ಯಳಂದೂರು: ‘ಪರಿಸರ ಎಂಬುದು ಭೂಮಿಯ ಹುಟ್ಟಿನೊಂದಿಗೆ ಜನಿಸಿದೆ. ಇದರ ಮೇಲಿನ ಅತಿಯಾದ ಹಸ್ತಕ್ಷೇಪದಿಂದ ಜೀವಜಾಲದ ನಂಟು ಶಿಥಿಲವಾಗುತ್ತಾ ಸಾಗುತ್ತಿದೆ’ ಎಂದು ಉಪ ವಲಯ ಅರಣ್ಯ ಅಧಿಕಾರಿ ಸಂತೇಮರಹಳ್ಳಿ ಬಿ.ಅನಂತರಾಮು ಅಭಿಪ್ರಾಯಪಟ್ಟರು.

ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಶನಿವಾರ ಸಂಜೆ ಗಾಯತ್ರಿ ಬಳಗದ ಸದಸ್ಯರು ಆಯೋಜಿಸಿದ್ದ ಜೈವಿಕ ಸಂರಕ್ಷಣಾ ದಿನದ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಇಲ್ಲಿನ ಘಟ್ಟ ಪ್ರದೇಶಗಳು ಮನುಕುಲಕ್ಕೆ ಬೇಕಾದ ಜೀವವಾಯುವನ್ನು ಪೂರೈಸುತ್ತಲೇ ಬಂದಿವೆ. ನೂರಾರು ವನ್ಯ ಜೀವಿಗಳು, ಏಷ್ಯಾದಲ್ಲಿ ಮಾನ್ಯತೆ ಪಡೆದ ವ್ಯಾಘ್ರ ಹಾಗೂ ಆನೆಗಳು ಇಲ್ಲಿನ ಸುಂದರ ಆವಾಸ ಪೊರೆಯುವುದರ ಜೊತೆಗೆ ಅಪರೂಪದ ಸಸ್ಯ ವರ್ಗಗಳನ್ನು ಪೋಷಿಸುತ್ತ ಬಂದಿವೆ. ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾಲೂ ಇದೆ. ಹಾಗಾಗಿ, ಮುಂದಿನ ಪೀಳಿಗೆಗೂ ಜೀವ ಜಗತ್ತಿನ ವಿಸ್ಮಯಗಳ ಪಾಠ ತಿಳಿಸುವ ಕೆಲಸ ಈಗಿಂದಲೇ ಆರಂಭಿಸಬೇಕು ಎಂದರು.

ಗಾಯತ್ರಿ ಬಳಗದ ಸದಸ್ಯರಾದ ಸೇತು, ರಘುನಾಥ್, ನಾರಾಯಣರಾವ್, ಫಣೀಶ್, ಶ್ರೀಧರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-37-2026717243

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.