ಯಳಂದೂರು: ಬಿಸಿಲ ಬೇಗೆಗೆ ಧರಣಿ ಮತ್ತೆ ಬಿಸಿ ಕಾರತೊಡಗಿದೆ. ನೆಲ, ಗಾಳಿ, ಸೂರ್ಯನ ಶಾಖಕ್ಕೆ ಜನಜೀವನ ತತ್ತರಿಸಿದೆ. ಮನೆ ಯಿಂದ ಹೊರಗೆ ಪ್ರವಾಸಿಗರು ನಿರಾಸಕ್ತಿ ತೋರುತ್ತಿದ್ದು ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಗದ್ದಲ ಕಾಣುತ್ತಿಲ್ಲ.

ರಾಜ್ಯದ ಊಟಿ ಎಂದೇ ಪ್ರಖ್ಯಾತವಾಗಿರುವ ಜೀವವೈವಿಧ್ಯತೆಯ ತಾಣವಾಗಿರುವ ಬಿಳಿಗಿರಿರಂಗನ ಬನದಲ್ಲೂ ಬಿಸಿಲ ದಗೆ ಹೆಚ್ಚಾಗಿದ್ದು ಕಾಡೊಳಗಿನ ಜೀವಜಲ ತಳ ಸೇರುತ್ತಿದೆ. ಕಾಡಂಚಿನ ಕೃಷ್ಣಯ್ಯನ ಅಣೆಕಟ್ಟೆ, ಬೆಲ್ಲತ್ತ ಮತ್ತು ಹೊಸಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. ವರ್ಷಪೂರ್ತಿ ನಳನಳಿಸುತ್ತಿದ್ದ ಸಣ್ಣಪುಟ್ಟ ಜಲಾವರಗಳಲ್ಲಿ ನೀರಿನ ಒರತೆಯು ಕಡಿಮೆಯಾಗಿದೆ.

ಕೆರೆ ಕಟ್ಟೆಗಳ ಸುತ್ತಲೂ ಅಡ್ಡಾಡುತ್ತಿದ್ದ ವನ್ಯಜೀವಿಗಳು, ಬಾನಾಡಿಗಳು ಅಷ್ಟಾಗಿ ಕಾಣ ಸಿಗುತ್ತಿಲ್ಲ. ಪರಿಣಾಮ ಕಾನನದ ದಾರಿಗುಂಟ ಕೆರೆ ಕಟ್ಟೆಗಳ ಸುತ್ತಮುತ್ತ ಸುಳಿದಾಡುತ್ತಿದ್ದ ಜಿಂಕೆ, ಕಾಟಿ, ನವಿಲು ನೋಡಿ ವೀಕ್ಷಿಸಿ ಸಂಭ್ರಮಿಸುದ್ದ ನಿಸರ್ಗಪ್ರಿಯರು ಈ ಬಾರಿ ಸುಳಿಯುತ್ತಿಲ್ಲ.

‘ಹಸಿರು ಚಲ್ಲುತ್ತಿದ್ದ ಮರ-ಗಿಡಗಳು ಒಣಗಿದ್ದು ಮಳೆರಾಯನ ಆಗಮನಕ್ಕಾಗಿ ಕಾದಿವೆ. ಬೇಸಿಗೆಯ ರಜಾ ಮಜಾ ಅನುಭವಿಸುವ ಸಮಯದಲ್ಲಿ ಬಿಸಿಲು ಬಾಧಿಸುತ್ತಿದ್ದು ಪ್ರವಾಸಿಗರ ಸಂಖ್ಯೆ ಕ್ಷೀಣವಾಗಲು ಕಾರಣವಾಗಿದೆ. ನೀರು ನೆರಳಿನ ಆಶ್ರಯದಲ್ಲಿ ಪ್ರಕೃತಿಯ ಸೊಬಗು ಪರಿಚಯ ಮಾಡಿಕೊಂಡು ಹೋಗುತ್ತಿದ್ದವರು ಕಡಿಮೆಯಾಗಿದ್ದಾರೆ. ಕಾಡಿನ ಬೆಳೆವೈವಿಧ್ಯ, ಬುಡಕಟ್ಟು ಜನರ ಹಾಡು, ಹಸೆ, ನೃತ್ಯ ವೈಭವ, ಆಚಾರ ವಿಚಾರಗಳನ್ನು ಹತ್ತಿರದಿಂದ ನೋಡುವ ಪ್ರಯತ್ನ ಮಾಡುತ್ತಿದ್ದ ಪೇಟೆ ಮಂದಿಯೂ ಈ ಬಾರಿ ಹೆಚ್ಚು ಸುಳಿಯುತ್ತಿಲ್ಲ ಎನ್ನುತ್ತಾರೆ ಗಿಡ ಮೂಲಿಕೆ ತಜ್ಞ ಬೊಮ್ಮಯ್ಯ.

‘ಜಲತಾಣಗಳ ಸುತ್ತಲೂ ವಿಶ್ರಾಂತಿ ಪಡೆಯಲು ಪ್ರವಾಸಿಗರಿಗೆ ಸೌಲಭ್ಯಗಳು ಸಮರ್ಪಕವಾಗಿಲ್ಲ. ಅಣೆಕಟ್ಟೆಗಳ ಸುತ್ತಮುತ್ತ ಹರಡಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಕಪ್ಪುಚುಕ್ಕೆಯಾಗಿವೆ’ ಎನ್ನುತ್ತಾರೆ ಮೈಸೂ ರಿನ ಪ್ರವಾಸಿ ಸುಹೇಲ್ ಅಮ್ಮದ್.

ಮೈದುಂಬದ ಜಲಾವರಣ: ಏಪ್ರಿಲ್ ಹಾಗೂ ಮೇ ಸಮಯದಲ್ಲಿ ಮಳೆಯಾಗಿದ್ದರೆ ಪರಿಸರದಲ್ಲಿ ಸುಂದರ ಸೊಬಗು ಮೂಡುತ್ತಿತ್ತು. ಬೇಸಿಗೆ ಸಂಭ್ರಮ ಹೆಚ್ಚಾಗುತ್ತಿತ್ತು. ಮಕ್ಕಳು ಅಜ್ಜ–ಅಜ್ಜಿ ಮನೆಗೆ ಬಂದು ಮಿಂದೆದ್ದು ಸಂಭ್ರಮಿಸುತ್ತಿದ್ದರು. ಈ ಬಾರಿ ಬಿರು ಬಿಸಿಲಿನ ಕಾರಣಕ್ಕೆ ಬೇಸಿಗೆ ರಜೆ ಕಳೆಯಲು ಮೊಮ್ಮಕ್ಕಳು ತಾತನ ಮನೆಗೆ ಬರುವುದು ಕಡಿಮೆಯಾಗಿದೆ ಎನ್ನುತ್ತಾರೆ ಪಟ್ಟಣದ ರಜತ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-37-433727207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.