ಯಳಂದೂರು: ‘ಮಾವು ನಾವು, ಬೇವು ನಾವು, ನೋವು ನಲಿವು ನಮ್ಮವು: ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು’ ಎಂದು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಯುಗಾದಿ ಕಲಿತೆ ಹಬ್ಬದ ಸಿದ್ಧತೆಯನ್ನು ಧ್ವನಿಸುತ್ತದೆ. ಇದೇ ಸಮಯದಲ್ಲಿ ತಾಲ್ಲೂಕಿನ ಬನ ವನದದ ನಿಸರ್ಗವೂ ಹೊಸ ನೀರಲ್ಲಿ ತೋಯ್ದಂತೆ ತನ್ನ ತುಂಬಾ ಹೂಗಳನ್ನು ಮುಡಿದು ಹಬ್ಬದ ಸಿದ್ಧತೆ ನಡೆಸಿದೆ.

ಹೊಸ ವರ್ಷದ ಮುನ್ನುಡಿಯಾಗಿ ಜನಪದರು ಬೇವು ಬೆಲ್ಲವನ್ನು ಮೆಲ್ಲುತ್ತ ಯುಗಾದಿಗೆ ಚಾಲನೆ ನೀಡುವ ಸಂಭ್ರಮ ಊರು ಕೇರಿಗಳಲ್ಲೂ ಮೇಳೈಸಿದೆ.

ತಾಲ್ಲೂಕಿನಲ್ಲಿ ಶಿಶಿರ ಋತುವಿನಿಂದ ವಸಂತಾಗಮನದ ತನಕ ತರುಲತೆಗಳು ವೈಭವದಿಂದ ಮೊಗ್ಗು, ಎಲೆಗಳನ್ನು ಚಿಗುರಿಸುತ್ತ ನವೋಲ್ಲಾಸ ತುಂಬಿದೆ. ಬಿಳಿಗಿರಿ ಕಾಡುಗಳ ವನಗಳಲ್ಲಿ ಮೆಲ್ಲಗೆ ಚಿಗುರುವ ಹೂ ತೋರಣವನ್ನು ದುಂಬಿ, ಜೇನು, ಚಿಟ್ಟೆಗಳು ಸ್ಪರ್ಶಿಸಿ ಪರಾಗಸ್ಪರ್ಶಕ್ಕೆ ಕಾರಣವಾದರೆ, ಇಲ್ಲಿನ ಜೀವಾವಾರದ ವನ್ಯ ಜೀವಿಗಳು ವಸಂತ ಚೈತ್ರ ವನದಲ್ಲಿ ಹಸಿರು ಚಲ್ಲುವ ಪರಿಯನ್ನು ಕಂಡು ಸಂಭ್ರಮಿಸಿವೆ.

‘ಚೈತ್ರ ಮಾಸ ಹೊತ್ತು ಬರುವ ಯುಗಾದಿಗೆ ಊರು ಕೇರಿಗಳನ್ನು ಅಲಂಕರಿಸಬೇಕಿಲ್ಲ. ಹಾದಿ ಬದಿಯ ಕಿರು ಲತೆಗಳು, ಸುರಗಿ, ಬೂರಗ, ಕೆಂಡೆ, ಕಿಂಚಗ, ಕಕ್ಕೆ, ದೊಳ್ಳಿ ವೃಕ್ಷಗಳಲ್ಲೂ ಬಣ್ಣಬಣ್ಣದ ಹೂಗಳು ಅರಳಿ ಹಬ್ಬದ ಸಂತಸವನ್ನು ಹಿಮ್ಮಡಿಸಿವೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ದಾರಿಗುಂಟ ಹೂ ಅರಳಿಸುವ ಹೊಂಬಣ್ಣದ ತುತ್ತೂರಿ ಪುಷ್ಪಗಳೇ ಹಬ್ಬದ ವೈಭವವನ್ನು ಕಟ್ಟಿಕೊಡುತ್ತದೆ’ ಎನ್ನುತ್ತಾರೆ ಚಿಂತಕ ಅಂಬಳೆ ನಾಗೇಶ್.

ಮಾದಪ್ಪನ ಮಲೆಯತ್ತ ನೋಟ: ‘ಯುಗಾದಿ ಎಂದರೆ ಬರೀ ಹಬ್ಬವಷ್ಟೇ ಅಲ್ಲ. ಅದು ಮದಪ್ಪನನ್ನು ಕಾಣುವ ತವಕವೂ ಹೌದು. ಕಪ್ಪಡಿ ಜಾತ್ರೆಗೆ ತೆರಳಿ ಹರಕೆ ಒಪ್ಪಿಸುವ ಸಮಯವೂ ಆಗಿದೆ. ಯುಗಾದಿ ಜಾತ್ರೆಗೂ ಒಂದು ವಾರ ಇರುವಂತೆ ಊರು ತೊರೆಯುವ ಮನೆ ಮಂದಿ ಮಹದೇಶ್ವರನನ್ನು ಆರಾಧಿಸುತ್ತಾರೆ. ಬನದಿಂದ ಬರಿಗಾಲಲಲ್ಲಿ ಮನೆ ತನಕ ನಡೆದು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸದ ನಂತರವೇ ಯುಗಾದಿ ಆರಂಭ ಆಗುತ್ತದೆ’ ಎಂದು ಭಕ್ತ ಗೂಳಿಪುರ ಕಪಿನಿನಾಯಕ್ ಹೇಳುತ್ತಾರೆ.

‘ಮನೆ ಮಂದಿ ಕಾವೇರಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿ ನಂತರ ಮನೆ ಸೇರುತ್ತೇವೆ. ಬೇವು ಬೆಲ್ಲ ಸವಿದು, ಇಷ್ಟಾರ್ಥ ಸಿದ್ಧಿಗಾಗಿ ಮನೆ ದೇವರನ್ನು ಪ್ರಾರ್ಥಿಸುತ್ತೇವೆ. ಹೊಸ ಕೆಲಸಗಳನ್ನು ಆರಂಭಿಸಲು ಯುಗಾದಿಗಾಗಿ ಕಾಯುವ ಪರಿಪಾಠ ಇನ್ನೂ ಇದೆ. ಮನೆಗೆ ಹೊಸನೀರು ತಂದು ಪೂಜಿಸುವ ತವಕದಲ್ಲಿ ಮಹಿಳೆಯರು ಇದ್ದರೆ, ಮಕ್ಕಳು ಹೊಸ ಬಟ್ಟೆ ಧರಿಸಿ ಊರೊಟ್ಟಿನ ಹಬ್ಬದಲ್ಲಿ ಭಾಗವಹಿಸುವ ಸಂಭ್ರಮದಲ್ಲಿ ಇದ್ದಾರೆ’ ಎನ್ನುತ್ತಾರೆ ಪಟ್ಟಣದ ಶ್ರೀನಿವಾಸ್.

ಗ್ರಾಮೀಣ ಭಾಗದಲ್ಲಿನ ಮತ್ತೊಂದು ವಿಶೇಷ ಎಂದರೆ ಯುಗಾದಿ ಜೂಜು. ಊರ ಹೊರಗಿನ ಮರದ ನೆರಳಿನಲ್ಲಿ, ಹಳೇ ಕಟ್ಟಡಗಳ ಜಗಲಿಗಳಲ್ಲಿ, ಹೊಳೆ ದಂಡೆಗಳಲ್ಲಿ ಜೂಜಿನದ್ದೇ ಸದ್ದು ಜೋರಾಗಿರುತ್ತದೆ. ಪೊಲೀಸರ ದಾಳಿಯ ಭೀತಿಯ ನಡುವೆಯೂ ಜೂಜಾಟ ಜೋರಾಗಿಯೇ ನಡೆದಿರುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-37-745687259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.