ಯಳಂದೂರು: ತಾಲ್ಲೂಕಿನ ಯರಿಯೂರು-ಕೆಸ್ತೂರು ರಸ್ತೆಯ ಶನೀಶ್ವರ ದೇವಾಲಯದ ಬಳಿ ಮಂಗಳವಾರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರನ್ನು ಕಂದಾಯ ಇಲಾಖೆ ಹಾಗೂ ಪೊಲೀಸರು ಬಂಧಿಸಿದ್ದಾರೆ.

ತಲಕಾಡು ಹೋಬಳಿ ಹೊಸ ಕುಕ್ಕೂರು ಗ್ರಾಮದ ಮಖ್ಸೂದ್ ಪಾಷಾ, ನೈಯಿಮ್ ಪಾಷ ಹಾಗೂ ಕುಮಾರಸ್ವಾಮಿ ಅಕ್ಕಿ ಸಾಗಣೆ ಮಾಡುತ್ತಿದ್ದವರು.

ಮೂವರು 460 ಕೆ.ಜಿ ತೂಕದ ಪಡಿತರ ಅಕ್ಕಿಯನ್ನು ತಾಲ್ಲೂಕಿನ ಬೂದಿತಿಟ್ಟು, ಮದ್ದೂರು ಗ್ರಾಮಗಳಲ್ಲಿ ಸಂಗ್ರಹಿಸಿ ಓಮ್ನಿ ವಾಹನದಲ್ಲಿ ಸಾಗಣೆ ಮಾಡುತ್ತಿದ್ದರು. ಆಹಾರ ನಿರೀಕ್ಷಕ ಬಿಸಿಲಯ್ಯ ಹಾಗೂ ಪಿಎಸ್ಐ ಆಕಾಶ್, ಹೆಡ್ ಕಾನ್ಸ್ಟೆಬಲ್ ನಾಗೇಂದ್ರ, ಕಾನ್ಸ್ಟೆಬಲ್ ಜಡೇಸ್ವಾಮಿ, ಸಂಪತ್ ಕಾರ್ಯಾಚರಣೆ ನಡೆಸಿದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-37-161485380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.