ಯಳಂದೂರು: ಉಪ್ಪಾರ ಸಮುದಾಯದ ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮುದಾಯಗಳಲ್ಲೂ ದಾರ್ಶನಿಕರು ಜನ್ಮ ತಾಳಿದ್ದಾರೆ. ಸದ್ಗುಣ, ಸಮಾನತೆ. ಶಿಕ್ಷಣದ ಮಹತ್ವ ಸಾರಿದ್ದಾರೆ. ಭಗೀರಥರು ಈ ದೆಸೆಯಲ್ಲಿ ಉಪ್ಪಾರರ ಸ್ಫೂರ್ತಿಗೆ ಬೆಳಕಾಗಿದ್ದಾರೆ. ಸಮುದಾಯ ಪೋಷಕರು ಮಕ್ಕಳನ್ನು ಉನ್ನತ ಕಲಿಕೆಯಲ್ಲಿ ತೊಡಗಿಸಬೇಕು. ಈ ದೆಸೆಯಲ್ಲಿ ಸರ್ಕಾರದ ನೆರವು ಪಡೆಯಬೇಕು. ಈ ದೆಸೆಯಲ್ಲಿ ಉಪ್ಪಾರ ಪರಂಪರೆ ಮತ್ತು ಸಂಸ್ಕೃತಿ ಉಳಿಸುವ ದೆಸೆಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ ಗೋವಿಂದರಾಜು ಮಾತನಾಡಿ, ‘ಭಗೀರಥ ಮನುಕುಲದ ಉದ್ಧಾರಕ್ಕೆ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಇಳಿಸಿದರು. ಮಹರ್ಷಿಯ ಹಠ ಮತ್ತು ನೇಮ ನಿಷ್ಠೆಗೆ ಒಲಿದ ಶಿವನು ಗಂಗೆಯನ್ನು ಜನ ಕಲ್ಯಾಣಕ್ಕೆ ಬಳಸುವಂತೆ ವರ ನೀಡಿದನು. ಹೀಗೆ, ಜೀವ ಜಗತ್ತಿನ ಉದ್ಧಾರಕ್ಕೆ ತನುಮನವನ್ನು ಮುಡಿಪಾಗಿಟ್ಟ ಭಗೀರಥರ ಪ್ರಯತ್ನಗಳನ್ನು ಇಂದಿನ ಸಮಾಜದ ಸದಸ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಬದುಕಿನಲ್ಲಿ ಸಮುದಾಯದ ಜನರು ದೈವತ್ವಕ್ಕೆ ಏರುವ ಅವಕಾಶ ಸೃಷ್ಟಿಸಿಕೊಳ್ಳಬೇಕು. ಕಂದಾಚಾರ, ಅರ್ಥರಹಿತ ಆಚರಣೆಗಳನ್ನು ತೊರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ದೆಸೆಯಲ್ಲಿ ಸಮಾಜ ಚಿಂತಸಬೇಕು ಎಂದು ಹೇಳಿದರು.

ಸಾವಿರಾರು ಸಂಘ-ಸಂಸ್ಥೆಗಳ ಸದಸ್ಯರು ಕಲಾ ತಂಡಗಳ ನಡುವೆ ಸತ್ತಿಗೆ ಸೂರಿಪಾನಿ ಹೊತ್ತು ಭಗೀರಥರ ಭಾವಚಿತ್ರವನ್ನು ಅಲಂಕೃತ ಸರೋಟಿನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ತಹಶೀಲ್ದಾರ್ ಎಸ್.ಎಲ್. ನಯನಾ, ಬಿಇಒ ಎಂ. ಮಾರಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಮುಖಂಡರಾದ ಜೆ,ಯೋಗೇಶ್, ಕಿನಕಳ್ಳಿ ಸಿದ್ದರಾಜು, ಸಮಾಜದ ಯಜಮಾನರು , ವಿವಿಧ ಗ್ರಾಮಗಳಿಂದ ಬಂದಿದ್ದ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-37-804742772

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.