ಯಳಂದೂರು: ಮಳೆ ಕಾಡುಗಳಲ್ಲಿ ನೀರಿನ ಒರತೆ ಕ್ಷೀಣವಾಗಿದ್ದು, ಬಿಳಿಗಿರಿ ರಂಗನಬೆಟ್ಟದಲ್ಲಿರುವ ಸಣ್ಣ ಜಲಪಾತಗಳ ಸಂಗೀತ ಸದ್ದು ಕೇಳದಾಗಿದೆ. ಕೆರೆ–ಕಟ್ಟೆಗಳ ಬಳಿ ಜಲಜೀವಿಗಳು ಕೆಸರಲ್ಲಿ ಮುಖ ನೋಡಿಕೊಳ್ಳುವಂತಾಗಿದೆ. ಜೀವ ಜಲದ ಪ್ರಮಾಣ ಕುಸಿತವಾಗಿದೆ. ವರುಣನ ಆಗಮನಕ್ಕೆ ಎಲ್ಲ ಕಾದು ಕುಳಿತಿವೆ.

ತಾಲ್ಲೂಕಿನಲ್ಲಿ ಕೆರೆ ಕಟ್ಟೆಗಳು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ತೇವಾಂಶದ ಹವೆಯು ಜೀವ ಪರಿಸರವನ್ನು ಪೊರೆಯುತ್ತಿವೆ. ಪ್ರತಿ ವರ್ಷ ಮಾನ್ಸೂನ್ ಮಳೆಗಳ ವ್ಯತ್ಯಯ ಹಾಗೂ ಮಳೆ ನೀರು ಭೂಮಿಗೆ ಸೇರುತ್ತಿಲ್ಲ. ಹೀಗಾಗಿ ಅಣೆಕಟ್ಟೆಗಳು, ಹೊಳೆ, ಕಾಲುವೆ, ಕೆರೆಗಳಲ್ಲಿ ಜೀವ ಜಲ ಕುಸಿಯುತ್ತಿದೆ. ಹೂಳು ತುಂಬಿಕೊಳ್ಳುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆಗೆ ಹಾಗೂ ಜಲ ಸಾಕ್ಷರತೆಯ ಕಡೆಗೆ ಒಲವು ಕುಸಿದಿದೆ.

‘ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಇರುವ ಕೆರೆ–ಹಳ್ಳಗಳಲ್ಲಿ ಕಳೆ ಸಸ್ಯಗಳು ತುಂಬಿವೆ. ಜಲಾವರಗಳು ಸೊರಗಿವೆ, ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಈ ಸಮಸ್ಯೆ ನೀಗಿದರೆ ಮಾತ್ರ ಮೀನು ಕೃಷಿ, ಕೃಷಿಗೆ ನೀರು, ಮನರಂಜನೆ ಹಾಗೂ ಪ್ರವಾಸದ ಉದ್ದೇಶಗಳಿಗೂ ಬಳಸಬಹುದು’ ಎನ್ನುತ್ತಾರೆ ಪರಿಸರ ಪ್ರಿಯರು.

ಬಿಳಿಗಿರಿಬನದ ಸೋಲಿಗರು ನೀರಿನ ಚಿಲುಮೆ, ಝರಿ, ನೀರಿನ ಬುಗ್ಗೆ ಮತ್ತು ಸಣ್ಣಪುಟ್ಟ ಒರತೆಗಳಲ್ಲಿ ಸಂಗ್ರಹವಾಗುವ ಶುದ್ಧ ನೀರು ಸೇವಿಸುತ್ತಾರೆ. ಕಾಡ್ಗಿಚ್ಚಿನ ಸಮಯದಲ್ಲಿ ವನ್ಯ ಜೀವಿಗಳಿಗೆ ತೊರೆ ಮತ್ತು ಹಳ್ಳ ಕೊಳ್ಳಗಳು ದಾಹ ನೀಗಿಸುತ್ತವೆ. ಈಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಬೇಸಿಗೆಗೆ ಮುನ್ನವೇ ಸಮಸ್ಯೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಹಾಡಿಯ ಮುಖಂಡ ಬೊಮ್ಮಯ್ಯ.

ಮಳೆ ನೀರು ಹಿಂಗಿಸಿ: ಅಂತರ್ಜಲ ವೃದ್ಧಿಸಿ

‘ಜಿಲ್ಲೆಯು ವಿಶಿಷ್ಟ ಹವಾಗುಣ ಹೊಂದಿದ್ದು ಬೆಟ್ಟದ ಸಾಲಿನಲ್ಲಿ 10 ರಿಂದ 35 ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುತ್ತದೆ. ಬನದ ಎತ್ತರ ಹೆಚ್ಚಿದಂತೆಲ್ಲ ತಾಪಮಾನ ಕುಸಿದು ತಂಪಾದ ಹವಾಗುಣ ಕಾಣಬಹುದು. ಸರಾಸರಿ ಮಳೆ ಪ್ರಮಾಣ 100-150 ಸೆಂ.ಮೀ ಇದ್ದು, ನೈರುತ್ಯ ಮತ್ತು ಮಾನ್ಸೂನ್ ಋತುಗಳಲ್ಲಿ ಮಳೆ ಪಡೆಯುತ್ತದೆ. ಪ್ರತಿವರ್ಷ ಬಿದ್ದ ಮಳೆಯನ್ನು ಹೊಲ, ಗದ್ದೆ ಹಾಗೂ ಜಲಾವರಗಳಲ್ಲಿ ಇಂಗಿಸಬೇಕು’ ಎನ್ನುತ್ತಾರೆ ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-37-1898665195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.