ಯಳಂದೂರು: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ರೋಹಿಣಿ ಮಳೆ ಸುರಿಯಿತು.

ಬೆಳಗ್ಗಿನಿಂದ ಮಧ್ಯಾಹ್ನದ ತನಕ ಉಷ್ಣಾಂಶದ ಹೆಚ್ಚಳದಿಂದ ಬಸವಳಿದಿದ್ದ ಜನರು ವರ್ಷಧಾರೆಯಿಂದ ನಿಟ್ಟುಸಿರು ಬಿಟ್ಟರು. ಬಿಸಿಲಿಗೆ ಕಾದಿದ್ದ ನೆಲ ತಂಪು ತುಂಬಿಕೊಂಡು ಚಳಿಯ ಕಚಗುಳಿ ಇಟ್ಟಿತು. ಮಧ್ಯಾಹ್ನ ತುಂತುರು ಮಳೆ ಸುರಿಯಿತು, 3ರ ಸುಮಾರಿಗೆ ಮೋಡ ಮುಸುಕಿದ ವಾತಾವರಣ ಕಂಡುಬಂದಿತು, ಸಿಡಿಲು, ಗುಡುಗಿನ ಅಬ್ಬರದೊಡನೆ ಮಳೆ ಬಿಟ್ಟು ಬಿಟ್ಟು ಸುರಿಯಿತು. ಹೊಲ ಗದ್ದೆಗಳಿಗೆ ತೆರಳಿದ್ದ ಶ್ರಮಿಕರು, ಜನ ಮತ್ತು ಜಾನುವಾರು ಸಾಕಣೆದಾರರು ಮಳೆಯ ನಡುವೆ ಮನೆ ಸೇರಿದರು. ನಗರ, ಪಟ್ಟಣಗಳತ್ತ ತೆರಳುವ ನೌಕರರು ಮಳೆ ನಡುವೆ ಬಸ್ ಏರಿದರು. ವಿದ್ಯಾರ್ಥಿಗಳು ಸಂಜೆ ಮಳೆಯಿಂದ ಮನೆಗೆ ತೆರಳಲು ಪ್ರಾಯಾಸಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-37-679707024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.