ಯಳಂದೂರು: ತಾಲ್ಲೂಕಿನ ಕಾಡಂಚಿನ ಪ್ರದೇಶಗಳ ಕೃಷ್ಣಯ್ಯನ ಕಟ್ಟೆ ಹಾಗೂ ಆಂಜನೇಯ ದೇವಸ್ಥಾನಗಳ ಸುತ್ತಮುತ್ತ ಸಾವಿರಾರು ಭಕ್ತರು ಶನಿವಾರ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಹರಿಸೇವೆ ನಡೆಸಿ ಅನ್ನದಾನ ಪ್ರಸಾದ ಸೇವೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಮುಂಜಾನೆಯಿಂದಲೇ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಹರಕೆ ಹೊತ್ತ ಭಕ್ತರು ರಂಗನಾಥ ಸ್ವಾಮಿಯ ಹೆಸರಿನಲ್ಲಿ ಸಿಹಿ ಊಟ ಮಾಡಿ ಪೂಜೆ ಸಲ್ಲಿಸಿ ಮೊದಲ ಅನ್ನ ಪ್ರಸಾದವನ್ನು ದೇವರಿಗೆ ಅರ್ಪಿಸಿದರು. ವಿಶೇಷವಾಗಿ ಕೋಳಿ ಕುರಿಗಳನ್ನು ದೈವಗಳಿಗೆ ಬಿಟ್ಟವರು ದೇವರ ತೀರ್ಥವನ್ನು ಸಿಂಚನ ಮಾಡಿ, ಮಾಂಸದೂಟ ತಯಾರಿಸಿ ಸವಿದರು. ಮಾಂಸದ ಬಗೆಬಗೆ ಖಾದ್ಯಗಳನ್ನು ಸ್ವೀಕರಿಸಲು ಭಕ್ತರು ಮುಗಿಬಿದ್ದರು.

‘ದೇವರ ಹೆಸರಿನಲ್ಲಿ ಹರಕೆ ಒಪ್ಪಿಸುವವರು ನೆಲದ ಮೇಲೆ ರಂಗನಾಥನ ಚಿತ್ರವನ್ನು ರಚಿಸಿ ಸ್ಥಳದಲ್ಲಿ ಪೂಜೆ ಸಲ್ಲಿಸಿ ವಿಶೇಷ ಊಟ ತಯಾರಿಸಿ ಸಂಪ್ರದಾಯವನ್ನು ನೆರವೇರಿಸುತ್ತಾರೆ’ ಎಂದು ಭಕ್ತ ಪಟ್ಟಣದ ಶ್ರೀನಿವಾಸ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-37-510925726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.