ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮರಸನ ಕೆರೆಯಲ್ಲಿ ರಂಗಧಾಮನ ಮೊದಲ ದಿನದ ತೆಪ್ಪೋತ್ಸವ ಅಧಿಕ ಜ್ಯೇಷ್ಠ ಶುದ್ಧ ಪೂರ್ಣಿಮಾ ಅನುರಾಧ ನಕ್ಷತ್ರದಲ್ಲಿ ಅಪಾರ ಭಕ್ತರ ಸಡಗರದ ನಡುವೆ ಅದ್ದೂರಿಯಾಗಿ ಆರಂಭವಾಯಿತು.

ಬಿಳಿಗಿರಿ ಬನದಲ್ಲಿ ಕಳೆದ ಮೂರು ದಿನಗಳಿಂದಲೇ ಏಳು ದಿನಗಳ ತೆಪ್ಪೋತ್ಸವಕ್ಕೆ ಸಿದ್ಧತೆ ನಡೆಸಲಾಗಿತ್ತು. ತಳ ಮುಟ್ಟಿದ ಜಲರಾಶಿಯ ಕೊರತೆ ನಡುವೆ ಈ ಬಾರಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು. ಸಂಜೆ ನಾಲ್ಕರ ಸುಮಾರಿಗೆ ದೇವಳ ಸಿಬ್ಬಂದಿ ರಂಗಪ್ಪನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಸಂಜೆ ತೆಪ್ಪಕ್ಕೆ ದೇವರನ್ನು ಕೂರಿಸಿದರು. ಭಕ್ತರ ಜಯಘೋಷಗಳ ನಡುವೆ ಮೊದಲ ದಿನದ ಉತ್ಸವ ಸಾಂಗವಾಗಿ ನೆರವೇರಿತು. ಈ ಸಮಯದಲ್ಲಿ ಹರಕೆ ಹೊತ್ತ ಭಕ್ತರು ಹೂ ಹಣ್ಣು ಸಮರ್ಪಿಸಿ ಧನ್ಯತೆ ಮೆರೆದರು.

ಸಂಜೆ ತೆಪ್ಪೋತ್ಸವಕ್ಕೂ ಮೊದಲು ಹೂಹಾರಗಳ ದಾಳ ಹಾಗೂ ತಳಿರು ತೋರಣಗಳ ಸಾಲಾಂಕೃತ ಪಲ್ಲಕ್ಕಿಗೆ ಶ್ರೀದೇವಿ, ಭೂದೇವಿ ಸಮೇತ ರಂಗಪ್ಪನ ಉತ್ಸವ ಮೂರ್ತಿಗಳಿಗೆ ಗಂಧ ಚಂದನ ಲೇಪಿಸಿ, ಸುಗಂಧ ಕಡ್ಡಿಗಳಿಂದ ಅರ್ಚಿಸಿ, ಆರತಿ ಬೆಳಗುತ್ತಿದ್ದಂತೆ ದಾಸರು ಶಂಖನಾದ ಮೊಳಗಿಸಿದರು. ಅರ್ಚಕರು ಮಂಗಳವಾದ್ಯದ ಸದ್ದಿನ ನಡುವೆ ತೀರ್ಥ ಮಂತ್ರ ಪ್ರೋಕ್ಷಿಸಿ ಸ್ಥಳೀಯರ ನೆರವಿನಿಂದ ನಿಧಾನವಾಗಿ ತೆಪ್ಪವನ್ನು ಸುತ್ತಿಸಿದರು. ಈ ಸಮಯ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತು.

ಏ.30 ರಂದು ದೊಡ್ಡ ತೇರಿನ ಮಹೋತ್ಸವ ಜರುಗಿತ್ತು. ನಂತರ ಧಾರ್ಮಿಕ ಕಾರ್ಯಗಳು ನಡೆದವು. ಮೇ 31ರಿಂದ ಜೂ.6ರ ತನಕ ರಂಗಸ್ವಾಮಿ ತೆಪ್ಪೋತ್ಸವ ಹಾಗೂ ಕೊನೆಯ ದಿನ ಗಂಗಾಧರೇಶ್ವರ ತೆಪ್ಪೋತ್ಸವ ಆಚರಣೆಯೊಂದಿಗೆ ವರ್ಷದ ಕೊನೆಯ ದೇವತಾ ಕಾರ್ಯ ಮುಗಿಯುತ್ತದೆ ಎಂದು ಆಗಮಿಕ ರವಿಕುಮಾರ್ ಮಾಹಿತಿ ನೀಡಿದರು.

ಜೂ.7 ರಂದು ಗಂಗಾಧರೇಶ್ವರ ತೆಪ್ಪ: ಪ್ರತಿ ವರ್ಷ 7 ದಿನಗಳ ಕಾಲ ರಂಗನಾಥಸ್ವಾಮಿ ಮತ್ತು ಕೊನೆಯ ದಿನ ಗಂಗಾಧರೇಶ್ವರ ಸ್ವಾಮಿ ತೆಪ್ಪೋತ್ಸವ ಜರುಗುತ್ತದೆ. ಜೂ.6 ರಂದು ನಡೆಯುವ ಸೋಲಿಗರ ತೆಪ್ಪೋತ್ಸವಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಅಂದು ಬುಡಕಟ್ಟು ಜನರು ಆದಿಮ ಸಂಸ್ಕೃತಿಯ ಲೋಕವನ್ನು ಅನಾವರಣ ಮಾಡಲಿದ್ದಾರೆ. ಕಾನನದ ಹೂ, ಎಲೆ, ಬಳ್ಳಿ, ಪಕ್ಷಿಗಳ ಪುಕ್ಕಗಳ ಗರಿಯನ್ನು ಅಲಂಕರಿಸಿಕೊಂಡು ರಂಗನಾಥನಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಿ, ಅಡವಿಯ ಕೆರೆಕಟ್ಟೆಗಳಿಗೆ ಸಮೃದ್ಧ ಮಳೆ ಸುರಿಸುವಂತೆ ಮೊರೆ ಇಡುತ್ತಾರೆ. ತಮ್ಮ ಸಮುದಾಯದ ಕುಸುಮಾಲೆಯನ್ನು ವರಿಸಿದ ಸ್ವಾಮಿಯನ್ನು ರಂಗಭಾವ ಎಂದು ಪೂಜಿಸಿ, ಭಗವಂತನ ಜಲ ವಿವಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸೋಲಿಗ ಮುಖಂಡ ಬೊಮ್ಮಯ್ಯ ಹೇಳಿದರು.

‘ಸಂಕ್ರಾಂತಿ ಜಾತ್ರೆಯಿಂದ ಬ್ರಹ್ಮ ರಥೋತ್ಸವದ ತನಕ ರಂಗನಾಥ ನೂರಾರು ದೈವಿಕ ಲೀಲೆಗಳ ಮೂಲಕ ಭಕ್ತರಿಗೆ ತನ್ನ ಇರುವನ್ನು ಪ್ರಕಟಿಸುತ್ತಾನೆ. ಪತ್ನಿಯರ ಜೊತೆ ಕುಳಿತು ಜಲಸಂಚಾರ ಮಾಡುತ್ತಾನೆ. ಆ ಮೂಲಕ ತನ್ನ ಪರಿವಾರಕ್ಕೆ ಅಭಯ ನೀಡಿ, ವರವನ್ನು ಕರುಣಿಸುತ್ತಾನೆ. ನಾಡಿನ ಸಾವಿರಾರು ಭಕ್ತರು ಮಿಂದು ಮಡಿಯುಟ್ಟು, ಭಕ್ತಿ ಸಮರ್ಪಿಸುವ ಸಂದರ್ಭಕ್ಕೆ ಸೋಲಿಗರು ಮತ್ತು ಸ್ಥಳೀಯ ನಾಯಕ ಸಮುದಾಯ ಸಾಕ್ಷಿಯಾಗುತ್ತಾರೆ’ ಎಂದು ಪಾರುಪತ್ತೆಗಾರ ರಾಜು ಮಾಹಿತಿ ನೀಡಿದರು.

ಸೋಲಿಗರು ಜನಪದ ಕುಣಿತ ಹಾಗೂ ರಂಗಸ್ವಾಮಿ ವಿನೋಧ ಲೀಲಾವಳಿಗಳನ್ನು ಹಾಡುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-37-1209604439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.