ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ಒಡೆಯ ರಂಗನಾಥಸ್ವಾಮಿ ದೇವಳದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಶಯನೋತ್ಸವ ಹಾಗೂ ಏಕಾಂತ ಸೇವೆ ಭಾನುವಾರ ಸಂಪನ್ನಗೊಂಡಿತು.

ಪ್ರತಿ ವರ್ಷ ಸ್ವಾಮಿಗೆ ಚೈತ್ರ ಮಾಸದ ಆರಂಭದಲ್ಲಿ ದೇವರು ವಿಶ್ರಾಂತಿ ಪಡೆಯುವ ಮೊದಲು ಏಕಾಂತ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತದೆ. ರಂಗಪ್ಪನಿಗೆ ವಿಶ್ರಾಂತಿ ನೀಡುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

‘ಏಕಾಂತ ಸೇವೆ ಸಮಯದಲ್ಲಿ ದೇವಳದಲ್ಲಿ ಯಾವುದೇ ಉತ್ಸವ ಮೆರವಣಿಗೆ ಇರುವುದಿಲ್ಲ. ಶನಿವಾರ ರಾತ್ರಿ ಗುಡಿಯಲ್ಲಿ ಶಯನೋತ್ಸವ ಸೇವೆ ಮತ್ತು ಏಕಾಂತ ವಾಸಗಳು ಸಂಪನ್ನಗೊಂಡವು, ಭಾನುವಾರ ಭಕ್ತರಿಗೆ ಎಂದಿನಂತೆ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು, ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು’ ಎಂದು ಅರ್ಚಕ ರವಿಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-37-1274057841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.