ಯಳಂದೂರು: ತಾಲ್ಲೂಕಿನ ರಂಗನಾಥಸ್ವಾಮಿ ಮಹಾ ರಥೋತ್ಸವ ಗುರುವಾರ ನಡೆಯುವ ಹಿನ್ನೆಲೆಯಲ್ಲಿ ಪಟ್ಟಣದ ಉಪ ಖಾಜಾನೆ ಕಾರ್ಯಾಲಯದಿಂದ ರಂಗನಾಥನ ಆಭರಣಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಸ್ವಾಮಿಯ ಸೊಂಟಪಟ್ಟಿ, ಡಾಬು, ಕಿರೀಟ ಮೊದಲಾದ ಚಿನ್ನದ ಒಡವೆಗಳನ್ನು ದೇವಾಲಯ ನೌಕರರು ಹಾಗೂ ಕಚೇರಿ ಸಿಬ್ಬಂದಿಗಳು ಪರಿಶೀಲಿಸಿ ದೇವಳಕ್ಕೆ ಸುಗಮವಾಗಿ ತಲುಪಿಸಿದರು.

ಜಿಲ್ಲಾ ಕೇಂದ್ರ ಹಾಗೂ ಯಳಂದೂರು ಬಸ್ ನಿಲ್ದಾಣದಿಂದ ಬಸ್ ಸಂಚರಿಸಲಿವೆ. ಜಿಲ್ಲಾಡಳಿತ ಬೆಟ್ಟಕ್ಕೆ ದ್ವಿಚಕ್ರ ವಾಹನ ಸಂಚಾರ, ಪ್ಲಾಸ್ಟಿಕ್ ಹಾಗೂ ಪ್ರಾಣಿ ಬಲಿ ನಿಷೇಧಿಸಿದೆ. ಗುಂಬಳ್ಳಿ ಚೈನ್ ಗೇಟ್ ಮೂಲಕ ಭಕ್ತರು ಬಸ್ ಮೂಲಕ ದೇಗುಲಕ್ಕೆ ತೆರಳಲು ಅವಕಾಶ ಕಲ್ಪಿಸಿದೆ.

ದೇವಳದಲ್ಲಿ ಜೂ 7ರ ತನಕ ತೆಪ್ಪೋತ್ಸವ ಹಾಗೂ ವಿಶೇಷ ಪೂಜೆ ನಡೆಯಲಿದೆ. ಜಾತ್ರೆಯ ಮೊದಲ ದಿನದಿಂದ ಗರುಡೋತ್ಸವ, ರಾಸ ಕ್ರೀಡೋತ್ಸವ, ಪ್ರಹ್ಲಾದೋತ್ಸವ, ಕುದುರೆ ವೈಯಾಳಿ ಉತ್ಸವ, ಅವಭೃತ ಮಂಗಳಸ್ನಾನ, ಸಂಜೆ ಧ್ವಜಾ ಅವರೋಹಣ, ನರಾಂದೋಳಿಕಾರೋಹಣ ಮಹೋತ್ಸವ, ಗಂಗಾಭಿಷೇಕ, ಅಮ್ಮನವರಿಗೆ ಹರಿದ್ರಾ ಕುಂಕುಮ ಚೂರ್ಣ ಅಲಂಕಾರ, ದ್ವಾದಶ ತಿರುವಾರಾಧನೆ, ಪುಷ್ಪಯಾಗೋತ್ಸವ ಚಂದ್ರ ಮಂಡಲೋತ್ಸವ, ಮಂಟಪೋತ್ಸವ, ಮಹಾಮಂಗಳಾರತಿ, ಸಹಸ್ರ ಕಲಶಾಭಿಷೇಕ, ಮಹಾ ಪ್ರಸಾದ ವಿನಿಯೋಗ, ಪರಿಹಾರ ಸೇವೆ, ಮಂಟಪೋತ್ಸವ, ಜೂನ್ ಮೊದಲ ವಾರ ರಂಗಧಾಮ ಹಾಗೂ ಗಂಗಾಧರೇಶ್ವರ ಸ್ವಾಮಿ ತೆಪ್ಪೋತ್ಸವ ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-37-999220879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.