇನಿನ ಬಾಧೆ ನಿಯಂತ್ರಣಕ್ಕೆ 1 ಲೀಟರ್ ನೀರಿಗೆ 1.75 ಎಂ.ಎಲ್, ರೋಗರ್ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು’ ಎಂದು ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಸಲಹೆ ನೀಡಿದರು.

‘ಈ ಬಾರಿ ಕೊಳವೆ ನೀರಾವರಿ ಬಳಸಿಕೊಂಡು 250 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದ ರಾಗಿ ಮತ್ತು ಭತ್ತ ಉತ್ತಮ ಇಳುವರಿ ತಂದುಕೊಡಲಿದೆ. ಬಿಳಿಜೋಳ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಸುಳಿಕೊರಕ ಬಾಧೆ ಆವರಿಸಿದೆ. ಸಾಗುವಳಿದಾರರು ಕೃಷಿ ಇಲಾಖೆಯಲ್ಲಿ ಸಿಗುವ ರಸಾಯನಿಕ ಬಳಸಿ ಕೀಟಬಾಧೆ ತಪ್ಪಿಸಬಹುದು’ ಎನ್ನುತ್ತಾರೆ ಕೃಷಿ ತಜ್ಞ ಎ.ವೆಂಕಟರಂಗಶೆಟ್ಟಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-37-229883600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.