ಯಳಂದೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಸುತ್ತಮುತ್ತಲೂ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಹೆಚ್ಚಿನ ರೈತರು ರಾಗಿ ನಾಟಿಗೆ ಮುಂದಾಗಿದ್ದು, ವಿಶೇಷವಾಗಿ ಸ್ಥಳೀಯ ತಳಿಗಳ ಬಿತ್ತನೆ ಬಿರುಸು ಪಡೆದಿದೆ. ಕಬ್ಬು, ದ್ವಿದಳ ಧಾನ್ಯ ಹಾಗೂ ತೋಟಗಾರಿಕಾ ಬೆಳೆಗಳ ನಾಟಿಗೂ ಸಾಗುವಳಿದಾರರು ಚಿತ್ತ ಹರಿಸಿದ್ದಾರೆ.

ತಾಲ್ಲೂಕಿನ ಕೃಷಿ ಪ್ರದೇಶವು 10.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದೆ. ಇದರಲ್ಲಿ ಶೇ 60 ಭಾಗ ಕೆರೆ, ಕಾಲುವೆ ನೀರು ಬಳಸಿ ಬೇಸಾಯ ಮಾಡಲಾಗುತ್ತದೆ. ಶೇ 25 ಕೃಷಿಕರು ಮಳೆ ಮತ್ತು ಕೊಳವೆ ನೀರಾವರಿ ನಂಬಿಕೊಂಡು ಕಬ್ಬು, ಬಾಳೆ, ಅಡಿಕೆ, ತೆಂಗು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಮಾರ್ಚ್ ಆರಂಭದಲ್ಲಿ ಸುರಿದ ಮಳೆಯೂ ಬೇಸಿಗೆ ಹಂಗಾಮಿನ ಕೃಷಿಗೆ ಸಹಕರಿಸಿದ್ದು, ಏಪ್ರಿಲ್ ಮೊದಲ ವಾರದಲ್ಲಿ ರಾಗಿ ಬಿತ್ತನೆ ಪ್ರದೇಶ 150 ಹೆಕ್ಟೇರ್ಗೆ ವಿಸ್ತರಿಸಿದೆ. ‘ಬೇಸಿಗೆ ಮುಂದುವರಿದರೆ ರಾಗಿ ಫಸಲು ಸಮೃದ್ಧವಾಗಿ ಅರಳುತ್ತದೆ. ನಾಲ್ಕು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಹೆಚ್ಚುವರಿ ಖರ್ಚು ಇರದು, ಹೆಚ್ಚಿನ ರಸಾಯನಿಕ ಗೊಬ್ಬರ ನೀಡಬೇಕಿಲ್ಲ. ಬೇಸಿಗೆ ಅವಧಿಯಲ್ಲಿ ರಾಸುಗಳಿಗೆ ಮೇವು ಕೈ ಸೇರುತ್ತದೆ. ಮನೆ ಬಳಕೆಗೆ ಆಹಾರ ಅಗತ್ಯತೆಯನ್ನೂ ನೀಗುತ್ತದೆ’ ಎನ್ನುತ್ತಾರೆ ಬೇಸಾಯಗಾರರು.

ಕೃಷಿ ಇಲಾಖೆಯು ರಾಗಿಯ ಜಿಪಿ 28 ಹೈಬ್ರಿಡ್ ತಳಿಯನ್ನು ಪರಿಚಯಿಸಿದೆ. ಇದು 110 ದಿನದಲ್ಲಿ ಕಟಾವಿಗೆ ಬರಲಿದೆ. ತಾಪಮಾನ ಹೆಚ್ಚಿದಷ್ಟು ಬೆಳೆ ವೇಗವಾಗಿ, ಕೀಟಬಾಧೆ ಇಲ್ಲದೆ ರೈತರ ಕೈಸೇರುತ್ತದೆ. ಬಾವಿ ನೀರು ಬಳಿಸಿಕೊಂಡು 2 ಎಕರೆಯಲ್ಲಿ ರಾಗಿ ನಾಟಿ ಮಾಡಿದ್ದು, ಮನೆ ಮಂದಿ ಹಾಗೂ ಕೆಲವು ಶ್ರಮಿಕರನ್ನು ಬಳಸಿಕೊಂಡು ಹೊಲದ ನಿರ್ವಹಣೆ ಮಾಡಿದ್ದೇವೆ. ಈ ಬಾರಿ ಉತ್ತಮವಾಗಿ ಫಸಲು ಬರಲಿದೆ ಎನ್ನುತ್ತಾರೆ ಕೃಷಿಕ ಮಹಿಳೆ ಕಂದಹಳ್ಳಿ ರುದ್ರಮ್ಮ.

ಹಿತ ವಾತಾವರಣ: ‘ತಾಪಮಾನ 26 ರಿಂದ 35 ಡಿಗ್ರಿ ತನಕ ಕಂಡುಬಂದಿದೆ. ರಾಗಿ ಬೆಳೆಗೆ ಹಿತಕರ ವಾತಾವರಣ ಇದೆ. ಮಳೆ ಬರುವ ನಿರೀಕ್ಷೆಯೂ ಮೂಡಿಸಿದ್ದು, ಈಗಾಗಲೇ ಬಿತ್ತನೆಯಾದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆದಿದೆ. ಹೆಚ್ಚು ನೀರು ಬೇಡದ ಹಾಗೂ ರೋಗ ರುಜಿನ ಬಾಧಿಸದ ಕಾರಣ ಗ್ರಾಮೀಣ ಭಾಗದ ರೈತರು ಹೆಚ್ಚಾಗಿ ರಾಗಿ ಬಿತ್ತನೆ ಮಾಡುತ್ತಿದ್ದಾರೆ’ ಎಂದು ಗೌಡಹಳ್ಳಿ ರೈತ ಮಹೇಶ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-37-1629458043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.